ಕೋವಿಡ್ -19 ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿ: ಡಾ. ವಿ.ರಾಮ್ ಪ್ರಸಾತ್ ಮನೋಹರ್

0
142

ಮಂಡ್ಯ.ಜು.28 – ಕೋವಿಡ್ -19 ಮೂರನೇ ಅಲೆಯನ್ನು ಸಮರ್ಪಕವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಿ ಎಂದು ಜಿಲ್ಲಾ ಪಂಚಾಯತ್ ನ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾದ ವಿ.ರಾಮ್ ಪ್ರಸಾತ್ ಮನೋಹರ್ ರವರು ಹೇಳಿದರು.

ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್ 19 ಮೂರನೇ ಅಲೆ ಸಂಭಾವ್ಯ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಟೆಸ್ಟಿಂಗ್ ನ್ನು ಹೆಚ್ಚಿಸಿ:-
ಕರೋನಾ ಪರೀಕ್ಷೆಯನ್ನು ಹೆಚ್ಚು ಮಾಡಿ, ಸಂಪರ್ಕಿತರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಿ ಆರ್.ಟಿ .ಪಿ.ಸಿ.ಆರ್ ಟೆಸ್ಟ್ ನ್ನು ಹೆಚ್ಚು ಮಾಡಿ ಎಂದರು‌.

ಫ್ರಂಟ್ ಲೈನ್ ವಾರಿಯರ್ಸ್ ಗಳು ಕರೋನಾ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಅವರ ಕುಟುಂಬದವರಿಗೆ, ಅವರ ಸಂಪರ್ಕಿತರಿಗೆ ಲಸಿಕೆ ನೀಡಿ ಎಂದರು.

ಹೊರರಾಜ್ಯದಿಂದ ಹೊರ ಜಿಲ್ಲೆಯಿಂದ ಬಂದವರನ್ನ ಗುರುತಿಸಿ, ಕರೋನಾ ಪರೀಕ್ಷೆ ಮಾಡಿ ಪ್ರತ್ಯೇಕಿಸಿ ಚಿಕಿತ್ಸೆ ನೀಡಿ ಎಂದರು.

ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಗಳನ್ನು ಪರಿಣಾಮಕಾರಿಯಾಗಿ ಬಲಪಡಿಸಿ:- ಹಳ್ಳಿಗಳಿಗೆ ಬೇರೆ ರಾಜ್ಯ, ಜಿಲ್ಲೆಯಿಂದ ಹಾಗೂ ಜಿಲ್ಲೆಗೆ ಕಬ್ಬು ಕಟಾವು,ಇನ್ನಿತರ ಕೆಲಸಕ್ಕೆ ಹೆಚ್ಚು ಜನರು ವಲಸೆ ಬರುತ್ತಿದ್ದು ಇವರನ್ನು ಪತ್ತೆ ಹಚ್ಚಿ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಿ ಎಂದರು.

ಮಿಮ್ಸ್ ನಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿ ಮಾಡಿ:-
ಮಿಮ್ಸ್ ಆಸ್ಪತ್ರೆಯಲ್ಲಿ‌ ಉತ್ತಮ ವಾತಾವರಣ ವನ್ನು ಕಾಪಾಡಿ, ಆಸ್ಪತ್ರೆಯನ್ನ ಅಭಿವೃದ್ಧಿ ಪಡಿಸಿ ಎಂದರು.

ಮಾನವ ಸಂಪನ್ಮೂಲವನ್ನು ಹೆಚ್ಚು ಮಾಡಿ:-
ಮಿಮ್ಸ್ ನಲ್ಲಿ, ಹಾಗೂ ತಾಲ್ಲೂಕು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರನ್ನು ನಿಯೋಜಿಸಿ, ಶುಶ್ರೂಷಕರು, ಸ್ವಚ್ಛತಾ ಸಿಬ್ಬಂದಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ನಿಯೋಜಿಸಿ ಎಂದರು.

ವ್ಯಾಕ್ಸಿನೇಷನ್‌ ನ್ನು ಹೆಚ್ಚು ಮಾಡಿ:-
18 ವರ್ಷ ಮೇಲ್ಪಟ್ಟವರಿಗೆ , 45 ವರ್ಷ ಮೇಲ್ಪಟ್ಟವರಿಗೆ ಹಾಗೂ ಆದ್ಯತಾ ವಲಯಕ್ಕೆ ಲಸಿಕೆ ನೀಡಿಕೆಯನ್ನು ಹೆಚ್ಚು ಮಾಡಿ ಎಂದರು.

