ಫೆಬ್ರವರಿ ೨೭ ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ: ಜವರೇಗೌಡ.ಟಿ

0
100

ರಾಮನಗರ ಫೆ.೧೦: ಜಿಲ್ಲೆಯಲ್ಲಿ ಫೆಬ್ರವರಿ ೨೭ ರಂದು ರಾಷ್ಟಿçಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪೋಷಕರು ತಪ್ಪದೇ ತಮ್ಮ ೦ ಯಿಂದ ೫ ವರ್ಷದೊಳಗಿನ ಮಗುವಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ ಎಂದು ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈ ಬಾರಿ ಚನ್ನಪಟ್ಟಣ-೧೮೫೮೫, ಕನಕಪುರ-೨೩೬೯೫, ಮಾಗಡಿ-೧೩೭೭೭ ಹಾಗೂ ರಾಮನಗರ-೨೪೪೩೬ ಸೇರಿದಂತೆ ಒಟ್ಟು ೮೦೪೯೩ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ೫೫೦ ಲಸಿಕಾ ಕೇಂದ್ರಗಳು, ೨೮ ಟ್ರನ್ಸಿಟ್, ೨೪ ಮೊಬೈಲ್ ಟೀಮ್, ೨೨೯೨ ವ್ಯಾಕ್ಸಿನೇಟರ್ ಹಾಗೂ ೧೨೦ ಸೂಪರ್‌ವೈಸರ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಫೆಬ್ರವರಿ ೨೭ ರಂದು ಬೂತ್‌ಗಳಲ್ಲಿ, ಫೆಬ್ರವರಿ ೨೮ ಹಾಗೂ ಮಾರ್ಚ್ ೧ ರಂದು ಗ್ರಾಮೀಣ ಪ್ರದೇಶ ಹಾಗೂ ಫೆಬ್ರವರಿ ೨೭ ರಿಂದ ಮಾರ್ಚ್ ೨ ವರೆಗೆ ನಗರ ಪ್ರದೇಶದ ಮನೆ- ಮನೆ ಭೇಟಿ ಮೂಲಕ ಬೂತ್‌ಗಳಲ್ಲಿ ಲಸಿಕೆ ಪಡೆಯದೆ ಇರುವ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಬೇಕು. ಜಿಲ್ಲೆಯಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದAತೆ ನೋಡಿಕೊಳ್ಳಬೇಕು. ಇದಕ್ಕಾಗಿ ಯೋಜನೆ ಸಿದ್ಧಪಡಸಿ ಲಸಿಕಾ ಕಾರ್ಯಕ್ಕೆ ನಿಯೋಜನೆಯಾಗುವ ಸಿಬ್ಬಂದಿಗಳಿಗೆ ತರಬೇತಿ ನೀಡುವಂತೆ ತಿಳಿಸಿದರು.

ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಕಟ್ಟಡ ಕಾಮಗಾರಿ, ರಸ್ತೆ ಕಾಮಗಾರಿ, ಇಟ್ಟಿಗೆ ಉತ್ಪದನಾ ಘಟಕ, ವಲಸೆ ಕಾರ್ಮಿಕರು ಇರುವ ಸ್ಥಳಗಳನ್ನು ಗುರುತಿಸಿ ತಪ್ಪದೇ ಲಸಿಕೆಯನ್ನು ಮಕ್ಕಳಿಗೆ ನೀಡಿ. ಕಾರ್ಮಿಕ ಅಧಿಕಾರಿಗಳು ಸ್ಥಳಗಳನ್ನು ಗುರುತಿಸಿ ಲಸಿಕಾ ಕೆಲಸ ಸಂಘಟಿಸುವAತೆ ತಿಳಿಸಿದರು.

ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ತಾಯಾಂದಿರಿಗೆ ಮಾಹಿತಿ ನೀಡಿ ಮಕ್ಕಳಿಗೆ ಲಸಿಕೆ ನೀಡಲು ಸಹಕರಿಸಬೇಕು. ಲಸಿಕೆ ನೀಡುವ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಪರಿಪಾಲನೆ ಮಾಡಬೇಕು ಎಂದರು.

ಬೆಸ್ಕಾA ಅವರು ಲಸಿಕೆ ಸಂಗ್ರಾಹಣೆಗೆ ನಿರಂತರ ವಿದ್ಯುತ್ ವ್ಯವಸ್ಥೆ ಮಾಡಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಲಸಿಕೆ ಕಾರ್ಯಕ್ರಮಕ್ಕೆ ಅಂದಾಜು ೧೦೧ ವಾಹನದ ಅವಶ್ಯಕತೆ ಇದ್ದು, ವಾಹನಗಳ ವ್ಯವಸ್ಥೆ ಮಾಡಬೇಕು. ವಾಹನವು ಫೆಬ್ರವರಿ ೨೬ ರಂದು ಆರೋಗ್ಯ ಇಲಾಖೆ ಅವರು ತಿಳಿಸುವ ಸ್ಥಳಗಳಲ್ಲಿ ವರದಿಯಾಗಬೇಕು ಎಂದರು.

ಆರ್.ಸಿ.ಹೆಚ್. ಅಧಿಕಾರಿ ಡಾ: ಪದ್ಮ ಅವರು ಮಾತನಾಡಿ ಕಳೆದ ಸಾಲಿನಲ್ಲಿ ೮೦೩೪೮ ಮಕ್ಕಳಿಗೆ ಲಸಿಕೆ ನೀಡಲು ಗುರಿ ನಿಗಧಿಪಡಿಸಲಾಗಿತ್ತು. ೮೫೦೮೯ ಮಕ್ಕಳಿಗೆ ಲಸಿಕೆ ನೀಡಿ ೧೦೬% ಸಾಧನೆ ಮಾಡಲಾಗಿದೆ. ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ. ಲಸಿಕೆ ಪಡೆದ ನಂತರ ಯಾವುದೇ ಮಗುವಿನಲ್ಲಿ ಅಡ್ಡಪರಿಣಾಮ ವರದಿಯಾಗಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ: ನಿರಂಜನ್, ಜಿಲ್ಲಾ ಶಸ್ತç ಚಿಕಿತ್ಸಕ ಡಾ: ಶಶಿಧರ್, ಡಿ.ಟಿ.ಒ ಡಾ: ಕುಮಾರ್, ಡಿಎಲ್‌ಒ ಡಾ: ಮಂಜುನಾಥ್, ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್, ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here