ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣಕಾರರ ಫೆಡರೇಶನ್ ಸಂಡೂರು ತಾಲೂಕು ಸಮಿತಿಯಿಂದ ಪ್ರತಿಭಟನೆ, ಮನವಿ.

0
74

ಸಂಡೂರು:ಡಿ:03:-ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸಂಡೂರು ತಾಲೂಕು ಸಮಿತಿ
ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರ ದೇಶವ್ಯಾಪಿ ಮುಷ್ಕರದ ಅಂಗವಾಗಿ ಅಂಗವಾಗಿ ಕಾರ್ಮಿಕ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ನಂತರ ಮುಖ್ಯರಸ್ತೆಯಲ್ಲಿ ಘೋಷಣೆಯನ್ನು ಕೂಗುತ್ತಾ ತಾಲೂಕು ಕಚೇರಿಯಲ್ಲಿ
ಮಾನ್ಯ ಪ್ರಧಾನ ಮಂತ್ರಿಗಳಿಗೆ
ತಹಸೀಲ್ದಾರ್ ಹೆಚ್. ಜೆ. ರಶ್ಮಿ ಅವರ ಮೂಲಕ ಮನವಿಯನ್ನು ಸಲ್ಲಿಸಿದರು.

1996 ರ ಕಟ್ಟಡ ನಿರ್ಮಾಣ ಕಾನೂನು ಹಾಗೂ ಸೆಸ್ ಕಾನೂನು ಮತ್ತು 1979ರ ಅಂತರ ರಾಜ್ಯ ವಲಸೆ ಕಾರ್ಮಿಕರ ಕಾಯ್ದೆಗಳನ್ನು ಮರು ಸ್ಥಾಪಿಸಲು ಸಾಮಗ್ರಿಗಳನ್ನು ಮೇಲೆ ವಿಧಿಸಲಾಗುವ ಸರಕು ಸೇವೆ ತೆರಿಗೆ ಕಡಿತಗೊಳಿಸಿ ಆ ಮೂಲಕ ಕಟ್ಟಡ ನಿರ್ಮಾಣ ವಲಯ ಹಾಗೂ ಕಟ್ಟಡ ಕಾರ್ಮಿಕರ ಬದುಕನ್ನು ರಕ್ಷಿಸಲು ಕೋರಿ ಮನವಿಪತ್ರವನ್ನು ಸಲ್ಲಿಸಿದರು.

ಬೇಡಿಕೆಗಳು:-
ಹಾಗೂ ಸೆಸ್ ಕಾನೂನು1996 ಕಾನೂನು ಪುನರ್ ಸ್ಥಾಪಿಸಬೇಕು
ದೇಶಾದ್ಯಂತ ಕಾನೂನುಬದ್ಧವಾಗಿ ರಚನೆಯಾಗಿರುವ ಕಲ್ಯಾಣ ಮಂಡಳಿ ಉಳಿಸಿ ಬಲಪಡಿಸಬೇಕು.ನಿರಂತರವಾಗಿ ಏರಿಕೆಯಾಗುತ್ತಿರುವ ಸಿಮೆಂಟ್ ಕಬ್ಬಿಣ ಮೊದಲಾದ ಕಟ್ಟಡ ಸಮಾಗ್ರಿಗಳ ಬೆಲೆಗಳ ನಿಯಂತ್ರಣ ಮಾಡಬೇಕು ಹಾಗೂ ಕಟ್ಟಡ ಸಾಮಗ್ರಿಗಳ ಮೇಲೆ ವಿಧಿಸಲಾಗಿರುವ ಜಿ.ಎಸ್.ಟಿ ಕಡಿತಗೊಳಿಸಬೇಕು
ಅಂತರ ರಾಜ್ಯ ವಲಸೆ ಕಾರ್ಮಿಕರ ಕಾನೂನು1979ರ ಪರಿಣಾಮಕಾರಿ ಜಾರಿ ಮಾಡಬೇಕು

ಈ ಸಂಧರ್ಭದಲ್ಲಿ ವಿ ದೇವಣ್ಣ ಜಿಲ್ಲಾ ಉಪಾಧ್ಯಕ್ಷರು ಕಟ್ಟಡ ಕಾರ್ಮಿಕರ ಸಂಘ,
ತಾಲೂಕು ಸಮಿತಿ ಮುಖಂಡರಾದ ಕೆದೇವಣ್ಣ, ಎಸ್.ನಾಗರಾಜ್, ವಿ.ಬಾಬಯ್ಯ, ಬಿಎಸ್ ಮಲ್ಲಿಕಾರ್ಜುನ್, ಎಚ್ ಶಿವಕುಮಾರ್, ವಿ ಹನುಮಂತಪ್ಪ, ಎಂ ನಾಗರಾಜ್, ವಿ.ಮಾಯಣ್ಣ ಮಹಿಳಾ ಮುಖಂಡರಾದ ಕರಿಬಸಮ್ಮ ಇತರರು ಭಾಗವಹಿಸಿದ್ದರು .

LEAVE A REPLY

Please enter your comment!
Please enter your name here