ಗಿಡ ನೆಡುವ ಮೂಲಕ ಪರಿಸರ ದಿನ ಆಚರಣೆ

0
153

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಜಿಲ್ಲಾ ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ, ರಾಮನಗರ ಇವರ ಸಹಯೋಗದಲ್ಲಿ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ -2021 ಅಂಗವಾಗಿ ಶನಿವಾರ ಕಾನೂನು ಅರಿವು – ನೆರವು ಕಾರ್ಯಕ್ರಮ ಜರುಗಿತು.

ಜೂನ್ 5 ರಂದು ಪ್ರತಿ ವರ್ಷ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಬಾರಿ ಜುಲೈ 3 ರಂದು ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಗಿಡ ನೆಡುವ ಮೂಲಕ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಜಿ. ರಮಾ ನೆರವೇರಿಸಿದರು.

ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ದೇವರಾಜ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ನ್ಯಾಯಾಧೀಶರುಗಳಾದ ಮರುಳಾಸಿದ್ದಾರಾಧ್ಯ, ಸಿದ್ಧಲಿಂಗಪ್ರಭು, ಅನುಪಮ ಲಕ್ಷ್ಮಿ,
ಬಿ. ವೆಂಕಟಪ್ಪ,ಪರಿಮಳ ತುಬಾಕ್, ಮಾರುತಿ ಸಿಂಧೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹನುಮಂತರಾಜು ವಿ., ಕಾರ್ಯದರ್ಶಿ ಅಶೋಕ್,ಉಪಾಧ್ಯಕ್ಷ ಮಹೇಶ್.ಎಂ.ಜಿ., ಖಜಾಂಚಿ ನಂಜೇಗೌಡ, ಅರಣ್ಯ ಇಲಾಖೆಯ ಎಸಿಎಫ್ ಸುರೇಂದ್ರ, ಆರ್.ಎಫ್.ಓ. ಕಿರಣ್, ಡಿ.ಆರ್.ಎಫ್. ಕೆ.ರಾಜು, ಇದ್ದರು.

LEAVE A REPLY

Please enter your comment!
Please enter your name here