ತಂಬಾಕು ಕಾಯ್ದೆ ಉಲ್ಲಂಘನೆ : 12 ಪ್ರಕರಣ ದಾಖಲು.

0
214

ದಾವಣಗೆರೆ ಜ. 24:-‘ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ-2003’ ರ ಅಡಿಯಲ್ಲಿ ಹರಿಹರ ತಾ|| ಯಲವಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ 2 ಶೈಕ್ಷಣಿಕ ಸಂಸ್ಥೆಗಳ ಸುತ್ತ ಹಾಗೂ ಇತರೆ ಅಂಗಡಿಗಳಲ್ಲಿ ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿರುವವರ ಮೇಲೆ ಸೆಕ್ಷನ್-4 ರ ಅಡಿಯಲ್ಲಿ 08 ಪ್ರಕರಣ 650 ರೂ ದಂಡ, ಸೆಕ್ಷನ್-6ಎ ಅಡಿಯಲ್ಲಿ 2 ಪ್ರಕರಣ 200 ರೂ ದಂಡ, 6ಬಿ ಅಡಿಯಲ್ಲಿ 2 ಪ್ರಕರಣ 100 ರೂ ದಂಡ ಒಟ್ಟು 12 ಪ್ರಕರಣ 950 ರೂ ದಂಡವನ್ನು ಸ್ಥಳದಲ್ಲಿಯೇ ಸಂಗ್ರಹಿಸಲಾಗಿದೆ.
ಜಿಲ್ಲೆಯಾದ್ಯಂತ ಶೈಕ್ಷಣಿಕ ಸಂಸ್ಥೆಯ 100 ಗಜದ ಒಳಗೆ ಇರುವ ತಂಬಾಕು ಉತ್ಪನ್ನಗಳ ಅಂಗಡಿ ಮಾಲಿಕರು ತಂಬಾಕು ಉತ್ಪನ್ನಗಳ ಮಾರಾಟ ಸ್ಥಗಿತಗೊಳಿಸಬೇಕು ಇಲ್ಲವಾದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ತಂಡ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸರ್ಕಾರದ ಸಹಾಯದೊಂದಿಗೆ ಕೋಟ್ಪಾ ಕಾನೂನು ಅನ್ವಯ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತ ದೇವರಾಜ್ ಕೆ ಪಿ ತಿಳಿಸಿ, ಸಾರ್ವಜನಿಕ ಸ್ಥಳದಲ್ಲಿರುವ ಅಂಗಡಿ ಮಾಲಿಕರು ಧೂಮಪಾನ ನಿಷೇಧದ ನಾಮಫಲಕವನ್ನು ಕಟ್ಟು-ನಿಟ್ಟಾಗಿ ಪ್ರದರ್ಶಿಸಲು ಹಾಗೂ ಅಳವಡಿಸಲು ತಂಡ ಸೂಚಿಸಿತು.
ತಂಬಾಕು ತನಿಖಾ ತಂಡದಲ್ಲಿ ಹರಿಹರ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಚಂದ್ರಮೋಹನ್, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಂ.ವಿ ಹೊರಕೇರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಉಮ್ಮಣ್ಣ, ಮುಖ್ಯ ಪೇದೆ ಹಾಗೂ ಪಿಡಿಒ ರಾಮಲಿಂಗಪ್ಪ ಯಲವಟ್ಟಿ ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here