ಸಿರವಾರದಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳ ಕಾರ್ಯಾಗಾರ, ಗುಳೆ ಹೋಗುವುದನ್ನು ತಡೆಯಲು ಕಾರ್ಮಿಕರಿಗೆ ನರೇಗಾ ಸಹಕಾರಿ

0
131

ರಾಯಚೂರು,ನ.25 :- ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೆಲಸಕ್ಕಾಗಿ ಬೇರೆ ಜಿಲ್ಲೆಗಳಿಗೆ ಗುಳೆ ಹೋಗುವುದನ್ನು ತಡೆದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಆಯಾ ಗ್ರಾಮಗಳಲ್ಲಿಯೇ ಕೆಲಸ ಮಾಡಿಕೊಂಡು ಕುಟುಂಬವನ್ನು ಪೋಷಣೆ ಮಾಡಲು ಸಹಕಾರಿಯಾಗಲಿದೆ ಎಂದು ಸಿರವಾರ ತಾಲೂಕು ಪಂಚಾಯತಿ ಐಇಸಿ ಸಂಯೋಜಕರಾದ ರಾಜೇಂದ್ರ ಕುಮಾರ್ ಅವರು ತಿಳಿಸಿದರು.

ಅವರು ನ.25ರ ಗುರುವಾರ ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮ ಪಂಚಾಯತಿಯ ಶ್ರೀದತ್ತಾತ್ರೇಯ ಮಠದ ಪ್ರಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸಿರವಾರ ಸಂಯುಕ್ತಾಶ್ರಯದಲ್ಲಿ 75ನೇ ವರ್ಷದ ಭಾರತದ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಅಂಗವಾಗಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಗುಂಪುಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರದ ಬಗ್ಗೆ ಮಾಹಿತಿ ನೀಡಿದರು.

ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಹೊಂದಲು ನರೇಗಾ ಪೂರಕ ವಾತವಾರಣವಿದ್ದು, ಸದುಪಯೋಗ ಪಡೆದುಕೊಳ್ಳಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ವೈಯಕ್ತಿಕವಾಗಿ ಕೃಷಿ ಹೊಂಡ, ಬದು ನಿರ್ಮಾಣ, ದನದದೊಡ್ಡಿ, ಕುರಿದೊಡ್ಡಿ, ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣ, ಮಲ್ಲಿಗೆ, ಗುಲಾಬಿ ಹೂ, ಕರಿಬೇವು, ಪಪ್ಪಾಯಿ, ಪೆರಲ, ಮೊಸಂಬಿ, ನುಗ್ಗೆ ಎಲೆ ತೋಟ, ಸೇರಿದಂತೆ ಇನ್ನಿತರ ವಿವಿಧ ಕಾಮಗಾರಿಗಳ ಸದುಪಯೋಗ ಪಡೆದುಕೊಂಡು ವೈಯಕ್ತಿಕವಾಗಿ ಅಭಿವೃದ್ಧಿ ಹೊಂದಲು ನರೇಗಾ ಯೋಜನೆಯಡಿಯಲ್ಲಿ ಉತ್ತಮ ಅವಕಾಶಗಳಿವೆ ಎಂದು ತಿಳಿಸಿದರು.

ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಒಂದು ದಿನಕ್ಕೆ 289 ರೂ ಕೂಲಿ ಹಾಗೂ ಸಲಕರಣೆ ವೆಚ್ಚ 10 ರೂ ನೀಡಲಾಗುತ್ತಿದೆ. ಅಲ್ಲದೇ ಪ್ರತಿ ಕುಟುಂಬಕ್ಕೆ 100 ದಿನಗಳ ಕಾಲ ಕೂಲಿ ಕೆಲಸ ಮಾಡಬಹುದಾಗಿದೆ. ಕರೋನಾ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಸಾಕಷ್ಟು ಜನರಿಗೆ ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕೆಲಸ ಸಿಕ್ಕಿದೆ ಎಂದರು.

ಸರ್ಕಾರದಿAದ ನೀಡಿರುವ ಮನೆಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 90 ಮಾನವ ದಿನಗಳ ಕೂಲಿ ಹಣವನ್ನು ಹಂತಹAತವಾಗಿ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ನರೇಗಾ ಯೋಜನೆಯಡಿ ಕೆಲಸಕ್ಕಾಗಿ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.
ಜಾಬ್ ಕಾರ್ಡ್ಗೆ ಬೇಡಿಕೆ ಸಲ್ಲಿಸುವ ವಿಧಾನ: ಕಾಯಕ ಮಿತ್ರ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಂಡು ಸಲ್ಲಿಸಬಹುದು ಅಥವಾ ಆನ್ ಲೈನ್ ಮೂಲಕ ಸಲ್ಲಿಸಬಹುದು ಮತ್ತು ಉಚಿತ ಸಹಾಯವಾಣಿ 18004258666 ಮೂಲಕ ಬೇಡಿಕೆ ಸಲ್ಲಿಸಬಹುದು ಎಂದರು.

ನರೇಗಾದಲ್ಲಿ ವಿಶೇಷ ವರ್ಗಗಳಿಗೆ ವಿಶೇಷ ಅವಕಾಶ:
ವಿಶೇಷ ಚೇತನರಿಗೆ ಪ್ರತ್ಯೇಕ ಉದ್ಯೋಗ ಚೀಟಿ ನೀಡುವುದು, ಆದಿ ಕಾಲದ ಬುಡಕಟ್ಟು ಜನಾಂಗ, ಅಲೆಮಾರಿ ಬುಡಕಟ್ಟು ಜನಾಂಗ, ಸಮಾನ ಕೆಲಸಕ್ಕೆ ಸಮಾನ ಕೂಲಿ, ವಿಶೇಷ ವರ್ಗಗಳಿಗೆ ಹಸಿರು ಬಣ್ಣದ ಜಾಬ್ ಕಾರ್ಡ್ ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಲ್ಲೂರು ಗ್ರಾ.ಪಂ ಲೆಕ್ಕಾಧಿಕಾರಿ ದೇವಪ್ಪ,ಎನ್.ಆರ್.ಎಲ್.ಎಂ ಜಿಲ್ಲಾ ವ್ಯವಸ್ಥಾಪಕ ಶ್ರೀಕಾಂತ, ಎನ್.ಆರ್.ಎಲ್.ಎಂ ಜಿಪಿಎಲ್ ಎಫ್ ಸಹಾಯಕ ಶ್ರೀಧರ್, ಎಸ್.ಡಿ.ಎಂ.ಸಿ ಅಧ್ಯಕ್ಷ ದೇವದಾಸ, ಶಿಕ್ಷಣ ಪ್ರೇಮಿ ಭೀಮರಾಯ, ಶ್ರೀ ಮಹಾಲಕ್ಷ್ಮೀ ಸಂಜೀವಿನ ಒಕ್ಕೂಟದ ಅಧ್ಯಕ್ಷ ವಾಣಿಶ್ರೀ, ಉಪಾಧ್ಯಕ್ಷೆ ಮಹಾಲಕ್ಷ್ಮೀ ಹಾಗೂ ಸ್ವ-ಸಹಾಯಕ ಸಂಘಗಳ ಗುಂಪಿನ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here