ಕಿರಿಯರಿಗಾಗಿ ಕೋವ್ಯಾಕ್ಸಿನ್ ಲಸಿಕಾಕರಣ, ಸರ್ಕಾರದ ಉತ್ತಮ ನಿರ್ದಾರ; ಮುಖ್ಯಗುರು ಅರ್. ಶಿವಕುಮಾರ್ ಅಭಿಪ್ರಾಯ

0
568

ಸಂಡೂರು:ಜ:06:- ಕಿರಿಯರಿಗಾಗಿ ಕೋವ್ಯಾಕ್ಸಿನ್ ಲಸಿಕಾಕರಣ ಕೈಗೊಂಡಿರುವುದು ಸರ್ಕಾರದ ಉತ್ತಮ ನಿರ್ಧಾರ ಎಂದು ದರೋಜಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಆರ್ ಶಿವಕುಮಾರ್ ಅವರು ತಿಳಿಸಿದರು

ಸಂಡೂರು ತಾಲೂಕಿನ ದರೋಜಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ 15-18 ವರ್ಷದೊಳಗಿನ ಮಕ್ಕಳ ಕೋವ್ಯಾಕ್ಸಿನ್ ಲಸಿಕಾಕರಣ ಕಾರ್ಯಕ್ರಮ ಕುರಿತು ಮಾತನಾಡಿದ ಅವರು, ಶಾಲೆಗಳು ಪ್ರಾರಂಭವಾದ ದಿನಗಳಿಂದ ಮಕ್ಕಳಿಗೆ ಕೋವಿಡ್ ಭಯ ಇದ್ದೇ ಇತ್ತು ಹೇಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು ಎಂದು ಮಕ್ಕಳಿಗೆ ಭಯವಿತ್ತು, ಈಗಾಗಲೇ ಮಕ್ಕಳ ಪೋಷಕರು ಸರಾಸರಿ 80 % ರಷ್ಟು ಲಸಿಕೆ ಪಡೆದಿದ್ದಾರೆ, ಅದು ಸಮಾಧಾನ ಸಂಗತಿ, ಅದರೊಂದಿಗೆ ಮಕ್ಕಳಿಗೂ ಲಸಿಕೆ ದೊರೆತಿರುವುದು ಅತ್ಯಂತ ಮಹತ್ವದ್ದಾಗಿದೆ ಮಕ್ಕಳಿಗೆ ಸುರಕ್ಷತೆ ದೊರೆತಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ 15-18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕಾಕರಣ ಜನವರಿ 3 ರಿಂದ ಪ್ರಾರಂಭವಾಗಿದೆ ಕೇವಲ ನಾಲ್ಕು ದಿನಗಳಲ್ಲಿ ಈಗಾಗಲೇ ಶೇಕಡ 58% ರಷ್ಟು ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ ಇಂದು ಈ ಭಾಗದ ಪ್ರೌಢಶಾಲೆಯಲ್ಲಿ ಲಸಿಕಾಕರಣ ಹಮ್ಮಿಕೊಳ್ಳಲಾಗಿದೆ ಶಾಲೆಯ ದಾಖಲಾತಿ ಪ್ರಕಾರ 15-18 ವರ್ಷ ವಯಸ್ಸಿನ 381 ಮಕ್ಕಳಿದ್ದು, ಇಂದು ಹಾಜರಿ 339 ಮಕ್ಕಳಿದ್ದು ಅದರಲ್ಲಿ 332 ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಯಿತು,

ವೈದ್ಯಕೀಯ ಚಿಕಿತ್ಸೆಯಲ್ಲಿರುವ ಮತ್ತು ಗೈರು ಆದವರಿಗೆ ಮುಂದಿನ ಲಸಿಕಾಕರಣ ದಿನದಂದು ಲಸಿಕೆ ನೀಡಲಾಗುವುದು, ಎರಡು ಮೂರು ದಿನಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಏರು ಗತಿಯಲ್ಲಿ ಸಾಗುತ್ತಿವೆ ನಾವೆಲ್ಲರೂ ಮತ್ತೊಮ್ಮೆ ಸರ್ಕಾರದ ಆದೇಶ ದಂತೆ ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ,ಮಾಸ್ಕ್ ಧರಿಸುವುದು, ಕೈತೊಳೆಯುವುದು, ಅಂತರ ಕಾಪಾಡುವುದು ಹಾಗೆ ಲಸಿಕೆ ಪಡೆಯದಿರುವವರು ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಮನವೊಲಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಹೊಸ ದರೋಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಮ್ಮೆ ಗಂಗಣ್ಣ, ಪ್ರೌಢಶಾಲೆಯ ಶಾಲೆಯ ಮುಖ್ಯ ಗುರುಗಳಾದ ಆರ್. ಶಿವಕುಮಾರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಪಿ.ಡಿ.ಒ ಪ್ರಭುಗೌಡ, ಸದಸ್ಯರಾದ ಮಾಯಣ್ಣ, ಸ್ವಾಮಿ,ಕಿರಣ್,ಮಾರೇಶ, ಗ್ರಾಮದ ಮುಖಂಡರಾದ ಹಳ್ಳದಪ್ಪ, ಗಣೇಶ್, ಆರೋಗ್ಯ ಸುರಕ್ಷಾಧಿಕಾರಿ ಸತ್ಯಮ್ಮ, ಇಸ್ಮಾಯಿಲ್, ಸಿ.ಹೆಚ್.ಒ ರೇಣುಕಾ, ಎರ್ರಿಸ್ವಾಮಿ,ಸಹ ಶಿಕ್ಷಕರಾದ ಪರಸಪ್ಪ, ಜ್ಯೋತಿ, ಸಿರಿನಾ, ದೇವಮ್ಮ, ಶಮೀನಾ,ಸುಧಾ,ಮಾಧವಿ, ಆಶಾ ಕಾರ್ಯಕರ್ತೆ ಮಹಂತಮ್ಮ, ಲತಾ, ಶ್ರೀದೇವಿ, ಜ್ಯೋತಿ, ಸರಸ್ವತಿ, ಮತ್ತು ಮಕ್ಕಳ ಮೆಚ್ಚಿನ ನಿವೃತ್ತ ಶಿಕ್ಷಕರಾದ ಮಹಾರುದ್ರಪ್ಪ ಅವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here