ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಎರಡನೇ ಡೊಸ್ ಕೋವಿಡ್ ಲಸಿಕಾಕರಣ,

0
731

ಸಂಡೂರು:ಪೆ:0೭:-ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಎರಡನೇ ಡೋಸ್ ಕೋವಿಡ್ ಲಸಿಕಾಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,

ಈ ಶಾಲೆಯಲ್ಲಿ ಜನವರಿ ಮೂರರಂದು ಮೊದಲ ಡೋಸ್ ಲಸಿಕಾಕರಣದಲ್ಲಿ 15-18 ವರ್ಷದ ಒಟ್ಟು 318 ಮಕ್ಕಳಿಗೆ ಲಸಿಕೆ ನೀಡಲಾಗಿತ್ತು, ಲಸಿಕೆ ನೀಡಿದ ಕೆಲವು ದಿನಗಳ ನಂತರ ಮಕ್ಕಳಿಗೆ ಕೋವಿಡ್ ಟೆಸ್ಟ್ ಮಾಡಲಾಗಿ, ಮೂವತ್ತು ಮಕ್ಕಳಿಗೆ ಪಾಸಿಟಿವ್ ಕಂಡು ಬಂದಿದ್ದು, ಅವರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಯಿತು, ಅವರೆಲ್ಲರೂ ಅರೋಗ್ಯವಾಗಿದ್ದು, ಪಾಸಿಟಿವ್ ಬಂದಿರುವ ಮಕ್ಕಳನ್ನು ಹೊರತು ಪಡಿಸಿ ಉಳಿದವರಿಗೆ ಇಂದು ಎರಡನೇ ಡೋಸ್ ಲಸಿಕೆ ನೀಡಲಾಯಿತು, ಪಾಸಿಟಿವ್ ಬಂದವರಿಗೆ ಅರವತ್ತು ದಿನಗಳ ನಂತರ ಲಸಿಕೆ ನೀಡಲಾಗುವುದು ಎಂದು ಡಾ. ಶೋಭಾ ತಿಳಿಸಿದರು,

ಈ ಸಂದರ್ಭದಲ್ಲಿ ಸ್ಕೋಡ್ ವೆಸ್ ಮೊಬೈಲ್ ಮೆಡಿಕಲ್ ಯುನಿಟ್ ನ ಡಾ.ಶೋಭಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಶಾಲೆಯ ಮುಖ್ಯ ಗುರುಗಳಾದ ಧರಿಯಪ್ಪ ರಾಥೋಡ್, ಸಹಶಿಕ್ಷಕರಾದ ಶರಣ ಬಸವ, ಹೇಮಪ್ರಭ, ಆರೋಗ್ಯ ಸಿಬ್ಬಂದಿ ಭಾಗ್ಯ ಲಕ್ಷ್ಮಿ, ಈರಣ್ಣ, ಮಂಗಳಾ, ಅರ್ಪಿತ, ಆಶಾ ಕಾರ್ಯಕರ್ತೆ ಕಾವೇರಿ, ಶ್ರೀದೇವಿ, ರಾಜೇಶ್ವರಿ, ರೇಖಾ, ಹುಲಿಗೆಮ್ಮ,ಆಶಾ, ಗೋವಿಂದಮ್ಮ, ಮಂಜುಳಾ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here