ದಿವಂಗತರಾದ ಗುರುಗಳ ಸ್ಮರಣಾರ್ಥ ಪುಣ್ಯಸ್ಮರಣೆ, ಗುರುವಂದನಾ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿ/ನಿಗಳ ಸ್ನೇಹ ಸಮ್ಮಿಲನ.!!

0
144

ಸಂಡೂರು/ತೋರಣಗಲ್ಲು:ಫೆ:08:-ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆ ತೋರಣಗಲ್ಲು( ರೈಲ್ವೆ ನಿಲ್ದಾಣ)ದಲ್ಲಿ 04.002.2022ರಂದು 1998-99ನೇ ಸಾಲಿನ ಗೆಳೆಯರ ಬಳಗದಿಂದ ದಿವಂಗತರಾದ ಶ್ರೀ ಎಸ್. ಶಿವಕುಮಾರ್, ಶ್ರೀ ತಿಮ್ಮಕೃಷ್ಣರಾವ್, ಶ್ರೀ ಎಂ.ವಿ.ಹುರಕಡ್ಲಿ ಗುರುಗಳ ಸ್ಮರಣಾರ್ಥ ಪುಣ್ಯಸ್ಮರಣೆ ಹಾಗೂ ಗುರುವಂದನಾ ಕಾರ್ಯಕ್ರಮ ನೆರವೇರಿಸಲಾಗಿತ್ತು.

ಇದೇ ವೇಳೆ ಸುಮಾರು 22 ವರ್ಷಗಳ ಹಿಂದೆ ಪಾಠಭೋದನೆ ಮಾಡಿದ ಗುರುಗಳಾದ ಶ್ರೀ.ಟಿ.ಪರಮೇಶ್ವರಪ್ಪ, ಶ್ರೀ ವೆಂಕಟೇಶಲು. ಕೆ, ಶ್ರೀ ವಿ.ಬಿ.ಸುಂಕಧ್, ಶ್ರೀ ಆರ್.ಡಿ. ನಾಯಕ್, ಶ್ರೀ ರುದ್ರಮುನಿ ಜಿ.ಎಂ, ಶ್ರೀ ಗಂಗಾಧರ ಹಾಗೂ ಭೋಧಕೇತರ ಸಿಬ್ಬಂದಿಗಳಾದ ಶ್ರೀ ಕೆ.ಮರಿಬಸಪ್ಪ, ಶ್ರೀ ಶಿವಯ್ಯ ಎಸ್, ಹಾಗೂ ತಿಪ್ಪೇಸ್ವಾಮಿ, ಅಬ್ದುಲ್ ರೌಫ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ದಿವಂಗತ ಗುರುಗಳ ಸ್ಮರಣಾರ್ಥ ಪ್ರತಿಭಾವಂತ ವಿದ್ಯಾರ್ಥಿಗಳಾದ ಶೈನಾಜ್ ಬೇಗಂ, ವೀರೇಶ್. ಕೆ, ಹೇಮಾವತಿ ಜೆ, ರವರಿಗೆ ದಿವಂಗತ ಎಂ.ವಿ.ಹುರಕಡ್ಲಿ ರವರ ಧರ್ಮಪತ್ನಿ ಶ್ರೀಮತಿ ಪುಷ್ಪಾ ರವರು “ಪ್ರತಿಭಾ ಪುರಸ್ಕಾರ” ನೀಡಿ ಗೌರವಿಸಿದರು.

ಕಾರ್ಯಕ್ರಮ ಉದ್ಘಾಟಿಸಿ, ದಿವ್ಯ ಸಾನಿಧ್ಯ ವಹಿಸಿಕೊಂಡಿದ್ದ ಸಂಡೂರು ವಿರಕ್ತಮಠದ ಶ್ರೀ ಮ.ನಿ.ಪ್ರ,ಪ್ರಭುಮಹಾಸ್ವಾಮಿಗಳು ಮಾತನಾಡಿ.. ಪ್ರತಿ ದಿನವೂ ನಮಗೆ ಅನ್ನ ನೀಡುವ ರೈತ, ದೇಶಕಾಯುವ ಯೋಧ, ವಿದ್ಯೆ ನೀಡುವ ಗುರು ಈ ಮೂವರನ್ನು ಸ್ಮರಿಸಬೇಕು, ಹಾಗೆಯೇ ಗುರುವಿಲ್ಲದೆ ಸಮಾಜದ ಏಳಿಗೆ ಸಾಧ್ಯವಿಲ್ಲ ಎಂದು ಆಶೀರ್ವಚನ ನೀಡಿದರು.1998-99ನೇ ಸಾಲಿನ ಹಳೆಯ ವಿದ್ಯಾರ್ಥಿ-
ವಿದ್ಯಾರ್ಥಿನಿಯರು ತಮ್ಮ ಹಿಂದಿನ ಶಾಲೆಯ ದಿನದ ಅನುಭವಗಳನ್ನು ಹಂಚಿಕೊಂಡರು.

ಹಂಪಿ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಸಹಪಾಠಿ ಡಾ.ಉಮಾ ಎಚ್.ಎಂ,ಅವರನ್ನು ಸನ್ಮಾನಿಸಿ ಅಭಿನಂದಿಸಿ, ಹಳೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸ್ಮರಣಿಕೆಗಳನ್ನು ನೀಡಲಾಯಿತು .

ಇದೆ ವೇಳೆ ಸನ್ಮಾನ ಸ್ವೀಕರಿಸಿದ ಗುರುಗಳಾದ ಆರ್.ಬಿ.ನಾಯಕ್, ಶ್ರೀ ಗಂಗಾಧರ್ ಹಿತವಚನಗಳನ್ನು ತಿಳಿಸಿಕೊಟ್ಟರು.

ಟಿ.ಎಫ್.ಆರ್.ಇ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಅಂಗಡಿ ಮಲ್ಲಿಕಾರ್ಜುನಪ್ಪ, ಸದಸ್ಯರಾದ ಗೌರಿ ಶಂಕರಗೌಡ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಾಲೆಯ ಮುಖ್ಯಗುರುಗಳಾದ ಶ್ರೀ ಧರಿಯಪ್ಪ ಹಾಗೂ ಬೋಧಕ -ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 1998-99ನೇ ಸಾಲಿನ 90 ಜನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮಕ್ಕೆ ಸ್ನೇಹಬಳಗದ ಕೆ.ನಾಗರತ್ನ ಸ್ವಾಗತ ಕೋರಿದರು,ಶಿವಲಿಂಗಪ್ಪ ವಂದಿಸಿದರು.

LEAVE A REPLY

Please enter your comment!
Please enter your name here