ಕೋಳೂರುನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಅಂತಾರಾಷ್ಟ್ರೀಯ ದತ್ತು ಮಾಸಾಚಾರಣೆ ಕಾರ್ಯಕ್ರಮ

0
162

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಡಾನ್ ಬೋಸ್ಕೋ ಸಂಸ್ಥೆ ಪೋಷಕತ್ವ ಯೋಜನೆ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಕಾರ್ಯಕ್ರಮವನ್ನು ಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಯಿತು.

ಅಂಗನವಾಡಿ ಕಾರ್ಯಕರ್ತೆಯರಿಗೆ ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಕುರಿತು ಜಾಗೃತಿ ಮೂಡಿಸಲಾಯಿತು.
ಚನ್ನಬಸಪ್ಪ ಪಾಟೀಲ್
ಮಕ್ಕಳ ರಕ್ಷಣಾಧಿಕಾರಿಗಳು (ಅ ಸಂಸ್ಥಿಕ ಸೇವೆ) ರವರು ಮಾತನಾಡಿ
ಮಕ್ಕಳ ಮಾರಾಟ ಅಪರಾಧ, ಮಕ್ಕಳನ್ನು ಮಾರುವವರಿಗೆ ಹಾಗೂ ಕೊಳ್ಳುವವರಿಗೂ ಬಾಲ ನ್ಯಾಯ ಕಾಯ್ದೆ ಸೆಕ್ಷನ್ 81 ರ ಅನ್ವಯ 5 ವರ್ಷಗಳವರೆಗೆ ಸೆರೆಮನೆ ವಾಸದೊಂದಿಗೆ ರೂ. 1 ಲಕ್ಷದವರೆಗೆ ದಂಡ ವಿಧಿಸಬಹುದು, ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದರೆ ಶಿಕ್ಷೆಯ ಅವಧಿ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ 7 ವರ್ಷಗಳ ವರೆಗೂ ವಿಸ್ತರಣೆ ಮಾಡಲಾಗಿದೆ.
ನಿರ್ದಿಷ್ಟ ಪ್ರಕ್ರಿಯೆಗಳನ್ನು ಪಾಲಿಸದೆ ಮಕ್ಕಳನ್ನು ದತ್ತು ತೆಗೆದುಕೊಂಡವರಿಗೆ ಶಿಕ್ಷೆ ಯಾರೇ ಆಗಲಿ ಅಥವಾ ಯಾವುದೇ ಸಂಸ್ಥೆ ಯಾವುದೇ ಅನಾಥ, ಅಥವಾ ತಿರಸ್ಕರಿಸಲ್ಪಟ್ಟ ಅಥವಾ ತ್ಯಜಿಸಲ್ಪಟ್ಟ ಮಗುವನ್ನು ಈ ಕಾಯ್ದೆಯಲ್ಲಿ ಸೂಚಿಸಿರುವ ವಿಧಿ-ವಿಧಾನಗಳನ್ನು ಅನುಸರಿಸದೆ ದತ್ತುವಿಗಾಗಿ ನೀಡಲು ಮುಂದೆ ಬಂದಿದ್ದು ಆದಲ್ಲಿ ಅಥವಾ ಹಾಗೆಯೇ ನೀಡಿದ್ದೇ ಆದಲ್ಲಿ ಅಂತಹ ವ್ಯಕ್ತಿ ಅಥವಾ ಸಂಸ್ಥೆಗೆ ಮೂರು ವರ್ಷಗಳ ತನಕ ಕಾರಾಗೃಹ ಶಿಕ್ಷೆ ಮತ್ತು ಒಂದು ಲಕ್ಷದವರೆಗೆ ದವರಿಗೆ ದಂಡ ಅಥವಾ ಎರಡನ್ನು ವಿಧಿಸಲಾಗುತ್ತದೆ.

