ಒಮಿಕ್ರಾನ್ ರೂಪಾಂತರಿ ಕೊರೋನಾ ವೈರಸ್ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಲಿ: ಡಾ.ಗೋಪಾಲ್ ರಾವ್,

0
512

ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಅವರಣದಲ್ಲಿ ಆಯೋಜಿಸಲಾದ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಗೋಪಾಲ್ ರಾವ್ ಮಾತನಾಡಿ ಕೋವಿಡ್ ಮೂರನೇ ಅಲೆ ಪ್ರಾರಂಭವಾಗಿದೆ, ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿವೆ, ನಿನ್ನೆ ತಾಲೂಕಿನಲ್ಲಿ 35 ಹೊಸ ಪ್ರಕರಣಗಳು ಕಂಡುಬಂದಿವೆ, ಅವಳಿ ಜಿಲ್ಲೆಯಲ್ಲಿ ಒಂದು ಮರಣವಾಗಿದೆ ಇನ್ನು ನಿರ್ಲಕ್ಷ ಮಾಡುವುದು ಬೇಡ, ಎಲ್ಲರೂ ಕೋವಿಡ್ ನಿಯಮಾವಳಿಗಳನ್ನು ತಪ್ಪದೇ ಪಾಲಿಸ ಬೇಕಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಕೇವಲ ಹತ್ತು ದಿನಗಳ ಅಂತರದಲ್ಲಿ 150 ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿವೆ ಸದ್ಯ 149 ಯಾಕ್ಟಿವ್ ಕೋವಿಡ್ ಪ್ರಕರಣಗಳು ತಾಲೂಕಿನಲ್ಲಿ ಇವೆ, ಇದರಲ್ಲಿ ಹೆಚ್ಚಿನ ಪ್ರಕರಣಗಳು ಕಾರ್ಖಾನೆಗಳಲ್ಲಿ ಕೆಲಸ ಮಾಡುವವರೆ ಅಗಿದ್ದಾರೆ, ಅದಕ್ಕಾಗಿ ಭಯ ಪಡುವುದು ಬೇಡ, ಗ್ರಾಮ ಮಟ್ಟದಲ್ಲಿ ಬರುವ ಮುನ್ನ ಎಚ್ಚರಿಕೆ ವಹಿಸೋಣ, ಅನಾವಶ್ಯಕವಾಗಿ ಮನೆಯಿಂದ ಹೊರಬರುವುದು ಬೇಡ, ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸಬೇಕು, ಎಲ್ಲಾ ಕಡೆ ಮಾಸ್ಕ್ ಧರಿಸಿರಲೇಬೇಕು, ಅಂತರವನ್ನು ಕಾಯ್ದು ಕೊಳ್ಳಬೇಕು,ನಮ್ಮೆಲ್ಲರ ರಕ್ಷಣೆಗಾಗಿ ಗುಂಪು ಗೂಡುವುದನ್ನು ಬಿಡಬೇಕು, ಅವರು ಹೀಗೆ, ಇವರು ಹೀಗೆ, ಎಂದು ವಾದ ಮಾಡುವುದು ಬಿಡಬೇಕು, ಎರಡೂ ಡೋಸ್ ಲಸಿಕೆಯನ್ನು ಪಡೆಯಲೇ ಬೇಕು, ಎಲ್ಲಾ ವಾರಿಯರ್ಸ್‌ ಕೋವಿಡ್ ಮುನ್ನೆಚ್ಚರಿಕೆಯಾಗಿ ಬೂಸ್ಟರ್ ತಪ್ಪದೇ ಪಡೆಯಬೇಕು ಎಂದು ತಿಳಿಸಿದರು,
ನಂತರ ಕೋವಿಡ್ ಸುರಕ್ಷತೆ ಬಗ್ಗೆ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು, ಪ್ರತಿಜ್ಞೆಯನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಬೋಧಿಸಿದರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಹೆಚ್. ಹನುಮಂತಪ್ಪ, ಯು.ರಮೇಶ್, ಮುಖಂಡರಾದ ಲೋಕೇಶ್, ಹೋಬಳಿ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಹೆಚ್ ಅಂಜಿನಪ್ಪ, ಕರ್ನಾಟಕ ರಕ್ಷಣಾ ಸಮಿತಿ ಸದಸ್ಯರಾದ ರಾಘವೇಂದ್ರ, ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್,ಡಾ.ವೆಂಕಟೇಶ್ವರ ರೆಡ್ಡಿ, ಡಾ. ದೀಪಾ ಪಾಟೀಲ್, ಡಾ.ಆಯೆಶಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಸೂಪರಿಂಟೆಂಡೆಂಟ್ ಹರೀಶ್, ಹಿರಿಯ ಆರೋಗ್ಯ ಸಂರಕ್ಷಣಾಧಿಕಾರಿ ಶಕೀಲ್ ಅಹಮದ್, ಔಷಧೀ ತಜ್ಞ ಮಂಜುನಾಥ್, ಶಸಿಧರ್,ನಿಜಾಮ್, ರೋಜಾ,ಮಾರೇಶ,ವೆಂಕಪ್ಪ, ನವೀನ್, ತಿಪ್ಪೇಸ್ವಾಮಿ, ಹುಲಿಗೆಮ್ಮ, ರೂಪ, ಶಿವಕುಮಾರ್, ಮಾಬುಸಾಬ್, ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here