2017 ರ ರಾಷ್ಟ್ರೀಯ ಸುರಕ್ಷತಾ ಪ್ರಶಸ್ತಿಗೆ ಭಾಜನವಾದ ಸ್ಮಯೋರ್ ಸಂಸ್ಥೆ

0
98

ಭಾರತ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವರು 2017 ರ ರಾಷ್ಟ್ರೀಯ ಸುರಕ್ಷತಾ (ಗಣಿ ) ಪ್ರಶಸ್ತಿಯನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸ್ಮಯೋರ್ ಸಂಸ್ಥೆಯ ದೇವಗಿರಿ ಮ್ಯಾಂಗನೀಸ್ ಮತ್ತು ಕಬ್ಬಿಣದ ಅದಿರು ಗಣಿಗೆ ನೀಡಿ ಗೌರವಿಸಿತು (8.3.2022 ರಂದು) ಈ ಪ್ರಶಸ್ತಿಯನ್ನು ಭಾರತ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಭೂಪೇಂದರ್ ಯಾದವ್ ಅವರು ಸ್ಮಯೋರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಬಹಿರ್ಜಿ ಘೋರ್ಪಡೆಯವರಿಗೆ ಮತ್ತು ಸ್ಮಯೋರ್ ಸಂಸ್ಥೆಯ ಹಿರಿಯ ಗಣಿ ಕಾರ್ಮಿಕರಾದ ದೊಡ್ಡ ಓಬಣ್ಣ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಈ ಹಿಂದೆ ಸ್ಮಯೋರ್ ಸಂಸ್ಥೆಯು ಆರು ಬಾರಿ ಸುರಕ್ಷತಾ ಪ್ರಶಸ್ತಿಯನ್ನು ಪಡೆದು ಪುನಃ ಈ ಬಾರಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂಬುದು ಗಮನಾರ್ಹವಾಗಿದೆ. ಗಣಿಗಳಲ್ಲಿನ ಸುರಕ್ಷತಾ ಮಾನದಂಡಗಳ ಸುಧಾರಣೆಗಾಗಿ ಗಣಿ ನಿರ್ವಾಹಕರ ನಡುವೆ ಸ್ಪರ್ಧಾತ್ಮ ಮನೋಭಾವವನ್ನು ಉತ್ತೇಜಿಸಲು ಮತ್ತು ಅತ್ಯುತ್ತಮ ಸುರಕ್ಷತೆಗೆ ಸರಿಯಾದ ಮನ್ಯತೆ ನೀಡುವ ಉದ್ದೇಶದಿಂದ ಭಾರತ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 1983 ರಲ್ಲಿ ರಾಷ್ಟ್ರೀಯ ಸುರಕ್ಷತಾ ಪ್ರಶಸ್ತಿಯನ್ನು (ಗಣಿ ) ಸ್ಥಾಪಿಸಿತು.
ಈ ಪ್ರಶಸ್ತಿಯುನ್ನು ಸ್ವೀಕರಿಸುವ ಸಂದರ್ಭದಲ್ಲಿ ಸ್ಮಯೋರ್ ಸಂಸ್ಥೆಯ ಮೊಹಮ್ಮದ್ ಅಬ್ದುಲ್ ಸಲಿಂ (ನಿರ್ದೇಶಕರು ಗಣ ), ಸಿ ಎಫ್ ಓ ಉತ್ತಮ್‍ಕುಮಾರ್ ¨ಗೇರಿಯ, ಹಿರಿಯ ಅಧಿಕಾರಿಗಳಾದ ರವಿಂದ್ರ ಪೈ ಮತ್ತು ಬಚಲಪ್ಪ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here