ಡಾನ್ ಬೋಸ್ಕೋ ಸಂಸ್ಥೆ ಪೋಷಕತ್ವ ಜಿಲ್ಲಾ ಸಂಯೋಜಕರು ಶ್ರೀಯುತ ಗಣೇಶ್ ರವರು ಮಾತನಾಡಿ ಪೋಷಕತ್ವ ಎಂದರೆ ಕಾನೂನಿನ ಪ್ರಕಾರ ಅನಾಥರು ಎಂದು ಪರಿಗಣಿಸಿದ ಮಕ್ಕಳು ಹಾಗೂ ಪರಿವಾರದ ಆರೈಕೆಯಿಂದ ವಂಚಿತರಾದ ಮಕ್ಕಳಿಗೆ ತಾತ್ಕಾಲಿಕ ಪರಿವಾರದ ಮೂಲಕ ಸಿಗುವ ಕಾಳಜಿಯನ್ನು ಪೋಷಕತ್ವ. ಹಾಗೆಯೇ ಇದರ ಉದ್ದೇಶ :ಸರಿಯಾದ ಪಾಲನೆ & ಪೋಷಣೆಯನ್ನು ಒಂದು ಪರಿವಾರದ ವ್ಯವಸ್ಥೆಯಲ್ಲಿ ಕಲ್ಪಿಸುವುದು.

ಮಕ್ಕಳ ನ್ಯಾಯ ಕಾಯ್ದೆ 2015 ರ ಸೆಕ್ಷನ್ 44 ರ ಪೋಷಕತ್ವ ಯೋಜನೆ ಅಡಿಯಲ್ಲಿ ಮಗುವಿನ ರಕ್ಷಣೆ ಮತ್ತು ಪೋಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಆದೇಶದ ಮೇರೆಗೆ ಜೈವಿಕ ಕುಟುಂಬ ವಲ್ಲದ ಕುಟುಂಬಕ್ಕೆ ತಾತ್ಕಾಲಿಕ ಅಥವಾ ವಿಸ್ತರಿಸಲ್ಪಟ್ಟ ಅವರಿಗೆ 01 ವರ್ಷಕ್ಕೆ ಮೀರಿದ ಅವಧಿವರೆಗೆ ಮಗುವನ್ನು ಪೋಷಕತ್ವ ಯೋಜನೆ ಅಡಿಯಲ್ಲಿ ನಿಯೋಜನೆ ಮಾಡಬಹುದಾಗಿದ್ದು, ಆಸಕ್ತ ಪಾಲಕರಿಂದ ಅರ್ಜಿ ಆಹ್ವಾನಿಸಲಾಗಿದ್ದು. ಸಮಗ್ರ ಮಕ್ಕಳ ರಕ್ಷಣೆ ಯೋಜನೆಯ ಅಧೀನದಲ್ಲಿ ಬರುವ ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ 18 ವರ್ಷದೊಳಗಿನ ಮಕ್ಕಳಿಗಾಗಿ ಬಾಲನ್ಯಾಯ ಕಾಯ್ದೆ ಅಡಿ ಪೋಷಣೆ ಮತ್ತು ರಕ್ಷಣೆ ಕುರಿತು ಕಾರ್ಯನಿರ್ವಹಿಸುತ್ತಿದ್ದು. ಕೇಂದ್ರ ಕಚೇರಿ ಮಾರ್ಗದರ್ಶನದಂತೆ ಮಕ್ಕಳನ್ನು ದತ್ತುಗೆ ಪ್ರೋತ್ಸಾಹಿಸಲು ಅರ್ಜಿ ಕರೆಯಲಾಗಿದೆ ಸೂಕ್ತ ಮಕ್ಕಳನ್ನು ಪೋಷಕತ್ವ ಯೋಜನೆಯಡಿ ತೆಗೆದುಕೊಳ್ಳುಬಯಸುವ ಕುಟುಂಬಗಳು ಹಾಗೂ ಪಾಲಕರು ಮಕ್ಕಳ ಕುರಿತಾದ ಅವರ ಆಯ್ಕೆಯ ಮಾಹಿತಿಯ ಅರ್ಜಿಯನ್ನು ಅವಶ್ಯಕತೆ ಇರುವ ಪಾಲಕರು ಸಲ್ಲಿಸಬಹುದಾಗಿದೆ.

ಈ ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮೇಲ್ವಿಚಾರಕರಾದ ಸುಮಂಗಳಮ್ಮ, ಕಲ್ಯಾಣಮ್ಮ ಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಶ್ರೀಮತಿ ರಶ್ಮಿ ಹಾಗೂ ಸಿಬ್ಬಂದಿ ವರ್ಗದವರು ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ:-ಮಹೇಶ್

LEAVE A REPLY

Please enter your comment!
Please enter your name here