ಸಿರಿಧಾನ್ಯ, ತರಕಾರಿ, ಹಣ್ಣು, ಹಂಪಲುಗಳನ್ನು ಗರ್ಭಿಣಿ- ಬಾಣಂತಿಯರು-ಮಕ್ಕಳು ಸೇವಿಸಿ ಅಪೌಷ್ಟಿಕತೆಯಿಂದ ಮುಕ್ತರಾಗಬೇಕು. ಪೋಷಣ್ ತಾಲೂಕು ಸಹಾಯಕ ಸಂಯೋಜಕ ಲಿಂಗರಾಜ ಎಂ.ಅಭಿಪ್ರಾಯ

0
263

ಸಂಡೂರು:ಸೆ:28:-ಸಂಡೂರು ತಾಲೂಕಿನ ಬೊಮ್ಮಘಟ್ಟ ಪಂಚಾಯತ್ ವಲಯದ ಶೆಲಿಯಪ್ಪನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸದ್ದ ಪೋಷಣ್ ಅಭಿಯಾನ ಯೋಜನೆಯಡಿ ಪೋಷಣ್ ಮಾಸಾಚರಣೆ- 2021 ಹಾಗೂ ಮಾತೃ ವಂದನಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಸದರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯಕ್ರಮದ ಕುರಿತು ಮಾತನಾಡಿದ
ಪೋಷಣ ಅಭಿಯಾನ ತಾಲೂಕು ಸಹಾಯಕ ಸಂಯೋಜಕ ಲಿಂಗರಾಜ ಎಂ.ಮಾತನಾಡಿ ಸ್ಥಳೀಯವಾಗಿ ಹೇರಳವಾಗಿ ದೊರೆಯುವ ಧಾನ್ಯ, ತರಕಾರಿ, ಸೊಪ್ಪು, ಹಣ್ಣು, ಹಂಪಲುಗಳನ್ನು ಗರ್ಭಿಣಿ- ಬಾಣಂತಿಯರು ಹಾಗೂ ಮಕ್ಕಳು ಸೇವಿಸಿ ಅಪೌಷ್ಟಿಕತೆಯಿಂದ ಮುಕ್ತರಾಗಬೇಕು ಹಾಗೂ ಮುಂದಿನ ಭವಿಷ್ಯತ್ತಿನ ದಿನಗಳಲ್ಲಿ ಮಕ್ಕಳು ಸದೃಢವಾಗಿ ಬೆಳೆದು ವಯಸ್ಸಾದ ಪೋಷಕರನ್ನು ನೋಡಿಕೊಳ್ಳಬೇಕೆ ವಿನಹ ವಯಸ್ಸಾದ ಪೋಷಕರೇ ಮಕ್ಕಳನ್ನು ನೋಡಿಕೊಳ್ಳುವಂತಹ ಪರಿಸ್ಥಿತಿ ಬರದಾಗೆ ಹೀಗಿನಿಂದಲೇ ಮಕ್ಕಳನ್ನು ಸದೃಢವಾಗಿ ಬೆಳೆಸಿ ಎಂದು ತಿಳಿಸಿದರು.

ವಲಯದ ಮೇಲ್ವಿಚಾರಕೀಯದ ಶ್ರೀಮತಿ ಲಕ್ಷ್ಮೀ ಅವರು ಮಾತನಾಡಿ ಮಗುವಿನ ಪೋಷಣೆಗೆ ಮಗು ಹುಟ್ಟಿದಾಗಿನಿಂದ 1000 ದಿನಗಳು ಮಗುವಿನ ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಗೆ ಮುಖ್ಯವಾದ ದಿನಗಳಾಗಿದ್ದು ತಾಯಂದಿರು ತಪ್ಪದೆ ಮಗುವಿನ ಪೋಷಣೆ ಮಾಡಬೇಕು ಹಾಗೂ ತಪ್ಪದೆ ಮಗುವಿಗೆ 6 ತಿಂಗಳವರೆಗೆ ತಾಯಿಯ ಎದೆಯ ಹಾಲು ಹಾಗೂ 6 ತಿಂಗಳ ನಂತರ ಹಾಲಿನ ಜೊತೆಗೆ ಪೌಷ್ಟಿಕ ಆಹಾರವನ್ನು ನೀಡಬೇಕೆಂದು ತಿಳಿಸಿದರು.

