ಇತ್ತೀಚಿನ ಮನು ಕುಲಕ್ಕೆ ಅಂಟಿದ ಬಹು ದೊಡ್ಡ ಕಾಯಿಲೆ ಎಂದರೆ ಅದುವೇ ಕ್ಯಾನ್ಸರ್: ಡಾ.ಗೋಪಾಲ್ ರಾವ್,

0
775

ಸಂಡೂರು:ಪೆ:03:-ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಚರಿಸಲಾದ ” ವಿಶ್ವ ಕ್ಯಾನ್ಸರ್ ದಿನ ” ಆಚರಣೆಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಜಗತ್ತಿನಲ್ಲಿ ಪ್ರತಿ ವರ್ಷ 22 ದಶ ಲಕ್ಷ ಜನರು ಕ್ಯಾನ್ಸರ್ ನ ಹೊಸ ರೋಗಿಗಳಾಗುತ್ತಿದ್ದಾರೆ, 7 ದಶ ಲಕ್ಷ ರೋಗಿಗಳು ಮರಣವನ್ನು ಹೊಂದುತ್ತಿದ್ದಾರೆ, ಕ್ಯಾನ್ಸರ್ ಬಂದರೆ ಮರಣವೇ ಅಂತಿಮವಲ್ಲ, ಪ್ರಾಥಮಿಕ ಹಂತದಲ್ಲಿ ಗೊತ್ತಾದರೆ, ಶಸ್ತ್ರಚಿಕಿತ್ಸೆ, ಕೆಮೋಥೆರಫಿ, ರೇಡಿಯೋಥೆರಪಿ, ಔಷಧೋಪಚಾರ ಮತ್ತು ಜೈವಿಕ ಚಿಕಿತ್ಸೆ ಮೂಲಕ ಸಾವು ತಡೆಯಬಹುದು,
ಕ್ಯಾನ್ಸರ್ ನಮ್ಮ ಕೈ ಮೀರಿದ ಕಾಯಿಲೆ ಏನೂ ಅಲ್ಲ, ಕ್ಯಾನ್ಸರ ಕಾಯಿಲೆಯ ಬಗ್ಗೆ ಅರಿವು ಅತೀ ಮುಖ್ಯ ಎಂದು ತಿಳಿಸಿದರು,

ಕ್ಯಾನ್ಸರ್ ಅನ್ನು ಅರ್ಬುದ ರೋಗ ಅಥವಾ ಕೆಡಕು ಮಾಡುವ ರೋಗ ಎಂತಲೂ ಕರೆಯುವರು, ಜೀವ ಕೋಶಗಳ ಅನಿಯಮಿತ ಬೆಳವಣಿಗೆಯ ಒಂದು ಸಮೂಹವು ಒಂದು ಭಾಗದಲ್ಲಿ ಕಾಣಿಸಿಕೊಂಡು ಇತರೆ ಅಂಗಾಂಗಗಳ ಮೇಲೆ ದುಷ್ಪರಿಣಾಮ ಉಂಟಾಗುವುದನ್ನು ಕ್ಯಾನ್ಸರ್ ಎನ್ನುವರು, ಇದು ಸಾಂಕ್ರಾಮಿಕ ಕಾಯಿಲೆ ಅಲ್ಲ, ರೋಗಿಯ ಆರೈಕೆ ಮಾಡಿದಾಗೂ ಒಬ್ಬರಿಂದೊಬ್ಬರಿಗೆ ಬರದು, ಬದಲಾವಣೆಯ ಬದುಕಿನ ಶೈಲಿ, ಕೆಟ್ಟ ಅಹಾರ ಪದ್ದತಿ,ಕಲುಷಿತ ವಾತಾವರಣ, ತಂಬಾಕು ಸೇವನೆ, ವಿಕಿರಣಗಳು, ಧೂಮಪಾನ, ಮದ್ಯಪಾನ, ಕಡಿಮೆ ದೈಹಿಕ ಚಟುವಟಿಕೆಯಿಂದ ಕ್ಯಾನ್ಸರ್ ಬರುತ್ತದೆ, ಅಲ್ಲದೇ ವಂಶವಾಹಿನಿಯಿಂದ ಅಸ್ವಾಭಾವಿಕ ವೈಪರೀತ್ಯಗಳಿಂದಲೂ ಕ್ಯಾನ್ಸರ್ ಬರುತ್ತದೆ ಎಂದು ಅವರು ತಿಳಿಸಿದರು,

