ತಹಶೀಲ್ದಾರ್ ರಶ್ಮಿ ವರ್ಗಾವಣೆ ಖಂಡಿಸಿ ಬಿಜೆಪಿ ಪ್ರತಿಭಟನೆ ಮಾಡಿದ್ದು ಏಕೇ..ಹೇಗೇ ಗೊತ್ತಾ..!!

0
487

ಸಂಡೂರು:ಡಿ:18:- ಬೆಳಗಾವಿ ಅಧಿವೇಶನದಲ್ಲಿ 15.13.2021 ರಂದು ಮಾನ್ಯ ಸಂಡೂರು ಶಾಸಕರಾದ ಈ.ತುಕಾರಾಮ್ ಅವರು ದಕ್ಷ ಹಾಗೂ ಪ್ರಾಮಾಣಿಕ ತಹಶೀಲ್ದಾರರಾದ ಶ್ರೀಮತಿ ಹೆಚ್.ಜೆ.ರಶ್ಮಿ (KAS)ಅವರ ಮೇಲೆ ಹಕ್ಕು ಚ್ಯುತಿಯನ್ನು ಸದನದಲ್ಲಿ ಮಂಡಿಸಿದ್ದನ್ನು ಖಂಡಿಸಿ ಸಂಡೂರು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಮತ್ತು ಪ್ರಗತಿಪರ ಸಂಘಟನೆಗಳು ಹಾಗೂ ಚಿಂತಕರು, ಸಾಹಿತಿಗಳು ಪ್ರತಿಭಟನೆಯ ಮುಖಾಂತರವಾಗಿ ಮನವಿಯನ್ನು ಸಲ್ಲಿಸಿದರು

ಪಟ್ಟಣದ ಎಪಿಎಂಸಿ ಆವರಣದಿಂದ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಹಾಗೂ ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳಿಂದ ಬಂದಂತಹ ಪಕ್ಷದ ಕಾರ್ಯಕರ್ತರು, ಮುಖಂಡರು ಜೊತೆ ಸಂಡೂರು ಮಂಡಲದ ಬಿಜೆಪಿ ಅಧ್ಯಕ್ಷರಾದ ಜಿಟಿ. ಪಂಪಾಪತಿ ಅವರು ಬಳ್ಳಾರಿ-ಕೂಡ್ಲಿಗಿ ಮುಖ್ಯರಸ್ತೆಯಿಂದ ವಿಜಯ ಸರ್ಕಲ್ ವರೆಗೆ ಸ್ಥಳೀಯ ಶಾಸಕ ಹಾಗೂ ಕಾಂಗ್ರೇಸ್ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಂದು ವಿಜಯ ಸರ್ಕಲ್ ಮುಂದೆ ಕುಳಿತುಕೊಂಡು ಅಧ್ಯಕ್ಷರು ಸೇರಿದಂತೆ ಹಲವು ಮುಖಂಡರುಗಳು ತಹಶೀಲ್ದಾರ್ ರಶ್ಮಿ ಯವರ ಬಗ್ಗೆ ಶಾಸಕರು ಸದನದಲ್ಲಿ ನಡೆದುಕೊಂಡ ರೀತಿಯ ತದನಂತರ ನಡೆದ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಒಬ್ಬೊಬ್ಬರಾಗಿ ಅಭಿಪ್ರಾಯವನ್ನು ತಿಳಿಸುತ್ತಾ ಧರಣಿ ನಿರತ ಸ್ಥಳದಲ್ಲಿಯೇ ಮಾನ್ಯ ತಹಶೀಲ್ದಾರ್ ಶ್ರೀ ವಿಶ್ವಜಿತ್ ಮೆಹ್ತಾ ಅವರ ಮುಖೇನಾ.. ಕರ್ನಾಟಕ ರಾಜ್ಯದ ಮಾನ್ಯ ರಾಜ್ಯಪಾಲರು ಹಾಗೂ ವಿಧಾನಸಬೆಯ ಸಭಾಧ್ಯಕ್ಷರ ಅವಗಾಹನೆಗೆ ಸಂಡೂರು ವಿಧಾನಸಭಾ ಕ್ಷೇತ್ರದ ಮಹಾಜನತೆ ಮನವಿಯನ್ನು ಸಲ್ಲಿಸಿದರು,

ಮನವಿಪತ್ರದಲ್ಲಿ ಎನಿದೇ..?