ಕೋವಿಡ್ ಕೇರ್ ಸೆಂಟರ್ ನ್ನು ಅಭಿವೃದ್ಧಿ ಪಡಿಸಿ:- 3 ನೇ ಅಲೆಯ ಸಂಭಾವ್ಯ ಕೋವಿಡ್ ಕೇರ್ ಸೆಂಟರ್ ನ್ನು ಗುರುತಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸಿ ಎಂದರು.

ಸ್ಟೇಕ್ ಹೋಲ್ಡರ್ಸ್ ಗಳ ಜೊತೆ ಸಭೆ ನಡೆಸಿ ಕ್ರಮವಹಿಸಲು ಸೂಚಿಸಿದರು ಹಾಗೂ ಜಿಲ್ಲೆಯ ಅಸೋಸಿಯೇಷನ್ ನ ಅಧ್ಯಕ್ಷರು, ಹಾಗೂ ದಾನಿಗಳಿಂದ ಸಹಾಯವನ್ನು ಪಡೆದು ವ್ಯಾಕ್ಸಿನೇಷನ್‌ ಗೆ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಕ್ರಮವಹಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.

ಅನುದಾನಗಳನ್ನು ಸದ್ಬಳಕೆ ಮಾಡಿ:- ಸರ್ಕಾರದ ಅನುದಾನವನ್ನು ಆರೋಗ್ಯ ಸೇವೆ ಒದಗಿಸಲು ಸದ್ಬಳಕೆ ಮಾಡಿ ಎಂದರು.

ಜಿಲ್ಲೆಯಲ್ಲಿ ಕೋರ್ ಕಮಿಟಿ ಮಾಡಿ ನಿವೃತ್ತಿ ಪ್ರಾಧ್ಯಾಪಕರು, ಎನ್ ಜಿ ಒ ಗಳು, ತಜ್ಞರನ್ನು ಸೇರಿಸಿ ಕೊಂಡು ಸಲಹೆ ಹಾಗೂ ಮಾರ್ಗದರ್ಶನ ಪಡೆಯಿರಿ ಎಂದರು.

ಕರೋನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ತಗಲುವ ಸಂಭಾವ್ಯವಿದ್ದು, ಈ ಸಂಬಂಧ ಐಸಿಯು ಬೆಡ್, ಇನ್ನಿತರ ಸೌಲಭ್ಯಗಳ ಒದಗಿಸುವಿಕೆ ಬಗ್ಗೆ ಕ್ರಮವಹಿಸಿ, ಅಂಗನವಾಡಿಗೆ ಬರುವ ಮಕ್ಕಳ ತಾಯಂದಿರಿಗೆ ಲಸಿಕೆ ನೀಡಿ ಎಂದರು.

ಜಿಲ್ಲಾ ಕರೋನಾ ನಿರ್ವಹಣಾ ಯೋಜನೆ ರೂಪಿಸಿ:-
ಕರೋನಾ ನಿಯಂತ್ರಿಸುವ ಸಂಬಂಧ ಕ್ರಿಯಾಯೋಜನೆ ತಯಾರಿಸಿ ಕರೋನಾ ನಿರ್ವಹಣಾ ಯೋಜನೆಯಲ್ಲಿ ವೈದ್ಯರ ನಿಯೋಜನೆ, ಔಷಧ, ಲಸಿಕೆ, ಕೋವಿಡ್ ಕೇರ್ ಸೆಂಟರ್ ಇನ್ನಿತರ ಸೌಲಭ್ಯಗಳ ಸಮರ್ಪಕ ನಿರ್ವಹಣೆ ಬಗ್ಗೆ ಕ್ರಮವಹಿಸಿ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ‌ ಸಿಇಒ ದಿವ್ಯಪ್ರಭು, ಅಪರ ಜಿಲ್ಲಾಧಿಕಾರಿ ಶೈಲಜಾ, ಜಿಲ್ಲಾ ಆರೋಗ್ಯಾಧಿಕಾರಿ ಧನಂಜಯ,ಪ್ರೊಬೆಷನರಿ ಐ ಎ ಎಸ್ ಅಧಿಕಾರಿ ಲಾವಿಸ್, ಮಿಮ್ಸ್ ನ ನಿರ್ದೇಶಕ ಹರೀಶ್, ಉಪವಿಭಾಗಾಧಿಕಾರಿಗಳಾದ ಐಶ್ವರ್ಯ, ಶಿವಾನಂದಮೂರ್ತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here