ಡಾ.ಸಿಂಧೂಷಾ ಅವರು ಮಾತನಾಡಿ ಮಹಿಳೆಯರಲ್ಲಿ ಮುಖ್ಯವಾಗಿ ಸ್ತನ ಕ್ಯಾನ್ಸರ್‌, ಗರ್ಭಕಂಠದ, ಅಂಡಾಶದ ಕ್ಯಾನ್ಸರ್, ಪುರುಷ ಮತ್ತು ಮಹಿಳೆಯರಲ್ಲಿ ಶ್ವಾಸಕೋಶದ, ತುಟಿ, ಬಾಯಿ, ಗಂಟಲು, ಕರುಳಿನ, ಜಠರದ,ರಕ್ತದ ಕ್ಯಾನ್ಸರ್, ಹಾಗೇ ಪುರುಷರ ಪ್ರಾಟೆಸ್ಟ್ ಗ್ರಂಥಿಯ ಕ್ಯಾನ್ಸರ್ ಮುಖ್ಯವಾಗಿ ಕಾಣಿಸುವವು, ಮೂವತ್ತು ವರ್ಷ ಮೇಲ್ಪಟ್ಟ ಎಲ್ಲರೂ ರಕ್ತದೊತ್ತಡದ, ಮಧುಮೇಹ ಪರೀಕ್ಷೆ ಜೊತೆಗೆ ಅಸಾಮಾನ್ಯ ಗಡ್ಡೆಗಳು, ತೂಕ ಕಡಿಮೆಯಾಗುವುದು, ನಿರಂತರ ಕೆಮ್ಮು, ಉರಿ ಮೂತ್ರದ ತೊಂದರೆ, ಕಡಿಮೆಯಾಗದ ನೋವು, ಎದೆಯುರಿ, ಆಹಾರ ನುಂಗಲು ಕಷ್ಟ, ಕರುಕಲು ದ್ವನಿ, ರಾತ್ರಿ ವಿಪರೀತ ಬೆವರು, ರಕ್ತ ಸ್ರಾವ, ಮಹಿಳೆಯರಲ್ಲಿ ಮುಟ್ಟಿನ ದೋಷ ಕಂಡುಬಂದಾಗ ತಪ್ಪದೇ ಕ್ಯಾನ್ಸರ್ ಪರೀಕ್ಷೆ ಮಾಡಿಸುವುದು ಉತ್ತಮ,ಕ್ಯಾನ್ಸರ್ ಬೇಗ ಪತ್ತೆ ಹಚ್ಚಿದರೆ ಪರಿಣಾಮಕಾರಿ ಚಿಕಿತ್ಸೆ ದೊರೆಯುವುದು, ಕ್ಯಾನ್ಸರ್ ಎಂದು ಗೊತ್ತಾದ ನಂತರ ಭಯ ಹಾಗೂ ಖಿನ್ನತೆಗೆ ಒಳಗಾಗದೆ ಅನುಸರಣಾ ಚಿಕಿತ್ಸೆಯು ಮಹತ್ವದ್ದಾಗಿರುತ್ತದೆ, ಮಹಿಳೆಯರ ಗರ್ಭಕಂಠದ ಕ್ಯಾನ್ಸರ್‌ ತಡೆಯಲು ಸುರಕ್ಷಿತ ಲೈಂಗಿಕ ಅತಿ ಮುಖ್ಯವಾಗಿದೆ, ಮಾರುಕಟ್ಟೆಯಲ್ಲಿ ಹೆಚ್.ಪಿ.ವಿ ವ್ಯಾಕ್ಸಿನ್ ಲಭ್ಯವಿದ್ದರೂ ಲಸಿಕೆ ಪಡೆಯಲು ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದರು,

ಡಾ.ದೀಪಾ ಪಾಟೀಲ್ ಅವರು ಬಾಯಿ ಕ್ಯಾನ್ಸರ್ ಕುರಿತು ಮಾತನಾಡಿ, ತಂಬಾಕು ಉತ್ಪನ್ನಗಳನ್ನು ಕೈ ಬಿಡುವಂತೆ, ಹಲ್ಲುಗಳನ್ನು ರಕ್ಷಿಸುವ ಕುರಿತು ಮಾಹಿತಿ ನೀಡಿದರು,