ರಾಜಧನವನ್ನು ಟ್ಯಾಕ್ಸ್ ರೂಪದಲ್ಲಿ ನೀಡುವ ಏಕೈಕ ತಾಲ್ಲೂಕು ಎಂದರೆ ನಮ್ಮ ಸಂಡೂರು. ಸಂಡೂರು ತಾಲೂಕಿನಲ್ಲಿ ಗಣಿ ಮತ್ತು ಕೈಗಾರಿಕೆಯು ಹೆಚ್ಚು ಸದ್ದು ಮಾಡುತ್ತಿರುವುದು ತಮ್ಮೆಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಸಂಡೂರು ಅತೀ ಹೆಚ್ಚು ದೈವದತ್ತವಾಗಿರುವ ನೈಸರ್ಗಿಕ ಸಂಪತ್ತನ್ನು ಹೊಂದಿದೆ ಇದರಿಂದ ಸಂಪದ್ಭರಿತ ಮತ್ತು ಸಮೃದ್ಧಿಯಾಗಿರಬೇಕಾದ ಸಂಡೂರು ಹಾಗೆಯೇ ಇದೇ ಸದ್ಯದ ಸ್ಥಿತಿಯಲ್ಲಿ ತಾಲೂಕು ನೂರಾರು ಸಮಸ್ಯೆಗಳಿಂದ ಬಳಲುತ್ತಿದೆ.

ಸ್ವಾತಂತ್ರ್ಯಬಂದು 75 ವರ್ಷ ಕಳೆದರೂ ಸಂಡೂರು ತಾಲೂಕಿನ 14 ಗ್ರಾಮಗಳು ಇದುವರೆಗೂ ಸರ್ವೇ ಸೇಟ್ಲಮೆಂಟ್ ಆಗದೆ ಹಾಗೇ ಉಳಿದಿದೆ ಈ ಬಡ ಹಿಂದುಳಿದ ರೈತರ ಪರಿಸ್ಥಿತಿಯನ್ನು ಕೇಳುವರಿಲ್ಲ,ಬಗರ್ ಹುಕುಂ ಸಮಿತಿಯ ಅಧ್ಯಕ್ಷರಾದ ಮಾನ್ಯ ಶಾಸಕರು ಕರೆದಿಲ್ಲ 2 ವರ್ಷಗಳಿಂದ ಸಮಿತಿಯ ಸದಸ್ಯರು ಸಭೆಯನ್ನು ಕರೆಯುವಂತೆ ಶಾಸಕರಲ್ಲಿ ಮನವಿಯನ್ನು ಮಾಡಿದರು ಸಹ ಕರೆಯದೆ ಇಲ್ಲಿಯವರೆಗೂ ಸುಮಾರು ತಾಲೂಕಾಧ್ಯಂತ ಅಕ್ರಮ ಸಕ್ರಮದಲ್ಲಿ 2018/2019 ರ ಅವಧಿಯಲ್ಲಿ 9.000ಕ್ಕೂ ಹೆಚ್ಚು ಅರ್ಜಿಗಳು ನೀಡಿದ್ದರೂ ಅವುಗಳು ಇತ್ಯರ್ಥವಾಗದೆ ಹಾಗೇ ಇದ್ದುದರಿಂದ ಈ ಬಡ ಕುಟುಂಬಗಳ ರೈತರ ಗೋಳು ಕೇಳುವವರಿಲ್ಲದೇ ಅರ್ಜಿಗಳು ಅನಾಥವಾಗಿ ದೂಳು ಹಿಡಿದು ಕುಳಿತಿವೆ. ಬಹುತೇಕವಾಗಿ ಎಸ್ ಸಿ/ಎಸ್ ಟಿ ಸಮಾಜದವರೆ ಸರ್ಕಾರಿ ಜಮೀನಿನಲ್ಲಿ 75% ನಷ್ಟು ಜನರು ಉಳುಮೆಮಾಡುತ್ತಿದ್ದಾರೆ ಅವರೆಲ್ಲರಿಗೂ ಹಕ್ಕು ಪತ್ರ ಇಲ್ಲದೆ ಇಂದು ನಿರಾಶ್ರಿತರಾಗಿದ್ದಾರೆ.

