ಸಂಕಷ್ಟದಲ್ಲಿರುವ ಮಹಿಳೆಯರಿಗೆ ಆಹಾರ ಕಿಟ್

0
118

ಬೆಂಗಳೂರು “ಟ್ರಿನಿಟಿ ಕೇರ್ ಫೌಂಡೇಷನ್” ಸಂಘ ಸಂಸ್ಥೆಯ ವತಿಯಿಂದ ಕೋವಿಡ್ -19 ರ ಹಿನ್ನಲೆ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಹಾರ ಕಿಟ್ ವಿತರಿಸಲಾಯಿತು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಅವರು ಜಿಲ್ಲೆಯಲ್ಲಿರುವ ಎಚ್.ಐ.ವಿ.ಭಾದಿತರು, ಲಿಂಗತ್ವ ಅಲ್ಪಸಂಖ್ಯಾತರಿಗೆ, ದಮನಿತ ಮಹಿಳೆಯರಿಗೆ, ಸಾಂಕೇತಿಕವಾಗಿ ಆಹಾರ ಸಾಮಾಗ್ರಿ ಕಿಟ್‌ಗಳನ್ನು ವಿತರಿಸಿದರು.

ಇದುವರೆಗೂ ಜಿಲ್ಲೆಯಾದ್ಯಂತ ಒಟ್ಟು -850 ಸಂಕಷ್ಟ ಮಹಿಳೆಯರಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ.

ಸಂಸ್ಥೆಯ ದಾನಿಗಳು, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಉಮೇಶ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮನ್ ಸಿ.ವಿ, ಮಹಿಳಾ ಅಭಿವೃದ್ಧಿ ನಿಗಮ ನಿರೀಕ್ಷಕರು, ಮಹಿಳಾ ಶಕ್ತಿ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here