“ನಾಗರ ಪಂಚಮಿ ಎಂದರೆ ಮಹಿಳೆಯರಿಗೆ ಸಡಗರ ಸಂಭ್ರಮ”

0
67

ಕೊಟ್ಟೂರಿನಲ್ಲಿ ನಾಗರ ಪಂಚಮಿ ಹಬ್ಬವನ್ನು ಭಕ್ತರು  ನಾಗರಾಜ ಪ್ರಾಥಮಿಕ ಶಾಲೆಯಲ್ಲಿರುವ ಮಹಿಮೆಯ ನಾಗರಕಲ್ಲಿಗೆ ಕುಟುಂಬ ಸಮೇತ ಸಡಗರದಿಂದ ಹಾಲು ಎರೋದು ಹಬ್ಬವನ್ನು ಆಚರಿಸಿದರು,

ಭಕ್ತರ ಹರಿಕೆಗಳ ತೀರಿಸುವ ಇಲ್ಲಿನ ಮಹಿಮೆಯ ನಾಗರಿಕರಲ್ಲಿ ಗೆ ಭಕ್ತರು 4 ಕೆಜಿ ಯ ಬೆಳ್ಳಿಯ ನಾಗರಮೂರ್ತಿ  ಅರ್ಪಿಸಲಾಯಿತು.ಮತ್ತು ಹಳೆಗನ್ನಡದ ಶಿಲ್ಪಿಗಳು ಕಾಣಬಯಸಲಾಗುತ್ತದೆ.

ಪ್ರತಿ ವರ್ಷದಂತೆ ನಾಗರಾಜ ಭಜನಾ ಸಂಘ ಕೊರ್ಕಣ ಇವರಿಂದ ಭಕ್ತಿ ಪೂರ್ವಕವಾಗಿ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಹಿರಿಯರ ಜನಪದ ಭಜನಾ ಹಾಡುಗಳಿಗೆ  ಮಕ್ಕಳು ನೃತ್ಯದಿಂದ  ಕುಣಿದು ಕುಪ್ಪಳಿಸಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ರೊಟ್ಟಿ ಪಂಚಮಿ ಬಹುದೊಡ್ಡ ಹಬ್ಬ. ಈ ಹಬ್ಬಕ್ಕಾಗಿ ಹೆಣ್ಣುಮಕ್ಕಳು ವರ್ಷವಿಡೀ ಕಾಯುತ್ತಿರುತ್ತಾರೆ. ಈ ಹಬ್ಬಕ್ಕೆ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಕರೆದುಕೊಂಡು ಬರುವ ಪದ್ಧತಿ  ಇಂದಿಗೂ ಪ್ರಚಲಿತದಲ್ಲಿದೆ.

ಶ್ರಾವಣ ಮಾಸ ಆರಂಭವಾಗುತ್ತಿದಂತೆ ಕರ್ನಾಟಕದಲ್ಲಿ ಹಬ್ಬಗಳ ಸಂಭ್ರಮ ನೋಡುವುದೇ ಆನಂದ. ಶ್ರಾವಣ ಮಾಸದ ಮೊದಲ ಹಬ್ಬವೇ ನಾಗರ ಪಂಚಮಿ. ವಿಶೇಷವಾಗಿ ಹೆಣ್ಣು ಮಕ್ಕಳು ಅತೀ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬವೂ ಕೂಡ.

ನಾಗರ ಪಂಚಮಿ ಹಬ್ಬಕ್ಕೆ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಕರೆದುಕೊಂಡು ಬರುವ ಪದ್ಧತಿ ಹೈದರಾಬಾದ್ ಮತ್ತು ಉತ್ತರ ಕರ್ನಾಟಕದಲ್ಲಿ ಇಂದಿಗೂ ಪ್ರಚಲಿತದಲ್ಲಿದೆ. ಜನಪದರು ಮೂರು ದಿನಗಳ ಕಾಲ ಪಂಚಮಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ. ನಾಗರ ಅಮಾವಾಸ್ಯೆ, ಚೌತಿ ಮತ್ತು ಪಂಚಮಿ ಎಂಬ ಆಚರಣೆಗಳು ನಡೆದುಕೊಂಡು ಬಂದಿವೆ.