ಸಂಡೂರು ತಾಲೂಕಿನ ನಾಗರಿಕರಿಗೆ ಸುಸಜ್ಜಿತವಾದ ಆಸ್ಪತ್ರೆ ವ್ಯವಸ್ಥೆ ಇರುವುದಿಲ್ಲ, ಗರ್ಭಿಣಿ ಮಹಿಳೆಯರು ಸ್ಕ್ಯಾನ್ ಮಾಡಿಸಬೇಕೆಂದರೆ ದೂರದ ಬಳ್ಳಾರಿ ಮತ್ತು ಹೊಸಪೇಟೆ ನಗರಗಳಿಗೆ ಹೋಗಬೇಕಾಗಿದೆ ಸಾಕಷ್ಟು ಗಣಿ ಕಂಪನಿಗಳು ಮತ್ತು ಬೃಹತ್ ಕೈಗಾರಿಕೆಗಳನ್ನು ಹೊಂದಿರುವ ತಾಲೂಕಿನಲ್ಲಿ ದೈತ್ಯವಾಗಿ ಬೆಳೆದು ನಿಂತಿರುವ ಜೆ ಎಸ್ ಡಬ್ಲೂ, ದೋಣಿಮಲೈ ಎನ್ಎಂಡಿಸಿ ಹಾಗೂ ಸಾಕಷ್ಟು ಸಣ್ಣಪುಟ್ಟ ಉದ್ದಿಮೆ ಕಂಪನಿಗಳನ್ನು ಹೊಂದಿರುವ ಕ್ಷೇತ್ರವಾಗಿದ್ದರೂ ಸ್ಥಳೀಯರಿಗೆ ಯಾರಿಗೂ ಸಹ ಉಪಯೋಗವಾಗದೇ ಸ್ಥಳೀಯ ಯುವಕರಿಗೆ ಉದ್ಯೋಗವಿಲ್ಲದೆ ನಿತ್ಯದ ಜೀವನವನ್ನು ನಡೆಸಲು ಹೊಟ್ಟೆಪಾಡಿಗಾಗಿ ಉದ್ಯೋಗವನ್ನು ಅರಸಿ ಕಾಪಿ ಎಸ್ಟೇಟ್ ಗಳಿಗೆ, ಬೆಂಗಳೂರು, ಮಂಡ್ಯ, ಹಾಗೂ ಪಕ್ಕದ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ನಮ್ಮ ಸಂಡೂರು ತಾಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ.

ಸಂಡೂರು ತಾಲೂಕಿನಲ್ಲಿ ಸುಮಾರು 60ಕ್ಕೂ ಹೆಚ್ಚು ಕೆರೆಗಳಿವೆ ನೀರು ತುಂಬಿಸುವ ಯೋಜನೆಗೆ ಧ್ವನಿ ಎತ್ತದೆ ಇರುವುದು ವಿಪರ್ಯಾಸ ಮತ್ತು ನಮ್ಮ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿನ ತುಂಗಭದ್ರಾ ಜಲಾಶಯವು ಅತ್ಯಂತ ಸನಿಹದಲ್ಲಿ ಇದ್ದರು ಸಹ ಸಂಡೂರು ನಗರಕ್ಕೆ 8 ರಿಂದ 12 ದಿನಗಳಿಗೊಮ್ಮೆ ನೀರನ್ನು ಸರಬರಾಜು ಮಾಡಲಾಗುತ್ತದೆ ಇದು ನಮ್ಮ ದುರಾದೃಷ್ಟವೇ ಸರಿ.

ಸಂಡೂರು ದೈವಸೃಷ್ಟಿಯಿಂದ ಒದಗಿಬಂದ ಅದ್ಭುತವಾದ ಪರಿಸರವನ್ನು ತೀರ್ಥಕ್ಷೇತ್ರಗಳನ್ನು ಮತ್ತು ದೇವಸ್ಥಾನಗಳನ್ನು ಐತಿಹಾಸಿಕ, ಪ್ರಾಚೀನ ಹಾಗೂ ಪುರಾಣ ಪುಣ್ಯ ಕತೆಗಳಲ್ಲಿ ಉಲ್ಲೇಖವಾಗಿದ್ದು ಮತ್ತು ಸಾಕಷ್ಟು ಪ್ರಸಿದ್ಧಿಯನ್ನು ಹೊಂದಿರುತ್ತದೆ. ಇವುಗಳನ್ನು ಸಂರಕ್ಷಿಸಿ ಮತ್ತು ಅಭಿವೃದ್ಧಿ ಪಡಿಸುವ ಕೆಲಸವಾಗಿರುವುದಿಲ್ಲ

ಸಂಡೂರು ತಾಲೂಕು ಗಣಿಬಾಧಿತ ಪ್ರದೇಶವಾಗಿದೆ ಆದರೆ ಇಲ್ಲಿನ ಜನರಿಗೆ ಪುನರುಜ್ಜೀವನ ಮತ್ತು ಪುನರ್ವಸತಿ ನೆನೆಗುದಿಗೆ ಬಿದ್ದಿದೆ. ಇಂತಹ ಅನೇಕ ನೂರಾರು ಸಮಸ್ಯೆಗಳಿವೆ ಇದರ ಬಗ್ಗೆ ಸದನದಲ್ಲಿ ಚರ್ಚಿಸುವುದು ಹಾಗೂ ಪರಿಹಾರವನ್ನು ಕಂಡುಕೊಳ್ಳದೇ ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಕಟ್ಟು ಬಿದ್ದು ದಕ್ಷ ಪ್ರಾಮಾಣಿಕತೆಗೆ ಹೆಸರಾಗಿರುವ ಲೇಡಿ ಸಿಂಗಂ ಎಂದೇ ಪ್ರಸಿದ್ಧಿಯಾಗಿರುವ ಶ್ರೀಮತಿ ಹೆಚ್.ಜೆ.ರಶ್ಮಿ ಅವರ ಮೇಲೆ ಮಾಡಿರುವ ಆರೋಪಗಳು ಶುದ್ಧ ಸುಳ್ಳಾಗಿರುತ್ತದೆ.

