ತೋರಣಗಲ್ಲುನಲ್ಲಿ ಮಕ್ಕಳಿಗೆ ಕೋವಿಡ್ ಲಸಿಕಾಕರಣ-ಚಾಲನಾ ಕಾರ್ಯಕ್ರಮ,

0
422

ಸಂಡೂರು:ಜ:03:-ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣದ ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಮತ್ತು ಶಿಕ್ಷಣ ತಜ್ಞೆ ಶ್ರೀಮತಿ ಸಾವಿತ್ರಿ ಬಾಯಿ ಪುಲೆ ಇವರ ಜನ್ಮದಿನದಂದು ವಿಶೇಷವಾಗಿ ಹಮ್ಮಿಕೊಳ್ಳಲಾದ “ಕಿರಿಯರಿಗೆ ಕೋವ್ಯಾಕ್ಸಿನ್ ಲಸಿಕಾಕರಣ” ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರತಿದೆ,

ಶಾಲೆಯ 15-18 ವರ್ಷದೊಳಗಿನ ಒಟ್ಟು ಮಕ್ಕಳ ಸಂಖ್ಯೆ- 383 ಇದರಲ್ಲಿ 293 ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕಲಾಗಿದೆ, ಯಾವುದೇ ಮಕ್ಕಳಿಗೆ ಅಡ್ಡ ಪರಿಣಾಮಗಳು ಕಂಡು ಬರಲಿಲ್ಲ, ಅಂಜಿಕೆ ಇಲ್ಲದೆ ಮಕ್ಕಳು ಲಸಿಕೆ ಹಾಕಿಸಿಕೊಂಡರು ಹಾಗೇ ಲಸಿಕೆ ಪಡೆದ ಸಂಭ್ರಮ ಮತ್ತು ಕೋವಿಡ್ ನಿಂದ ಸ್ವಲ್ಪ ಮಟ್ಟಿನ ರಕ್ಷಣೆ ದೊರೆಯಿತು ಎನ್ನುವ ಸಂತಸವನ್ನು ತಮ್ಮ ತಮ್ಮ ಅಭಿಪ್ರಾಯಗಳಲ್ಲಿ ವ್ಯಕ್ತಪಡಿಸಿದರು,

ಹಾಜರಾತಿ ಪ್ರಕಾರ ಕೆಲವು ಮಕ್ಕಳು ಗೈರು ಹಾಜರಾಗಿದ್ದರು ಹಾಗೆ ಕೆಲವು ಮಕ್ಕಳಿಗೆ ಜ್ವರ ಚಿಕಿತ್ಸೆ ಪಡೆದ ಕಾರಣಕ್ಕೆ ಲಸಿಕೆ ಹಾಕಿಲ್ಲ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದರು, ಈ ಶಾಲೆಯ ಮಕ್ಕಳಿಗೆ ಲಸಿಕೆ ಹಾಕಲು ಸ್ಕಾಡ್ ವೆಸ್ ಮೊಬೈಲ್ ಮೆಡಿಕಲ್ ತೋರಣಗಲ್ಲು ಯುನಿಟ್ ಗೆ ನಿಯೋಜಿಸಲಾಗಿತ್ತು, ವೈದ್ಯರ ಸಮ್ಮುಖದಲ್ಲಿ ಮಕ್ಕಳು ಯಾವುದೇ ಭಯ ಇಲ್ಲದೆ ಖುಷಿ ಖುಷಿಯಿಂದ ಲಸಿಕೆ ಪಡೆದದ್ದು ಲಸಿಕೆಗಾಗಿ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಅವರು ತಿಳಿಸಿದರು

ಈ ಸಂದರ್ಭದಲ್ಲಿ ಡಾ.ಶೋಭಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,ಶಾಲೆಯ ಮುಖ್ಯ ಗುರುಗಳಾದ ಧರಿಯಪ್ಪ ರಾಥೋಡ್, ಸಹಶಿಕ್ಷಕರಾದ ಶರಣಬಸವ, ವಿರುಪಾಕ್ಷಪ್ಪ, ಹೆಚ್.ಎಮ್ ಉಮಾ, ಹೇಮಪ್ರಭ, ಆರೋಗ್ಯ ಸಿಬ್ಬಂದಿ ಈರಣ್ಣ, ಮಂಗಳಾ, ಅರ್ಪಿತ, ಆಶಾ ಕಾರ್ಯಕರ್ತೆ ಶ್ರೀದೇವಿ, ಹುಲಿಗೆಮ್ಮ,ಆಶಾ, ತೇಜಮ್ಮ, ಗೋವಿಂದಮ್ಮ, ಮಂಜುಳಾ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here