ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಯಶವಂತನಗರ “ಭಗತ್ ಸಿಂಗ್ ಗೆಳೆಯರ ಬಳಗ”ದಿಂದ ಗ್ರಾಮ ಪಂಚಾಯಿತಿಗೆ ಮನವಿ

0
301

ಸಂಡೂರು:ಅ:22:- ಸಂಡೂರು ತಾಲೂಕಿನ ಯಶವಂತನಗರ ಗ್ರಾಮದ ಭಗತ್ ಸಿಂಗ್ ಗೆಳೆಯರ ಬಳಗ ಹಾಗೂ ಊರಿನ ಸಾರ್ವಜನಿಕರು ಇಂದು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಮನವಿಯನ್ನು ಸಲ್ಲಿಸಿದರು.

ಭಗತ್ ಸಿಂಗ್ ಗೆಳೆಯರ ಬಳಗದ ಪ್ರಮುಖ ಬೇಡಿಕೆಗಳು ಈಗಿವೆ:-

*ಸದರಿ ಗ್ರಾಮದ ಶ್ರೀ ಗಂಡಿ ಮಲಿಯಮ್ಮ ದೇವಸ್ಥಾನದ ಆವರಣದಲ್ಲಿ ಸಸ್ಯಕ್ಷೇತ್ರ ಪಕ್ಷಿಧಾಮ ಸುತ್ತಲೂ ರಕ್ಷಾಕವಚ ಮತ್ತು
*ಗ್ರಾಮದ ಬಸ್ ನಿಲ್ದಾಣದಲ್ಲಿ ಶೌಚಾಲಯ ನಿರ್ಮಾಣ
*ಶ್ರೀ ಉಜ್ಜನಿ ಜಗದ್ಗುರು ಸಿದ್ಧೇಶ್ವರ ಪ್ರೌಢಶಾಲೆ ಆವರಣದಲ್ಲಿ ಗೋಡೆ ನಿರ್ಮಾಣ
*ಸ್ಥಳಿಯ ಯುವಕರಿಗೆ ಸುಸಜ್ಜಿತವಾದ ವ್ಯಾಯಾಮಶಾಲೆ
*ಪ್ರತಿ ವಾರ್ಡಿಗೆ ಪ್ರತಿ ವಾರ್ಡಿಗೆ 2 ಆರ್ ಓ ವಾಟರ್ ಪ್ಲಾಂಟ್ ಗಳು
*ಗ್ರಾಮದ ಎಲ್ಲಾ ಸಮಾಜದ ಜನತೆಗೆ ರುದ್ರಭೂಮಿಗೆ 10 ಎಕರೆ ಜಮೀನು ವ್ಯವಸ್ಥೆ
*ಆರನೇ ವಾರ್ಡಿನಲ್ಲಿ ಸಮುದಾಯ ಭವನ ನಿರ್ಮಾಣ.
*ಸುಸಜ್ಜಿತ ಮತ್ತು ವ್ಯವಸ್ಥಿತ ಆಸ್ಪತ್ರೆ
*ನಾರಿ ಹಳ್ಳದಲ್ಲಿ ಅಂತರ್ಜಲ ಹೆಚ್ಚಿಸಲು ಹೆಚ್ಚಿಸುವುದು
*ಸ್ಥಳೀಯ ರೈತ ವ್ಯಾಪಾರಿಗಳಿಗೆ ಮಾರುಕಟ್ಟೆ ನಿರ್ಮಾಣ
*ಗ್ರಾಮದ ಕಲಾವಿದರಿಗೆ ರಂಗಮಂದಿರ
*ಸಂಡೂರಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ಸಿನ ಸೌಕರ್ಯ
*ಕೆರೆಗೆ ಹೋಗಲು ಇರುವ ಎರಡು ರಸ್ತೆಗಳಿಗೆ ಸೇತುವೆ ನಿರ್ಮಾಣ
*ಕುಲುಮೆ ಹಳ್ಳದಿಂದ ಕುತ್ತಿಮಲ್ಡಿಗೆ ಹೋಗುವ ರಸ್ತೆಯಲ್ಲಿ ಸೇತುವೆ ನಿರ್ಮಾಣ
ಮಾಡಿಸಿ ಕೊಡುವುದರ ಬಗ್ಗೆ

ಅತಿ ಶೀಘ್ರದಲ್ಲೇ ಜಾರಿಗೆ ತರಬೇಕೆಂದು ತಮ್ಮಲ್ಲಿ “ಭಗತ್ ಸಿಂಗ್ ಗೆಳೆಯರ ಬಳಗ” ಆಗ್ರಹಿಸಿದೆ.

ಈ ಸಂಧರ್ಭದಲ್ಲಿ ಭಗತ್ ಸಿಂಗ್ ಗೆಳೆಯರ ಬಳಗದ ಅಧ್ಯಕ್ಷರಾದ ರಾಮಣ್ಣ ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ, ದಾದಾಪೀರ್, ಹಾಗೂ ಸದಸ್ಯರು ಸಂತೋಷ್, ಶಿವಕುಮಾರ್, ಅರುಣ್ ಕುಮಾರ್, ವಿಜಯಕುಮಾರ್, ಬಸವರಾಜ್, ರವಿ ಇತರರು ಉಪಸ್ಥಿತರು

LEAVE A REPLY

Please enter your comment!
Please enter your name here