ಮಂಗಳಮುಖಿಯರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ, ಮಂಗಳಮುಖಿಯರಿಗೆ‌ ಎಲ್ಲರಂತೆ ಸಮಾನ ಹಕ್ಕುಗಳುಂಟು: ನ್ಯಾ.ಸದಾನಂದ ದೊಡ್ಡಮನಿ

0
103

ಬಳ್ಳಾರಿ,ಅ.04 : ಸಂವಿಧಾನದಲ್ಲಿ ಮಂಗಳಮುಖಿಯರಿಗೆ ಎಲ್ಲರಂತೆ ಸಮಾನ ಹಕ್ಕುಗಳು ಮತ್ತು ಸೌಲಭ್ಯಗಳಿವೆ ಎಂದು 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ದೊಡ್ಡಮನಿ ಅವರು ಹೇಳಿದರು.
ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನುಸೇವಾ ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಮಂಗಳಮುಖಿಯರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನದಲ್ಲಿ ಪುರುಷ ಮತ್ತು ‌ಮಹಿಳೆಯರಿಗೆ ಅವಕಾಶ ನೀಡಿದಂತೆ ಮಂಗಳಮುಖಿಯರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ವಿವರಿಸಿದ ಅವರು ಮಂಗಳಮುಖಿಯರಿಗೆ ಕಾನೂನಡಿ ಸಿಗುವ ಸೌಲಭ್ಯಗಳು ಮತ್ತು ಆಡಚಣೆ ಉಂಟು ಮಾಡಿದರೇ ಕಾನೂನಿನ ಅಡಿ ಇರುವ ಶಿಕ್ಷಾ ಕ್ರಮಗಳನ್ನು ನ್ಯಾ.ಸದಾನಂದ‌ ದೊಡ್ಡಮನಿ ಅವರು ನೆರೆದಿದ್ದ ಮಂಗಳಮುಖಿಯರಿಗೆ ತಿಳಿಸಿಕೊಟ್ಟರು.
2019ರ ಕಾಯ್ದೆ ಅಡಿ ಮಂಗಳಮುಖಿಯರಿಗೆ ಸಿಗುವ ಸೌಲಭ್ಯಗಳು ಕುರಿತು ಹಾಗೂ ಸರಕಾರದ ವಿವಿಧ ಯೋಜನೆಗಳ ಕುರಿತು ವಿವರಿಸಿದರು.
ಜಿಲ್ಲಾ ಕಾನೂನುಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಎಂ.ಡಿ.ಪವಿತ್ರಾ ಅವರು ಕಾನೂನುಸೇವಾ ಪ್ರಾಧಿಕಾರದಿಂದ‌ ಸಿಗುವ ಸೌಲಭ್ಯಗಳ ಕುರಿತು ವಿವರಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನ್ಯಾ.ಯರ್ರೇಗೌಡ ಹಾಗೂ ವಕೀಲ ಯರ್ರಿಸ್ವಾಮಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಗತಿ ಸದಾಸೇವಾ ಸಂಘದ ಅಧ್ಯಕ್ಷ ರಾದ ಫರ್ವಿನ್ ಭಾನು, ಉಪಾಧ್ಯಕ್ಷ ಗಂಗಣ್ಣ ಹಾಗೂ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಮಂಗಳಮುಖಿಯರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.

LEAVE A REPLY

Please enter your comment!
Please enter your name here