ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಕೆ.ಸಿ ಕೊಂಡಯ್ಯ ಅವರ ಪರವಾಗಿ ಮತಯಾಚನೆ.

0
320

ಕೂಡ್ಲಿಗಿ:ಡಿ:04:- ಕೂಡ್ಲಿಗಿ ತಾಲೂಕು ತಾಯಕನಹಳ್ಳಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಅವರ ಪರವಾಗಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಅವರು ಮಾತನಾಡಿ ಸಂಪೂರ್ಣ ಗ್ರಾಮ ಸ್ವರಾಜ್ಯ ಅವರ ಗುರಿಯಾಗಿದೆ ಅವರು 1996 ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿ ಜಿಲ್ಲೆಗೆ ಸರ್ವಾಂಗೀಣ ಅಭ್ಯರ್ಥಿಗೆ ಶ್ರಮಿಸಿದ್ದು ಅಲ್ಲದೆ ಅಂದಿನ ಕೇಂದ್ರ ಸರ್ಕಾರದಲ್ಲಿ ಗ್ರಾಮ ಪಂಚಾಯತಿ ಸದಸ್ಯರಿಗೆ ಮತದಾನದ ಹಕ್ಕನ್ನು ಕಲ್ಪಿಸಿಕೊಟ್ಟರು ಇದೇ ಕೆಸಿ ಕೊಂಡಯ್ಯನವರು 2000 ರಿಂದ 2020ರ ವರೆಗೆ ರಾಜ್ಯಸಭೆ ಸದಸ್ಯನಾಗಿ 2002 -2006 ಹಾಗೂ 2006ರಿಂದ 2012ರವರೆಗೆ ಎರಡು ಬಾರಿ ವಿಧಾನಪರಿಷತ್ತಿಗೆ ಸದಸ್ಯರಾಗಿ ಬಹಳಷ್ಟು ಅಭಿವೃದ್ಧಿ ಮಾಡಿದರು.

ಇದೇ ವರ್ಷವೂ ರಾಜ್ಯ ಸರ್ಕಾರದ ಗ್ರಾಮ ಪಂಚಾಯಿತಿ ಚುನಾವಣಾ ನಡೆಸುವ ಸಂಬಂದ ಮುಂದೂಡಲು ಪ್ರಯತ್ನದ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಸುವಲ್ಲಿ ಗೌರವಾನ್ವಿತ ನ್ಯಾಯಾಲಯ ಮೊರೆಹೋಗಿ ಸದಸ್ಯರ ಅಭಿಪ್ರಾಯ ಅನಿಸಿಕೆಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಸಿ ಚುನಾವಣೆ ನಡೆಸುವಲ್ಲಿ ಸಫಲರಾಗಿದ್ದಾರೆ. ಅದಕ್ಕಾಗಿ 10-12-2021 ರಂದು ನಡೆಯುವ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ ಕೊಂಡಯ್ಯ ಅವರಿಗೆ ಮತವನ್ನು ಕೊಡಬೇಕೆಂದು ಕೇಳಿಕೊಂಡರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಒಬಿಸಿ ಉಪಾಧ್ಯಕ್ಷ ಹಾಗೂ ಗ್ರಾ.ಪಂ ಉಪಾಧ್ಯಕ್ಷರಾದ ಕೆ.ಎನ್ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿಗಳು ಪ್ರಭಾಕರ್, ಬ್ಲಾಕ್ ಅಧ್ಯಕ್ಷರಾದ ಸಿದ್ದೇಶ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಮಹಾಂತಪ್ಪ ಹಾಗೂ ಗ್ರಾ.ಪಂ ಸದಸ್ಯರಾದ ಮಾಳಿಗೆ ಆಂಜಿನಪ್ಪ, ಮಲ್ಲಿಕಾರ್ಜುನ್ ಹೂಡೇಂ, ತಳವಾರಿ ಕಾಟಯ್ಯ, ನಾಡುವಲಹಟ್ಟಿ ಕ್ಯಾತಯ್ಯ, ಅಜ್ಜಪ್ಪ ಹೂಡೇಂ, ಡಿ ಬಸವರಾಜ್ ನೂರುಲ್ ಹಾಗೂ ಮುಂತಾದವರು ಹಾಜರಿದ್ದರು.

ವರದಿ:-ಮಂಜುನಾಥ್. ಹೆಚ್

LEAVE A REPLY

Please enter your comment!
Please enter your name here