ಭರವಸೆ ಮೂಡಿಸಿದ ಭೈರವ ಸಿನಿಮಾದ ಯುವ ನಿರ್ಮಾಪಕ ಶ್ರೀನಿವಾಸ ಸಿ.ವಿ.ಗೌಡ.

0
811

ದೂರದ ಪಿರಯಪಟ್ಟಣ ದಿಂದ ಬೃಹತ್ ಬೆಂಗಳೂರು ಮಹಾನಗರದಲ್ಲಿ ನೆಲೆಸಿ ಸಿನಿ ಲೋಕದ ಮಾಯಾ ಬಜಾರ್ ನಲ್ಲಿ ಸಣ್ಣದಾಗಿ ಹೆಜ್ಜೆಗಳನ್ನು ಇಡುತ್ತ ಇಡುತ್ತ ಇಂದು ಬಹು ಭಾಷೆಯ ಭೈರವ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿ ಚಿತ್ರರಂಗದಲ್ಲಿ ಹಲವು ನಿರ್ದೇಶಕರಿಗೆ ಭರವಸೆಯ ನಿರ್ಮಾಪಕರಾಗಲೂ ಹೊರಟ್ಟಿದ್ದಾರೆ ಶ್ರೀನಿವಾಸ ಸಿ.ವಿ.ಗೌಡ ಅವರು.

ಶ್ರೀನಿವಾಸ್ ಸಿ.ವಿ.ಗೌಡ ಅವರು ಈ ಹಿಂದೆ ಚಿಕ್ಕದಾಗಿ ಬಟ್ಟೆ ಗಾರ್ಮೆಂಟ್ಸ್ ನ ನಡೆಸುತ್ತ ಹಲವಾರು ನಿರುದ್ಯೋಗಿಗಳಿಗೆ ಉದ್ಯೋಗದಾತರಾಗಿದ್ದರು.ಗಾರ್ಮೆಂಟ್ಸ್ ಉತ್ತಮ ಲಾಭದಾಯಕ ತೆಗೆಯುವ ಸಂದರ್ಭದಲ್ಲಿ ನೋಟ್ ಬ್ಯಾನ್ ನಿಂದಾಗಿ ಗಾರ್ಮೆಂಟ್ಸ್ ನ್ನು ಮುಚ್ಚಬೇಕಾಗುತ್ತದೆ. ಶ್ರೀನಿವಾಸ ಸಿ.ವಿ.ಗೌಡ ಅವರು ಎದೆಗುದಂದೆ ಕಾರ್ ಗಳನ್ನು ಕೊಡಿಸುವುದು ಮತ್ತು ಮಾರಾಟ ಮಾಡಿಸುವುದು,ಇನ್ಸುರೇನ್ಸ್ ಮಾಡಿಸುವುದು,ರಿಯಲ್ ಎಸ್ಟೇಟ್ ನಲ್ಲಿ ಒಂದೊಂದಾಗಿ ಹೆಜ್ಜೆ ಹಾಕುತ್ತಿರುವಾರುವಾಗ ಸೆಲ್ ನಂ 9 ಚಿತ್ರಕ್ಕೆ ನಿರ್ಮಾಪಕರಾಗುತ್ತಾರೆ. ಈ ಸಿನಿಮಾ ಒಟಿಟಿಯಲ್ಲಿ ಉತ್ತಮ ಪ್ರತಿಕ್ರೀಯೆ ದೊರೆಯುತ್ತದೆ. ಮುಂದೆ ಶ್ರೀನಿವಾಸ ಸಿ.ವಿ.ಗೌಡ ಅವರು ತಮ್ಮ ಆಪ್ತ ಸ್ನೇಹಿತ ರಾಮ್ ತೇಜ ನಿರ್ದೇಶನದ ಬಹು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಭೈರವ ಸಿನಿಮಾಗೆ ನಿರ್ಮಾಪಕರಲ್ಲಿ ಒಬ್ಬರಾಗಿ ನಿಲ್ಲುತ್ತಾರೆ.

ಯುವ ನಿರ್ದೇಶಕರಿಗೆ ಭರವಸೆಯ ನಿರ್ಮಾಪಕ:-

ಇತ್ತಿಚಿನ ದಿನಗಳಲ್ಲಿ ಹೊಸ ಆಲೋಚನೆಯೊಂದಿಗೆ ಸಿನಿ ರಂಗದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಲು ಅಣಿಯಾಗುತ್ತಿರುವ ಭರವಸೆಯ ನಿರ್ದೇಶಕರ ಕನಸನ್ನ ನನಸು ಮಾಡಲು ಮುಂದಾಗುತ್ತಾರೆ ಶ್ರೀನಿವಾಸ್ ಸಿ.ವಿ.ಗೌಡ ಅವರು. ಈಗಾಗಲೇ ವಿಶೀಕ ಫಿಲಂಸ್ ನಡಿಯಲ್ಲಿ ಒಂದರಂತೆ ಒಂದು ಚಿತ್ರಗಳು ರೆಡೆಯಾಗಲೂ ಅಣಿಯಾಗುತ್ತಿರುವುದೆ ಸಾಕ್ಷಿ.

ಒಟ್ಟಾರೆಯಾಗಿ ಹೇಳುವುದಾದರೆ ಯುವ ನಿರ್ಮಾಪಕ ಶ್ರೀನಿವಾಸ್ ಸಿ.ವಿ.ಗೌಡ ಅವರು ಕನ್ನಡ ಚಿತ್ರರಂಗದಲ್ಲಿ ಹಸಿದು ಕೂತಿರುವ ಹಲವು ಯುವ ನಿರ್ದೇಶಕ ರಿಗೆ ಅವಕಾಶಗಳನ್ನು ನೀಡಲಿ ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಚಿತ್ರಗಳನ್ನ ನಿರ್ಮಿಸಿ ಕನ್ನಡಿಗರ ಮನೆ ಮನೆಗಳಲ್ಲಿ ಹೆಸರಾಗಲಿ ಎನ್ನುವುದೆ ನಮ್ಮ ಅಭಿಪ್ರಾಯವಾಗಿದೆ.

LEAVE A REPLY

Please enter your comment!
Please enter your name here