ಮಹಿಳೆಯರ ಕುಸ್ತಿ ವಿಬಾಗದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಿಕ್ಷಕಿ ಶಾಂತವ್ವ ಅವರಿಗೆ ಕರಾಸನೌ ಸಂಘದ ಸಂಡೂರು ತಾಲೂಕು ಅಧ್ಯಕ್ಷ ಚೌಕಳಿ ಪರಶುರಾಮಪ್ಪ ಅಭಿನಂದನೆಗಳು..!!

0
195

ಸಂಡೂರು:ಅ:26:-ರಾಜ್ಯಮಟ್ಟದ ಕ್ರೀಡಾಕೂಟ ದಾವಣಗೆರೆಯಲ್ಲಿ ನಡೆದ ಮಹಿಳೆಯರ ಕುಸ್ತಿ 72ಕೆಜಿ ವಿಭಾಗದಲ್ಲಿ ನಮ್ಮಸ್ಕಂದಸಿರಿ ನಾಡು ಸಂಡೂರು ತಾಲೂಕಿನ ಹೆಮ್ಮೆಯ ಶಿಕ್ಷಕಿಯಾದ ಶ್ರೀಮತಿ ಶಾಂತವ್ವ.ಎನ್.ಸಿ. ಶಿಕ್ಷಕಿ GMHPS ಲಕ್ಷ್ಮಿಪುರ ಇವರು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಿಕ್ಷಕಿ ಶ್ರೀಮತಿ ಶಾಂತವ್ವ ಅವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಪಂದ್ಯದ ನಾಲ್ಕು ಸುತ್ತುಗಳಲ್ಲಿ ಅತ್ಯಂತ ಜಯಭೇರಿಯನ್ನು ಬಾರಿಸಿ ತಮ್ಮ ಎದುರಾಳಿ 2 ಸಲ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುವನ್ನು ಮಣಿಸಿ ಈ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ನಮ್ಮ ಸಂಡೂರು ತಾಲೂಕಿನ ಅದರಲ್ಲೂ ಗಣಿನಾಡು ಬಳ್ಳಾರಿ ಜಿಲ್ಲೆಯ ಹೆಮ್ಮೆಯ ಪುತ್ರಿಯಾಗಿ ಹೊರ ಹೊಮ್ಮಿದ್ದಾರೆ

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಿಕ್ಷಕಿ ಶ್ರೀಮತಿ ಶಾಂತವ್ವ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಡೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಚೌಕಳಿ ಪರಶುರಾಮಪ್ಪ ಅಭಿನಂದನೆಗಳನ್ನು ಸಲ್ಲಿಸಿ ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಸಮ್ಮ ಸಂಡೂರು ತಾಲೂಕಿನ ಹಾಗೂ ಸಂಡೂರು ಶಿಕ್ಷಣ ಇಲಾಖೆಯ ಕೀರ್ತಿ ಪತಾಕೆಯನ್ನು ಹಾರಿಸಲೆಂದುಹೃದಯಪೂರ್ವಕ ಅಭಿನಂದನೆಯನ್ನು ಸಲ್ಲಿಸಿದ್ದಾರೆ,ಹಾಗೇ

ಸಂಡೂರು ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಾ ಶಿಕ್ಷಕರು ಹಾಗೂ ಸರ್ಕಾರಿ ನೌಕರರು ಅಭಿನಂದನೆಗಳನ್ನು ಇವರು ಇನ್ನೂ ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ನಮ್ಮ ಸಂಡೂರಿನ ಹೆಸರನ್ನು ಇತಿಹಾಸದ ಪುಟಗಳಲ್ಲಿ ಸೇರಿಸುವಂತಾಗಲಿ ಎಂದು ಅಭಿನಂದನೆಗಳನ್ನು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here