ಸಮುದಾಯ ಅರೋಗ್ಯ ಅಧಿಕಾರಿ ಶ್ರಿಮತಿ ನಿರ್ಮಲಾ ಮಾತನಾಡಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ತಪ್ಪದೆ ಮಕ್ಕಳಿಗೆ ಚುಚ್ಚುಮದ್ದು ಹಾಕಿಸಬೇಕು ಹಾಗೂ 2 ವರ್ಷದೊಳಗಿನ ಮಕ್ಕಳ ಅರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಮತ್ತು ಅದರೊಂದಿಗೆ ಗರ್ಭಿಣಿ-ಬಾಣಂತಿಯರು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಶಾಲಾ ಶಿಕ್ಷಕರಾದ ಶ್ರೀ ಮಂಜುನಾಥ್ ಮಾತನಾಡಿ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಗರ್ಭಿಣಿ- ಬಾಣಂತಿಯರ ಮತ್ತು ಮಕ್ಕಳ ಪೋಷಕರ ಪಾತ್ರ ಮುಖ್ಯವಾದುದು ಎಂದು ತಿಳಿಸಿದರು.

ಅರೋಗ್ಯ ಸಂರಕ್ಷಕಿ ಶೃತಿ ಮಾತಾನಾಡಿ ಕೋವಿಡ್ ಲಸಿಕೆಯನ್ನು ತಪ್ಪದೆ ಎಲ್ಲಾ ತಾಯಂದಿರು ಹಾಕಿಸಿಕೊಳ್ಳಬೇಕು ಅದರೊಂದಿಗೆ ಕೋವಿಡ್ ಬಗ್ಗೆ ಎಚ್ಚರವಿರಲಿ ಎಂದು ತಿಳಿಸಿದರು.

ಗ್ರಾ. ಪಂ. ಸದಸ್ಯ ಲೋಕರಾಜ್ ಮಾತನಾಡಿ ಈ ಕಾರ್ಯಕ್ರಮ ನಮ್ಮೂರಿನ ಒಂದು ಹಬ್ಬವಾಗಿ ನಡೆದಿದ್ದು ಇಂತಹ ಇನ್ನು ಹೆಚ್ಚಿನ ಕಾರ್ಯಕ್ರಮಗಳು ಇಲಾಖೆಯವರು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.

ಗ್ರಾಮದ ಸದಸ್ಯರಾದ ಜ್ಯೋತಿ, ಓಬಕ್ಕ
ಮತ್ತು ಎಸ್ ಡಿ ಎಂಸಿ ಅಧ್ಯಕ್ಷರು ಮುಕ್ಕಣ್ಣ ಶಾಲಾಶಿಕ್ಷರಾದ ಜ್ಯೋತಿ, ಹುಲಿರಾಜ್.
ಅಂಗನವಾಡಿ ಕಾರ್ಯಕರ್ತೆಯರಾದ ಶ್ರಿಮತಿ ವಿಶಾಲ,ಬೊಮ್ಮಕ್ಕ, ಶೋಭಾ, ಸುಮಾ ಮಾಂತಮ್ಮ, ಹೊಸೂರಮ್ಮ, ಗೌರಮ್ಮ, ನೇತ್ರಾವತಿ, ಸುಶೀಲಬಾಯಿ, ಸರೋಜಮ್ಮ,
ಆಶಾ ಕಾರ್ಯಕರ್ತೆಯರು ಬಸಮ್ಮ ಮತ್ತು ನೇತ್ರವತಿ ಹಾಗೂ ಸ್ತ್ರೀ ಶಕ್ತಿ ಮಹಿಳೆಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here