ಬಸ್ ನಿಲ್ದಾಣದೊಳಕ್ಕೆ ಮಳೆ ನೀರು ನುಗ್ಗದಂತೆ ಕ್ರಮವಹಿಸಲು ಜೆಡಿಎಸ್ ಆಗ್ರಹ

0
165

ಕೊಟ್ಟೂರು: ಅನಾಹುತ ಸಂಭವಿಸುವ ಮೊದಲು ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದೊಳಕ್ಕೆ ಮಳೆನೀರು ನುಗ್ಗದಂತೆ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆ ತಡೆಯಬೇಕು ಎಂದು ಜೆಡಿಎಸ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಡಾ. ತಿಪ್ಪೇಸ್ವಾಮಿ ವೆಂಕಟೇಶ ಎಚ್ಚರಿಕೆ ನೀಡಿದರು.

ಸೋಮವಾರ ಜೆಡಿಎಸ್ ಕಾರ್ಯಕರ್ತರೊಂದಿಗೆ ಬಸ್ ನಿಲ್ದಾಣಕ್ಕೆ ಆಗಮಿಸಿ. ನಿಲ್ದಾಣ ನಿಯಂತ್ರಕ ಜಹಾಂಗೀರ್ ಮಳೆ ನೀರಿಗೆ ಜಲಾವೃತವಾಗುವ ಬಸ್ ನಿಲ್ದಾಣದ ಬಗ್ಗೆ ತರಾಟೆಗೆ ತೆಗೆದುಕೊಂಡರು.

ನಿಲ್ದಾಣದ ಮುಂದಿನ ಕಾಲುವೆ ಮಳೆಬಂದಾಗ ತುಂಬಿ ಹರಿಯುತ್ತದೆ. ಆಕಸ್ಮಿಕವಾಗಿ ನೀರೆಂದು ಕಾಲಿಟ್ಟರೆ ನೀರಿನಲ್ಲಿ ಕೊಚ್ಚಿಹೋಗುದಂತು ಗ್ಯಾರಂಟಿ. ಬಸ್ ಗಳ ಓಡಾಟಕ್ಕೂ ತೊಂದರೆ. 15 ವರ್ಷದಿಂದ ಈ ಸಮಸ್ಯೆ ಗೊತ್ತಿದ್ದರೂ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳದಿರುವ ಬಗ್ಗೆ ಕಿಡಿಕಾರಿದರು.

50 ಲಕ್ಷ ಕಾಮಗಾರಿ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು. ಕಾಮಗಾರಿ ಕುರಿತು ಪರಿಶೀಲನೆ ಮಾಡುತ್ತೇನೆ. ಕಳಪೆ ಎಂದು ಕಂಡು ಬಂದರೆ ಗುತ್ತಿಗೆದಾರ ಹಾಗೂ ಸಾರಿಗೆ ಇಲಾಖೆ ವಿರುದ್ದ ಕ್ರಿಮಿನಲ್ ಕೇಸ್ ಹಾಕುವುದಾಗಿ ಹೇಳಿದರು.

ನಿಲ್ದಾಣ ನಿಯಂತ್ರಣಾಧಿಕಾರಿ ಜಹಾಂಗೀರ್. ಜೆಡಿಎಸ್ ಕೊಟ್ಟೂರು ಬ್ಲಾಕ್ ಅಧ್ಯಕ್ಷ ಪರಮೇಶ್ವರ. ಜಾಗಟಗೆರೆ ರವಿ. ಶಿವಕುಮಾರ್. ಎಂ.ಎಂ. ಶೇಖ್. ನಾಗರಾಜ್ ಇರರಿದ್ದರು.

ವರದಿ :ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here