ಇದೇ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಪ್ರತಿ ವರ್ಷ ಫೆಬ್ರವರಿ 4 ರಂದು “ವಿಶ್ವ ಕ್ಯಾನ್ಸರ್ ದಿನ” ಆಚರಿಸಿ ಕ್ಯಾನ್ಸರ್ ಪೀಡಿತರಿಗೆ ಧೈರ್ಯ ತುಂಬುವ, ರೋಗಿಗಳ ಕಳಂಕ ದೂರಮಾಡುವುದು ಮತ್ತು ಕಟ್ಟುಕತೆಗಳನ್ನು ಹೋಗಲಾಡಿಸಿ, ಕ್ಯಾನ್ಸರ್ ರೋಗದ ನಿಜಾಂಶವನ್ನು ಜನರಿಗೆ ಮನವರಿಕೆ ಮಾಡುವ ಸಲುವಾಗಿ ಕಳೆದ 22 ವರ್ಷಗಳಿಂದ ಜಾಗೃತಿ ಕಾರ್ಯಕ್ರಮವನ್ನು ಅಚರಿಸಲಾಗುತ್ತಿದೆ, ಪ್ರತಿಯೊಬ್ಬರು ಉತ್ತಮ ಜೀವನ ಶೈಲಿಯನ್ನು ರೂಡಿಸಿಕೊಳ್ಳುವುದು, ಆರೋಗ್ಯಕರ ಅಭ್ಯಾಸಗಳು, ಉತ್ತಮ ಪೌಷ್ಟಿಕಾಹಾರ ಸೇವನೆ, ರಾಸಾಯನಿಕ ಪದಾರ್ಥಗಳ ದುರ್ಬಳಕೆ ನಿಲ್ಲಿಸುವುದು, ತಂಬಾಕು, ಧೂಮಪಾನ ಮತ್ತು ಮದ್ಯಪಾನ ತ್ಯಜಿಸುವುದು, ದೈಹಿಕ ವ್ಯಾಯಾಮ, ದ್ಯಾನ, ಪ್ರಾಣಾಯಾಮ ಮಾಡುವುದು, ಅತಿ ಹೆಚ್ಚು ಸೂರ್ಯನ ಕಿರಣಗಳಿಗೆ ಮೈ ವೊಡ್ಡುವುದು, ಒತ್ತಡದ ಜೀವನದಿಂದ ದೂರವಿರುವುದು, ಮಾನಸಿಕ ಚಿತ್ತದಿಂದ ಉತ್ತಮ ಜೀವನ ನಡೆಸುವುದರಿಂದ ಕ್ಯಾನ್ಸರ್ ನ್ನು ದೂರವಿಡಬಹುದು, ಕ್ಯಾನ್ಸರ್ ರೋಗಿಗಳ ಮಾನಸಿಕ ಸ್ಥೈರ್ಯ ಹೆಚ್ಚಿಸುವುದು, ಸಮಾಜದಲ್ಲಿ ಸಹಜವಾಗಿ ಬಾಳುವಂತೆ ಕಾಣುವುದು, ಆರೈಕೆಗೆ ಸಹಾಯ ಹಸ್ತ ಚಾಚುವುದು ಮಾಡುವುದು, 2022 ರ ಘೋಷಣೆಯಂತೆ ಆರೈಕೆಯ ಅಂತರವನ್ನು ಮುಕ್ತ ಮಾಡುವುದು, ಕ್ಯಾನ್ಸರ್ ತಡೆಯುಲು ಸಹಕಾರಿಯಾಗುವುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಗೋಪಾಲ್ ರಾವ್, ಪ್ರಸೂತಿ ತಜ್ಞರಾದ ಡಾ. ಸಿಂಧೂಷಾ, ದಂತ ಆರೋಗ್ಯಾಧಿಕಾರಿ ಡಾ. ದೀಪಾ ಪಾಟೀಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಫಾರ್ಮಸಿ ಅಧಿಕಾರಿ ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಕ ಶಕೀಲ್ ಅಹಮದ್, ಲ್ಯಾಬ್ ತಂತ್ರಜ್ಞ ಶಶಿಧರ್, ನಿಜಾಮುದ್ದೀನ್, ಎನ್.ಸಿ. ಡಿ ಕೌನ್ಸಲರ್ ವೆಂಕಪ್ಪ, ರೋಜಾ, ಮಾರೇಶ, ನೇತ್ರಾಧಿಕಾರಿ ತಿಪ್ಪೇಸ್ವಾಮಿ, ಕರಿಬಸಮ್ಮ, ಮಂಜು, ಶ್ರೀನಿವಾಸ್ ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳಾದ ಐಶ್ವರ್ಯ, ಅಂಬಿಕಾ, ಭವ್ಯಾ, ಲಕ್ಷ್ಮಿದೇವಿ,ಶ್ರೀಶಾ, ಚಾರುಲತಾ, ಅಮೃತಾ, ಸ್ಟಾಫ್ ನರ್ಸ್ ಗೀತಾ, ಮಾಲಾ, ಆಶಾ ಕಾರ್ಯಕರ್ತೆ ಹನುಮಂತಮ್ಮ , ನೀಲಮ್ಮ, ಲಕ್ಷ್ಮಿ, ಮೇಘನಾ, ಎರ್ರಮ್ಮ, ಇತರರು ಜಾಗೃತಿ ಜಾಥದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here