ಫ್ಲೂರೋಸಿಸ್ ಒಂದು ಅಪಾಯಕಾರಿ ರೋಗ; ಅದನ್ನು ಸರಿಯಾದ ರೀತಿಯಲ್ಲಿ ನಿಯಂತ್ರಿಸಬೇಕು: ಸಿಇಓ ದಿವ್ಯ ಪ್ರಭು

0
136

ಮಂಡ್ಯ.ಫೆ.24:- ಫ್ಲೂರೋಸಿಸ್ ಒಂದು ಅಪಾಯಕಾರಿ ರೋಗ, ಅದು ಮನುಷ್ಯರಲ್ಲಿ ಅಂಗಾಂಗ ವ್ಯಫಲ್ಯತೆ ಹಾಗೂ ಅನಿಮಿಯಾ ರೋಗಗಳಿಗೆ ಕಾರಣವಾಗುತ್ತದೆ ಆದ್ದರಿಂದ ಇದನ್ನು ಸರಿಯಾದ ರೀತಿಯಲ್ಲಿ ನಿಯಂತ್ರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಜೆ.ದಿವ್ಯ ಪ್ರಭು ಹೇಳಿದರು.
ಜಿಲ್ಲಾ ಪಂಚಾಯತ್‍ನ ಕಛೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಫೆÇ್ಲೀರೋಸಿಸ್ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮ ಸಹಕಾರ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಮಂಡ್ಯದಲ್ಲಿ ಒಟ್ಟಾರೆ 1980 ಕುಡಿಯುವ ನೀರಿನ ಮೂಲಗಳಿದ್ದು, ಎಲ್ಲಾ ಕುಡಿಯುವ ನೀರಿನ ಮೂಲಗಳನ್ನು ಪರೀಕ್ಷಿಸಿ, ಪರೀಕ್ಷಾ ಕಿಟ್‍ಗಳ ಕೊರತೆ ಬಂದಲ್ಲಿ ಅಧಿಕಾರಿಗಳ ಗಮನಕ್ಕೆ ತನ್ನಿ, ನಾವು ಅದನ್ನು ಪೂರೈಸಲು ಸಿದ್ಧರಿರುತ್ತೇವೆ ಎಂದು ಫ್ಲೂರೋಸಿಸ್ ನಿಯಂತ್ರಣ ಸಮನ್ವಯ ಸಮಿತಿ ಸದಸ್ಯರಿಗೆ ಹೇಳಿದರು.
ನೀರಿನ ಸ್ಯಾಂಪಲ್‍ಗಳನ್ನು ಪಡೆಯಲು ನಿಮ್ಮದೇ ಆದ ಯೋಜನೆಗಳನ್ನು ರೂಪಿಸಿಕೊಳ್ಳಿ. ಅನ್ಯ ಡೇಟಾಗಳಿಗೆ ಅವಲಂಭಿತವಾಗದಿರಿ ಎಂದು ಅಧಿಕಾರಿಗಳಿಗೆ ಹೇಳಿದರು.
ಪರಿಶೀಲನಾ ತಂಡಗಳಿಗೆ, ಕುಡಿಯುವ ನೀರಿನ ಮೂಲಗಳ ಪರೀಕ್ಷೆಗೆ ಒಂದು ನಿರ್ದಿಷ್ಟ ಗುರಿಯನ್ನು ನೀಡಿ, ಆಯೋಜಿಸಲಾದ ತಂಡಗಳು ಶ್ರಮವಹಿಸಿ ಕೆಲಸ ಮಾಡುವ ಹಾಗೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ 356 ಹಳ್ಳಿಗಳು ಫ್ಲೂರೋಸಿಸ್‍ಗೆ ಒಳಗಾಗಿರುವ ಗ್ರಾಮಗಳು ಎಂದು ಗುರುತಿಸಲ್ಪಟ್ಟಿದ್ದು, ಅದರಲ್ಲಿ ಒಟ್ಟು 63 ಹಳ್ಳಿಗಳಲ್ಲಿ RO ಪ್ಲಾಂಟ್‍ಗಳಿಲ್ಲ ಅದನ್ನು ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದು ಮುಂದಿನ ಕ್ರಮಕ್ಕೆ ಆಗ್ರಹಿಸಿ ಎಂದರು.
ನೀರಿನ ಶುದ್ಧೀಕರಣ ಹಾಗೂ ಫ್ಲೋರೈಡ್ ಪತ್ತೆಹಚ್ಚುವಿಕೆಗೆ ಕೇವಲ RO ಪ್ಲಾಂಟ್‍ಗಳಿಗೆ ಅವಲಂಭಿತರಾಗದೆ ಇತರೆ ಮಾರ್ಗಗಳನ್ನು ಅಳವಡಿಸಿ ಎಂದರು.
ಫ್ಲೂರೋಸಿಸ್ ಪತ್ತೆ ಹಚ್ಚಲು ವರ್ಷದಲ್ಲಿ 20 ಶಿಬಿರಗಳನ್ನು ನಡೆಸಲಾಗುತ್ತದೆ, ಸ್ಕ್ರೀನಿಂಗ್ ನಡೆಸಿ ರೋಗ ಲಕ್ಷಣ ಕಂಡುಬಂದವರಿಗೆ ಮೂರು ತಿಂಗಳುಗಳ ಕಾಲ ವೀಕ್ಷಣೆಗೊಳಪಡಿಸಿ ಅವರಿಗೆ ಚಿಕಿತ್ಸೆ ನೀಡಲಾಗುವುದು, ರೋಗ ಲಕ್ಷಣಗಳು ಮುಂದುವರಿದಲ್ಲಿ, ಕೈಗೊಳ್ಳಬಹುದಾದ ಮುಂದಿನ ಕ್ರಮಗಳ ಬಗ್ಗೆ ಗಮನಹರಿಸಿ ಎಂದು ಹೇಳಿದರು.
ಇದರ ನಿಯಂತ್ರಣಕ್ಕೆ ಸ್ವಯಂ ಸೇವಾ ಸಂಸ್ಥೆಗಳ ಜೊತೆ ಎಲ್ಲಾ ಇಲಾಖೆಗಳ ಸಹಕಾರ ಅಗತ್ಯ ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಧಿಕಾರಿಗಳಾದ ಡಾ.ಟಿ.ಎನ್ ಧನಂಜಯ, ಜಿಲ್ಲಾ ಫ್ಲೂರೋಸಿಸ್ ಸಲಹೆಗಾರರಾದ ಡಾ. ದಿವಾಕರ್, ಜಿಲ್ಲಾ ಕ್ಷಯರೋಗ ನಿರ್ಮೂಲನೆ ಅಧಿಕಾರಿಗಳಾದ ಡಾ. ಆಶಾಲತಾ, ಮಾನಸಿಕರೋಗ ತಜ್ಞ ಡಾ.ಕೆ.ಪಿ. ಅಶ್ವಥ್, ಡಾ.ಶಶಿಧರ್, ಮಲೇರಿಯಾ ನಿಯಂತ್ರಣಧಿಕಾರಿ ಡಾ. ಭವಾನಿ ಶಂಕರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here