ಡಾನ್ ಬೋಸ್ಕೋ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಪೋಷಕತ್ವ ಅರಿವು ಕಾರ್ಯಕ್ರಮ.

0
118

ಬಳ್ಳಾರಿ:ಅ:25:- ಡಾನ್ ಬೋಸ್ಕೋ ಸಂಸ್ಥೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಭಾಂಗಣದಲ್ಲಿ ಆಶಾ ಕಾರ್ಯಕರ್ತರಿಗೆ ಅರಿವು ಕಾರ್ಯಕ್ರಮವನ್ನು ಚಳ್ಳಗುರ್ಕಿ ಬಳ್ಳಾರಿ ತಾಲೂಕು ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿತ್ತು,ಆಶಾ ಕಾರ್ಯಕರ್ತರಿಗೆ ಪೋಷಕತ್ವ ಅರಿವು ಕಾರ್ಯಕ್ರಮದಲ್ಲಿ ಪೋಷಕತ್ವ ಜಿಲ್ಲಾ ಸಂಯೋಜಕರಾದ ಶ್ರೀಯುತ ಗಣೇಶ್ ರವರು ಮಾತನಾಡಿ ಪೋಷಕತ್ವ ಎಂದರೆ ಕಾನೂನಿನ ಪ್ರಕಾರ ಅನಾಥರು ಎಂದು ಪರಿಗಣಿಸಿದ ಮಕ್ಕಳು ಹಾಗೂ ಪರಿವಾರದ ಆರೈಕೆಯಿಂದ ವಂಚಿತರಾದ ಮಕ್ಕಳಿಗೆ ತಾತ್ಕಾಲಿಕ ಪರಿವಾರದ ಮೂಲಕ ಸಿಗುವ ಕಾಳಜಿಯನ್ನು ಪೋಷಕತ್ವ.

ಹಾಗೆಯೇ ಇದರ ಉದ್ದೇಶ :ಸರಿಯಾದ ಪಾಲನೆ & ಪೋಷಣೆಯನ್ನು ಒಂದು ಪರಿವಾರದ ವ್ಯವಸ್ಥೆಯಲ್ಲಿ ಕಲ್ಪಿಸುವುದು.
ಮಕ್ಕಳ ನ್ಯಾಯ ಕಾಯ್ದೆ 2015 ರ ಸೆಕ್ಷನ್ 44 ರ ಪೋಷಕತ್ವ ಯೋಜನೆ ಅಡಿಯಲ್ಲಿ ಮಗುವಿನ ರಕ್ಷಣೆ ಮತ್ತು ಪೋಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಆದೇಶದ ಮೇರೆಗೆ ಜೈವಿಕ ಕುಟುಂಬವಲ್ಲದ ಕುಟುಂಬಕ್ಕೆ ತಾತ್ಕಾಲಿಕ ಅಥವಾ ವಿಸ್ತರಿಸಲ್ಪಟ್ಟ ಅವರಿಗೆ 01 ವರ್ಷಕ್ಕೆ ಮೀರಿದ ಅವಧಿವರೆಗೆ ಮಗುವನ್ನು ಪೋಷಕತ್ವ ಯೋಜನೆ ಅಡಿಯಲ್ಲಿ ನಿಯೋಜನೆ ಮಾಡಬಹುದಾಗಿದ್ದು, ಆಸಕ್ತ ಪಾಲಕರಿಂದ ಅರ್ಜಿ ಆಹ್ವಾನಿಸಲಾಗಿದೆ ಸಮಗ್ರ ಮಕ್ಕಳ ರಕ್ಷಣೆ ಯೋಜನೆಯ ಅಧೀನದಲ್ಲಿ ಬರುವ ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ 18 ವರ್ಷದೊಳಗಿನ ಮಕ್ಕಳಿಗಾಗಿ ಬಾಲನ್ಯಾಯ ಕಾಯ್ದೆ ಅಡಿ ಪೋಷಣೆ ಮತ್ತು ರಕ್ಷಣೆ ಕುರಿತು ಕಾರ್ಯನಿರ್ವಹಿಸುತ್ತಿದ್ದು. ಕೇಂದ್ರ ಕಚೇರಿ ಮಾರ್ಗದರ್ಶನದಂತೆ ಮಕ್ಕಳನ್ನು ದತ್ತುಗೆ ಪ್ರೋತ್ಸಾಹಿಸಲು ಅರ್ಜಿ ಕರೆಯಲಾಗಿದೆ ಸೂಕ್ತ ಮಕ್ಕಳನ್ನು ಪೋಷಕತ್ವ ಯೋಜನೆಯಡಿ ತೆಗೆದುಕೊಳ್ಳಬಯಸುವ ಕುಟುಂಬಗಳು ಹಾಗೂ ಪಾಲಕರು ಮಕ್ಕಳ ಕುರಿತಾದ ಅವರ ಆಯ್ಕೆಯ ಮಾಹಿತಿಯ ಅರ್ಜಿಯನ್ನು ಅವಶ್ಯಕತೆ ಇರುವ ಪಾಲಕರು ಸಲ್ಲಿಸಬಹುದಾಗಿದೆ.

ಈ ಕಾರ್ಯಕ್ರಮದಲ್ಲಿ ಚಳ್ಳಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಸಮರ್ಥನಂ ಅಂಗವಿಕಲರ ಸಂಸ್ಥೆಯ ಮೊಬೈಲ್ ಸರ್ ಪವಿತ್ರ ರಾಜ್ ಹಾಗೂ ಸಿಬ್ಬಂದಿ ವರ್ಗದವರು ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ:-ಮಹೇಶ್

LEAVE A REPLY

Please enter your comment!
Please enter your name here