ನಾಗರ ಪಂಚಮಿ ಐತಿಹ್ಯ:
ಪಂಚಮಿ ಹಬ್ಬಕ್ಕೆ ಸಂಬಂಧಿಸಿದಂತೆ ಹಲವು ಜನಪದ ಐತಿಹ್ಯಗಳೂ ಇವೆ. ಒಂದು ಐತಿಹ್ಯದ ಪ್ರಕಾರ ರೈತನೊಬ್ಬ ಹೊಲ ಉಳುತ್ತಿದ್ದಾಗ, ರಂಟೆಯ ಕುಡಕ್ಕೆ ಸಿಕ್ಕ ಹಾವಿನ ಮರಿಗಳೆಲ್ಲ ಸತ್ತು ಹೋದವು. ಇದರಿಂದ ಸಿಟ್ಟಿಗೆದ್ದು ತಾಯಿ ಹಾವು ರೈತನ ಮನೆಯ ಜನರನ್ನೆಲ್ಲ ಕಚ್ಚಿ ಕೊಲ್ಲುತ್ತದೆ. ಅಷ್ಟೇ ಅಲ್ಲ, ಅತ್ತೆಯ ಮನೆಯಲ್ಲಿರುವ ರೈತನ ಮಗಳನ್ನು ಕಚ್ಚಲು ಅಲ್ಲಿಗೂ ಹೋಗುತ್ತದೆ. ಆ ಸಂದರ್ಭದಲ್ಲಿ ರೈತನ ಮಗಳು ಮಣ್ಣಿನಿಂದ ನಾಗನನ್ನು ಮಾಡಿ, ಹಾಲೆರೆಯುತ್ತಿರುತ್ತಾಳೆ. ಇದನ್ನು ಕಂಡು, ಹಾವಿನ ರೋಷ ಇಳಿಯುತ್ತದೆ.

ರೈತನ ಮಗಳು ಹೇಗಾದರ ಮಾಡಿ ತನ್ನ ತವರನ್ನು ಉಳಿಸಿಕೊಡು ಎಂದು ಕೇಳಿಕೊಳ್ಳುತ್ತಾಳೆ. ಆಗ ನಾಗರ ಹಾವಿಗೆ ಕರುಣೆ ಹುಟ್ಟಿ, ರೈತನ ಮನೆಗೆ ಹಿಂತಿರುಗಿ ಬ೦ದು ವಿಷವನ್ನು ಮರಳಿ ಹೀರಿ, ಅವರನ್ನೆಲ್ಲ ಬದುಕಿಸುತ್ತದೆ. ಅಂದಿನಿಂದ ನಾಗವನ್ನು ಪೂಜಿಸುವ ಪರಂಪರೆ ಬೆಳೆದು ಬಂದಿದೆ ಎಂಬುದು ಜನಪದರ ನಂಬಿಕೆ. ಮಗಳು ನಾಗ ಪೂಜೆಯಿಂದ ತವರ ಜನರನ್ನು ಉಳಿಸಿಕೊಂಡಿದ್ದರಿಂದ ಪಂಚಮಿ ಹಬ್ಬಕ್ಕೆ ಮಗಳನ್ನು ತವರಿಗೆ ಕರೆಸುವ ಪದ್ಧತಿ ರೂಢಿಗೆ ಬಂದಿದೆ ಎನ್ನುವುದು ಜನಪದವಿಶ್ವ ಕೋಶದಲ್ಲಿ ಉಲ್ಲೇಖವಾಗಿದೆ.

ನಾಗರ ಪಂಚಮಿ ಮಹತ್ವ:
ಸರ್ಪ ದೇವರನ್ನು ಮನೆಯ ರಕ್ಷಕ ಎಂದೂ ಪರಿಗಣಿಸಲಾಗುತ್ತದೆ. ಈ ದಿನ ನಾಗ ದೇವರನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ನಿಯಮಗಳು ಮತ್ತು ವಿಧಿ-ವಿಧಾನಗಳ ಮೂಲಕ ಪೂಜೆ ಕೈಂಕರ್ಯಗಳನ್ನು ಮಾಡುವುದರಿಂದ, ಮಹಾದೇವನು ಪ್ರಸನ್ನನಾಗುತ್ತಾನೆ ಮತ್ತು ವ್ಯಕ್ತಿಯ ಪ್ರತಿಯೊಂದು ಆಸೆಯನ್ನು ಪೂರೈಸುತ್ತಾನೆ ಎಂಬುದು ಭಕ್ತರ ನಂಬಿಕೆ .