ಸಂಡೂರು ತಾಲೂಕಿನ ತೋರಣಗಲ್ಲು ಹೋಬಳಿಯ ಮಾಳಾಪುರ ಗ್ರಾಮದ ಸರ್ವೆ ನಂ:123 ವಿಸ್ತೀರ್ಣ 47.63 ಎಕರೆ ಸ್ಥಳೀಯ ಎಸ್ ಸಿ/ಎಸ್ ಟಿ ರೈತರು ಸುಮಾರು 70 ವರ್ಷಗಳಿಂದ ಉಳುಮೆಯನ್ನು ಮಾಡುತ್ತ ಅನುಭವಿಸುತ್ತಿದ್ದಾರೆ ಆದರೆ ಶಾಸಕರಾದ ಈ.ತುಕಾರಾಂ ರವರ ಆಪ್ತರು ಮತ್ತು ಮಾಜಿ ಸಚಿವರಾದ ಸಂತೋಷ್ ಎಸ್ ಲಾಡ್ ರವರ ಆಪ್ತರು ಈ ಎಸ್ ಸಿ/ಎಸ್ ಟಿ ರೈತರನ್ನು ಒಕ್ಕಲೆಬ್ಬಿಸಲು ಮುಂದಾದಾಗ ಮಾನ್ಯ ತಹಶೀಲ್ದಾರರು ರೈತರ ಕೂಗಿಗೆ ಸ್ಪಂದಿಸಿ ದಾಖಲೆಗಳನ್ನು ಪರಿಶೀಲಿಸಿದಾಗ ಪೂರ್ಣ ಪ್ರಮಾಣದ ದಾಖಲೆಗಳ ಕೊರತೆಯಿಂದ ಕೂಡಿರುವುದನ್ನು ಮನಗೊಂಡು ಮಾನ್ಯ ಎಸಿ ಯವರಿಗೆ ಸರ್ಕಾರಿ ಭೂಮಿಯಾಗಿರುತ್ತದೆ ಎಂದು ವರದಿಯನ್ನು ಸಲ್ಲಿಸಲಾಗಿರುತ್ತದೆ.

ಕೋವಿಡ್ 2019 ರ ಮಹಾಮಾರಿಯಿಂದ ಇಡೀ ಬಾರತ ದೇಶ ಸೇರಿದಂತೆ ಲಾಕ್ ಡೌನ್ ಘೋಷಿಸಿಕೊಂಡ ಸಂಧರ್ಭದಲ್ಲಿ ನಮ್ಮ ತಾಲೂಕಿನಲ್ಲಿ ವಿಶೇಷ ಕಾಳಜಿ ವಹಿಸಿ ಕ್ರಮಕೈಗೊಳ್ಳುವುದು ಅನಿವಾರ್ಯವಾಗಿತ್ತು, ಏಕೆಂದರೆ ಗಣಿಗಾರಿಕೆಯು ಮತ್ತು ಕೈಗಾರಿಕೆ ಕಂಪನಿಗಳು ಇದ್ದು ಇಲ್ಲಿಗೆ ಉದ್ಯೋಗ ಅರಸಿ ದೇಶದ ವಿವಿಧ ರಾಜ್ಯಗಳಿಂದ ಜನರು ಬರುತ್ತಾರೆ. ಸ್ಥಳೀಯ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಲಾಠಿ ಹಿಡಿಯುವುದು ಅನಿವಾರ್ಯವಾಗಿತ್ತು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಶಾಸಕರು ತಮ್ಮ ವೈಯಕ್ತಿಕ ಪ್ರತಿಷ್ಠಿಗೆ ಬಳಸಿಕೊಂಡಿರುತ್ತಾರೆ ಆದ್ದರಿಂದ ತಾವುಗಳು ಮಾನ್ಯ ಶಾಸಕರು ಮಾಡಿರುವ ಅಪಾದನೆಯನ್ನು ಪರಿಶೀಲಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿಪತ್ರದಲ್ಲಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here