ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಎಐಟಿಯುಸಿ ಮನವಿ

0
920

ಸಂಡೂರು:29:ಮಾ:-ಪಟ್ಟಣದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಫೆಡರೇಷನ್ ಎಐಟಿಯುಸಿ ಸಂಘಟನೆಯ ಮುಖಂಡರು ಮತ್ತು ಪದಾಧಿಕಾರಿಗಳು, ಕಾರ್ಯಕರ್ತೆಯರು, ಸಹಾಯಕಿಯರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಹಾಗೂ ತಹಶೀಲ್ದಾರ್ ರವರಿಗೆ ತಮ್ಮ ಬೇಡಿಕೆಗಳುಳ್ಳ ಮನವಿಪತ್ರವನ್ನು ಸಲ್ಲಿಸಿದರು.

ಬೇಡಿಕೆಗಳು:
◆ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ಕೋಳಿ ಮೊಟ್ಟೆಗಳನ್ನು ವಿತರಿಸುತ್ತಿದ್ದು ಕೋಳಿಮೊಟ್ಟೆ ದರವು ಮಾರ್ಕೆಟಿನಲ್ಲಿ ರೂಪಾಯಿ 6.5 ರಿಂದ ರೂ 7 ರವರೆಗೆ ದರ ಹೆಚ್ಚಳವಾಗಿದೆ ಸೆಪ್ಟಂಬರ್ 2020 ರಿಂದ ಇಲ್ಲಿಯವರೆಗೆ ಮೊಟ್ಟೆ ದರವು ಹೆಚ್ಚಳವಾಗಿರುವುದರಿಂದ ಖರೀದಿಸಲು ಹೆಚ್ಚಾಗಿರುವ ವ್ಯತ್ಯಾಸದ ಮೊತ್ತವನ್ನು ಗ್ರಾಮ ಪಂಚಾಯಿತಿಯಿಂದ ಪಾವತಿಸಲು ಸೂಚಿಸಿರುತ್ತಾರೆ ಆದರೆ ಇದುವರೆಗೂ ಯಾವ ಗ್ರಾಮ ಪಂಚಾಯಿತಿ ಕಡೆಯಿಂದ ಪಾವತಿಯಾಗಿರುವುದಿಲ್ಲ ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾಗಿರುವ ಫಲಾನುಭವಿಗಳಿಗೆ ರೂ 5 ರಂತೆ ನಮ್ಮ ಇಲಾಖೆಯಿಂದ ಪಾವತಿಸುತ್ತಿದ್ದಾರೆ. ಹೆಚ್ಚಾಗಿರುವ ವ್ಯತ್ಯಾಸದ ಮೊತ್ತವನ್ನು ಶಿಶು ಅಭಿವೃದ್ಧಿ ಯೋಜನೆ ಕಚೇರಿಯ ಮುಖಾಂತರವೇ ಪಾವತಿಸಬೇಕು
◆ಮೊಟ್ಟೆ ತರಕಾರಿ ಹಣವನ್ನು ಮುಂಗಡವಾಗಿ ಬಾಲವಿಕಾಸ ಸಲಹಾ ಸಮಿತಿ ಖಾತೆಗೆ ಹಾಕಬೇಕು
◆ಅಂಗನವಾಡಿ ಕೇಂದ್ರಗಳಲ್ಲಿ ಸರಬರಾಜು ಮಾಡುವ ಆಹಾರ ಧಾನ್ಯಗಳ ವಿಮರ್ಶೆಯನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ನಿರ್ಧರಿಸುತ್ತದೆ ಅದೇ ರೀತಿ ಮೊಟ್ಟೆ ದರವನ್ನು ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ನಿರ್ಧರಿಸಿದರೆ ಕಾರ್ಯಕರ್ತೆಯರು ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಸ್ಥಳೀಯವಾಗಿ ಖರೀದಿಸಲು ಅನುಕೂಲವಾಗುತ್ತದೆ
◆ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು ಖಾಯಂಗೊಳಿಸಿ ಮತ್ತು ಸರ್ಕಾರದ ನೌಕರರೆಂದು ಪರಿಗಣಿಸಿ ಕ್ರಮವಾಗಿ ಸಿ ಮತ್ತು ಡಿ ದರ್ಜೆ ನೌಕರರ ಸೌಲಭ್ಯಗಳನ್ನು ಕಲ್ಪಿಸಬೇಕು ಅಲ್ಲಿವರೆಗೆ ತುರ್ತಾಗಿ ಮಾಸಿಕ 21000 ರೂಪಾಯಿ ಕನಿಷ್ಠ ವೇತನ ನಿಗದಿಪಡಿಸಿ ಜಾರಿಗೊಳಿಸಬೇಕು
◆ಸಮವಸ್ತ್ರವು ವರ್ಷ ಕಳೆಯುತ್ತಾ ಬಂದರೂ ಸರಬರಾಜು ಮಾಡಿರುವುದಿಲ್ಲ ತುರ್ತಾಗಿ ಒದಗಿಸಲು ಕ್ರಮ ಕೈಗೊಳ್ಳಬೇಕು
◆ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಾದ ಕೆಲವು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಕಛೇರಿ ಆದೇಶ ಇರುವುದಿಲ್ಲ ಆದ್ದರಿಂದ ಪ್ರತಿಯೊಬ್ಬರಿಗೂ ಕೂಡಲೇ ಆದೇಶ ಪ್ರತಿ( ಆರ್ಡರ್ ಕಾಫಿ )ನೀಡಬೇಕು
◆ಖಾಲಿ ಇರುವ ಮೇಲ್ವಿಚಾರಕಿಯರ ಹುದ್ದೆಗಳಿಗೆ ಅನುಗುಣವಾಗಿ ಅಂಗನವಾಡಿ ಕಾರ್ಯಕರ್ತೆಯನ್ನು ಭರ್ತಿಗೊಳಿಸಬೇಕೆಂದು ಮನವಿಯನ್ನು ಸಲ್ಲಿಸಿದರು.

ಈ ಸಂಧರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘಟನೆ ಅಧ್ಯಕ್ಷರು ಜಿ. ನಾಗರತ್ನಮ್ಮ,
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘಟನೆಯ ಪ್ರದಾನ ಕಾರ್ಯದರ್ಶಿ ಟಿ. ಕವಿತಾ, ಚಂದ್ರಕಲಾ, ವೆಂಕಟಲಕ್ಷ್ಮಿ, ಯಲ್ಲಮ್ಮ ಮಹಾಲಕ್ಷ್ಮಿ, ಮಮತಾ,ಪೂರ್ಣಿಮಾ, ಜಯಂತಿ,ತಾಯಮ್ಮ ಇನ್ನಿತರರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here