ಸೊವೇನಹಳ್ಳಿಯಲ್ಲಿ ನರೇಗಾ ಯೋಜನೆ ಅಡಿ ದುಡಿಯೋಣ ಬಾ ಅಭಿಯಾನಕ್ಕೆ ಚಾಲನೆ. ಪ್ರತಿ ಕುಟುಂಬ ಸಮೀಕ್ಷೆಯ ಮೂಲಕ ಜಾಬ್ ಕಾರ್ಡ್ ಒದಗಿಸಿ ಉದ್ಯೋಗ ಒದಗಿಸಲು ಕ್ರಮ:ತಾಪಂ ಸಹಾಯಕ ನಿರ್ದೇಶಕ ರೇಣುಕಾಚಾರ್ಯ.

0
277

ಸಂಡೂರು: ಮಾ.16 : ಮಹಾತ್ಮಗಾಂಧಿ ನರೇಗಾ ಯೋಜನೆ ಅಡಿ ದುಡಿಯೋಣ ಬಾ ಅಭಿಯಾನಕ್ಕೆ ಸಂಡೂರು ತಾಲೂಕಿನ ಸೊವೇನಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಬುಧವಾರ ಚಾಲನೆ ನಿಡಲಾಯಿತು.

ತಾಪಂ ನರೇಗಾ ಸಹಾಯಕ ನಿರ್ದೇಶಕರಾದ ರೇಣುಕಾಚಾರ್ಯ ಅವರು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಈ ಅಭಿಯಾನವು ಜೂ.15ರವರೆಗೆ ನಡೆಯಲಿದ್ದು, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ರತಿ ಕುಟುಂಬವನ್ನು ಸಮೀಕ್ಷೆ ಮಾಡಿ ಜಾಬ್ ಕಾರ್ಡ್ ಹೊಂದಿಲ್ಲದ ಕುಟುಂಬಗಳನ್ನು ಗುರುತಿಸಿ ಅವರಿಗೆ ಉದ್ಯೋಗ ಚೀಟಿಗಳನ್ನು ಒದಗಿಸಿ ಏ.1ರಿಂದ ಸ್ಥಳೀಯವಾಗಿಯೇ ನರೇಗಾ ಅಡಿ ಉದ್ಯೋಗ ಒದಗಿಸಲಾಗುವುದು ಎಂದರು.

ಮಾ.15ರಿಂದ ಮಾ.25ರವರೆಗೆ ಈಗಾಗಲೇ ವಿತರಿಸಲಾಗಿರುವ ಜಾಬ್ ಕಾರ್ಡ್‍ಗಳನ್ನು ಶೇ.100ರಷ್ಟು ಆಧಾರ್ ಸೀಡಿಂಗ್ ಮಾಡಲಾಗುವುದು. ಯೋಜನೆಯಡಿ ವಿತರಿಸಲಾಗಿರುವ ಜಾಬ್ ಕಾರ್ಡ್‍ಗಳನ್ನ ಪರಿಶೀಲಿಸಿ, ಕುಟುಂಬದ ವರ್ಗವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಬದಲಾಗಿ ಇತರೆ ಎಂದು ನಮೂದಿಸಿರುವ ಜಾಬ್ ಕಾರ್ಡ್‍ಗಳ ಪಟ್ಟಿಯನ್ನು ಸಿದ್ದಪಡಿಸಿ ಈ ಕಛೇರಿಗೆ ಸಲ್ಲಿಸುವುದು. ಯೋಜನೆಯಡಿ ವಿತರಿಸಲಾದ ಎಲ್ಲಾ ಜಾಬ್ ಕಾರ್ಡ್‍ಗಳನ್ನು ಪರಿಶೀಲಿಸಿ, ಅರ್ಹರಲ್ಲದ ವ್ಯಕ್ತಿಗಳನ್ನು (ಮರಣಹೊಂದಿದವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಶಾಶ್ವತವಾಗಿ ವಲಸೆ ಹೋದವರು, ವಿವಾಹವಾಗಿ ಸ್ಥಳಾಂತರಗೊಂಡವರು) ಜಾಬ್ ಕಾರ್ಡ್‍ನಿಂದ ತೆಗೆದು ಹಾಕಲು ಕ್ರಮವಹಿಸಲಾಗುವುದು ಎಂದು ಅವರು ವಿವರಿಸಿದರು.

ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವ-ಸಹಾಯ ಸಂಘಗಳ ಸದಸ್ಯರೊಂದಿಗೆ ಸಭೆ ನಡೆಸಿ ಯೋಜನೆಯಡಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವುದು. ಜಾಬ್ ಕಾರ್ಡ್ ಹೊಂದಿರುವ 20 ರಿಂದ 30 ಕೂಲಿಕಾರರ ಗುಂಪುಗಳನ್ನು ರಚಿಸಿ ಕಾಯಕ ಬಂಧುಗಳನ್ನು ಗುರುತಿಸುವುದು. ಮಹಿಳೆಯರಿಗೆ ಪ್ರತ್ಯೇಕ ಗುಂಪುಗಳನ್ನು ರಚಿಸಿ, ಮಹಿಳಾ ಮೇಟ್ ಗಳನ್ನು ಗುರುತಿಸುವುದು. ಕಾಯಕ ಬಂಧುಗಳಿಗೆ ಯೋಜನೆಯ ಕುರಿತು ತರಬೇತಿ ಕಾರ್ಯಗಾರವನ್ನು ಏರ್ಪಡಿಸುವುದು.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆಯ ಕುರಿತು ತರಬೇತಿ ವ್ಯಾಪಕ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ನೊಂದಾಯಿತಿ ಕೂಲಿಕಾರರಿಂದ ನಮೂನೆ-6 ರಲ್ಲಿ ಒಂದೇ ಬಾರಿ 3 ತಿಂಗಳ ಕೆಲಸದ ಬೇಡಿಕೆ ಪಡೆಯಲಾಗುವುದು ಎಂದರು.
ಕೆಲಸದ ಬೇಡಿಕೆ ಸಲ್ಲಿಸಿದ ಕೂಲಿಕಾರರಿಗೆ ಕೆಲಸ ಒದಗಿಸಲು ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಕೆ,ತಾಂತ್ರಿಕ ಮತ್ತು ಆಡಳಿತ ಮಂಜೂರಾತಿ, ಸಾರ್ವಜನಿಕ ಮಾಹಿತಿ ಫಲಕ ಅಳವಡಿಕೆ ಮತ್ತು ಜಿಯೋ ಟ್ಯಾಗ್ ಇತ್ಯಾದಿ ಕಾಮಗಾರಿಗಳ ಪ್ರಾರಂಭ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗುವುದು.ಏ.1ರಿಂದ ಕಾಮಗಾರಿ ಪ್ರಾರಂಭಿಸಲು ಎನ್.ಎಮ್.ಆರ್ ಗಳನ್ನು ಸೃಜನೆ ಮಾಡುವುದು ಮತ್ತು ಜೂನ್ ಅಂತ್ಯದವರಗೆ ನಿರಂತರವಾಗಿ ಕೆಲಸ ಒದಗಿಸಲು ಕ್ರಮವಹಿಸಲಾಗುವುದು ಎಂದರು.
ಕೂಲಿಕಾರರಿಗೆ ನಿರಂತರ ಕೆಲಸ ಒದಗಿಸಲಾಗುವುದು ಮತ್ತು ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳು,ಶಿಶು ಪಾಲನೆ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ತಾ.ಪಂ.ನರೇಗಾ ಸಹಾಯಕ ನಿರ್ದೇಶಕರಾದ ರೇಣುಕಾಚಾರ್ಯ,ಗ್ರಾಪಂ ಅಧ್ಯಕ್ಷರಾದ ಅಂಜಿನಪ್ಪ, ಉಪಾಧ್ಯಕ್ಷರಾದ ಸಣ್ಣ ಶಾರದಮ್ಮ, ಪಿಡಿಓ ಶ್ರೀಕಾಂತ್, ಕಾರ್ಯದರ್ಶಿ ಜಿ. ಪಾಪಣ್ಣ, ಗ್ರಾಪಂ ಸದಸ್ಯರಾದ ಶಶಿಕಲಾ, ಲಕ್ಕಪ್ಪರ ಕಾಳಮ್ಮ, ಗೀತಾ, ಕಮಲಮ್ಮ, ಶಾರದಮ್ಮ, ಹಂಪಕ್ಕ, ಪಾರ್ವತಿ, ಎಂಐಎಸ್ ಕೋ ಆರ್ಡಿನೆಟರ್ ಚಂದ್ರಪ್ಪ, ತಾ.ಪಂ.ನರೇಗಾ ಸಹಾಯಕರಾದ ವೆಂಕನಗೌಡ, ಇಂಜಿನಿಯರ್ ಅಶೋಕ್, ಹಾಗೂ ಮೇಟಿಗಳಾದ ಲಕ್ಷ್ಮೀದೇವಿ, ಗಿರಿಜಾ, ಎಸ್.ಉಮಾ,ಎಸ್. ಸುನಂದಾ ಮತ್ತು ನರೇಗಾ ಯೋಜನೆಯ ರೇಷ್ಮೆ ಕೃಷಿ ಮಹಿಳೆ ಟಿ. ಚಂದ್ರಮ್ಮ ಗಂಡ ನರಸಿಂಹಪ್ಪ, ಹಾಗೂ ನೂರು ಮಾನವ ದಿನಗಳನ್ನು ಪೂರೈಸಿದ ಸಾವಿತ್ರಮ್ಮ ಗಂಡ ಪಂಚಪ್ಪ.ಉಪಸ್ಥಿತರಿದ್ದರು
ಕಾರ್ಯಕ್ರಮದ ಸ್ವಾಗತ ಭಾಷಣ ಮತ್ತು ನಿರೂಪಣೆಯನ್ನು ಗ್ರಾಪಂ ಕಾರ್ಯದರ್ಶಿ ಜಿ.ಪಾಪಣ್ಣ ಅಚ್ಚುಕಟ್ಟಾಗಿ ನಿರ್ವಹಿಸಿದರು

LEAVE A REPLY

Please enter your comment!
Please enter your name here