ರೊಟ್ಟಿ ಪಂಚಮಿ:
ಹೈದರಾಬಾದ್ ಮತ್ತು ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ಅಂಗವಾಗಿ ರೊಟ್ಟಿ ಪಂಚಮಿಯನ್ನು ವಿಶೇಷವಾಗಿ ಆಚರಿಸುವ ಸಂಪ್ರದಾಯವಿದೆ. ಎಣ್ಣೆಗಾಯಿ, ಹೆಸರು, ಮಡಕೆ ಕಾಳು ಪಲ್ಯ, ಉಸುಳಿ, ಮೊಸರಿನ ಉಂಡೆ, ಶೇಂಗಾ-ಗುರೆಳ್ಳು ಚಟ್ನಿಯೊಂದಿಗೆ ಎಳ್ಳು ಹಚ್ಚಿದ ಸಜ್ಜೆ, ಜೋಳದ ಖಡಕ್‌ ರೊಟ್ಟಿಯನ್ನು ನೆರೆಮನೆಯವರೊಂದಿಗೆ ಪರಸ್ಪರ ಹಂಚಿಕೊಂಡು ಸವಿಯುವ ಪದ್ಧತಿಯಿದೆ.

ಕು೦ಬಳದ ಎಲೆಯೊಳಗೆ ನಾಗಪ್ಪ:
ನಾಗಪ್ಪನ ನೈವೇದ್ಯಕ್ಕಾಗಿ ಅರಳು, ಅರಳಿಟ್ಟು, ತಂಬಿಟ್ಟು, ವಿಧ ವಿಧದ ಉಂಡಿ, ಚಕ್ಕಲಿಗಳನ್ನು ತಯಾರಿಸುತ್ತಾರೆ. ನಾಗರ ಅಮಾವಾಸ್ಯೆಯ ದಿನ ಹಣತೆಯ ಪೂಜೆ ಮಾಡಲಾಗುತ್ತದೆ. ನಾಗಚೌತಿಯ ದಿನ ಹುತ್ತವನ್ನು ಪೂಜಿಸಿ, ಅದೇ ಮಣ್ಣಿನಿಂದ ನಾಗಪ್ಪನನ್ನು ಮಾಡಿ ಹೊಸ ಮಡಕೆಯೊಂದರಲ್ಲಿ ಕು೦ಬಳದ ಎಲೆಯೊಳಗೆ ನಾಗಪ್ಪನನ್ನು ಪ್ರತಿಷ್ಠಾಪಿಸುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ.

ಜೋಕಾಲಿ:- ಪಂಚಮಿ ಹಬ್ಬ ಬಂದರೆ ಎಲ್ಲರೂ ಸೇರಿ ಜೋಕಾಲಿ ಆಡುವುದು ಕಂಡು ಬರುತ್ತದೆ. ಗೆಳತಿಯರೆಲ್ಲ ಕೂಡಿ ಜೋಕಾಲಿ ಆಡುತ್ತಾರೆ. ಬೇರೆ ಬೇರೆ ಊರುಗಳಿಂದ ತವರಿಗೆ ಬಂದ ಹೆಣ್ಣು ಮಕ್ಕಳು ಅವರ ಗೆಳತಿಯರೊಂದಿಗೆ ಸಿಹಿ ತಿಂಡಿಗಳ ಜೊತೆ ತಮ್ಮ ಅತ್ತ ಮನೆಯ ಅನುಭವಗಳನ್ನು ಹಂಚಿಕೊಳ್ಳುತ್ತ ತಮ್ಮದೇ ಆದ ಪ್ರಪಂಚದಲ್ಲಿ ಮೈಮರೆಯುತ್ತಾರೆ.

ಈ ಹಬ್ಬದ ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಚಿಗಟೇರಿ ಕೊಟ್ರೇಶ್, ಕುರುಬರು ಚೆನ್ನಪ್ಪ,ಮಹೇಶಪ್ಪ, ಮೂಗಪ್ಪ, ಸಿ ನಾಗರಾಜ, ಸಿ ವಿಜಯ್ ಕುಮಾರ್,ಜೆ ಮಂಜುನಾಥ್,ಜೆ ಕುಮಾರ್ ಸ್ವಾಮಿ, ಕೆ ಎಂ ತಿಪ್ಪೇಸ್ವಾಮಿ, ಸಿ ಮಂಜುನಾಥ, ಜೈ ಸಮತ, ಎ ಮಹೇಶ, ಸಿ ಗುರು, ಸಿ ಮುತ್ತುರಾಜ್, ಪ್ರಕಾಶ್, ಮಾಹಾಲಿಗಪ್ಪ, ಕೆ ರೇವಣ್ಣ,ಟಿ ಚಂದ್ರಪ್ಪ,ಎಂ ನಾಗರಾಜ್,ಸಿ ಆನಂದ, ಕೆ ನಾಗರಾಜ್, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here