ಕ್ಷಯರೋಗವನ್ನು ದೂರವಿಡಿ, ಕ್ಷಯರೋಗಿಯನ್ನಲ್ಲ, ಅವನ ಆರೈಕೆಗೆ ಸಹಕರಿಸಿ, ಡಾ.ಗೋಪಾಲ್ ರಾವ್,

0
762

ಸಂಡೂರು:ಮಾ:29:-ರಾಜ್ಯ ಕ್ಷಯರೋಗ ಕೇಂದ್ರ, ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಸಂಡೂರು ಇವರ ಸಹಯೋಗದೊಂದಿಗೆ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಕ್ಷಯರೋಗ ನಿರ್ಮೂಲನೆ ಕುರಿತು ಮತ್ತು ಕೋವಿಡ್ ಮುಂಜಾಗ್ರತೆ, ಲಸಿಕಾಕರಣ ಕುರಿತು ಎಲ್.ಇ.ಡಿ ಪ್ರೊಜೆಕ್ಟರ್ ಮೂಲಕ ಜಾಗೃತಿ ಮೂಡಿಸುವ ವಾಹನಕ್ಕೆ ಚಾಲನೆ ನೀಡಲಾಯಿತು

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಾ. ಗೋಪಾಲ್ ರಾವ್ ಅವರು ತಾಲೂಕಿನ ಹತ್ತು ಗ್ರಾಮಗಳನ್ನು ಆಯ್ಕೆ ಮಾಡಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ, ಆದ್ಯತೆಯ ಮೇರಗೆ ಗ್ರಾಮಗಳಲ್ಲಿ ಜನರಿಗೆ ಮನದಟ್ಟು ಮಾಡಲು ಎಲ್.ಇ.ಡಿ ಪ್ರೊಜೆಕ್ಟರ್ ಮೂಲಕ ವ್ಯವಸ್ಥೆ ಮಾಡಿದ ವಾಹನ ತೋರಣಗಲ್ಲು, ರೈಲ್ವೆ ನಿಲ್ದಾಣ, ವಡ್ಡು, ತಾಳೂರು ಮತ್ತು ತಾರಾನಗರ ಗ್ರಾಮಗಳಲ್ಲಿ ಇಂದು ಸಂಚರಿಸಿ ಪ್ರಚಾರ ಮಾಡಿದೆ ಎಂದು ತಿಳಿಸಿದರು,

ಇದೇ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಕ್ಷಯರೋಗ ಇರುವವರನ್ನು ಕಳಂಕಿತರಂತೆ ಕಾಣಬಾರದು, ಅವರ ಗೌರವಕ್ಕೆ ದಕ್ಕೆ ಬರದಂತೆ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿ ಕೊಡಬೇಕು, ಕ್ಷಯರೋಗ ಯಾರಿಗಾದರೂ ಬರಬಹುದು, ಕೆಮ್ಮು ದಾಗ, ಸೀನಿದಾಗ , ತುಂತುರು ಹನಿಗಳ ಮೂಲಕ ಟ್ಯೂಬರ್ ಕ್ಯೂಲೈ ಬ್ಯಾಕ್ಟೀರಿಯ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ, ರೋಗ ನಿರೋಧಕ ಶಕ್ತಿ ಕುಂದಿದಾಗ ಅದರ ಲಕ್ಷಣಗಳು ಕಾಣಿಸುವವು, ಲಕ್ಷಣಗಳು ಕಂಡು ಬಂದಾಗ ತಪಾಸಣೆಗೆ ಒಳಗಾಗ ಬೇಕು, ದೃಡಪಟ್ಟರೆ ಪೂರ್ಣ ಚಿಕಿತ್ಸೆ ಪಡೆಯಬೇಕು, ಕ್ಷಯರೋಗ ವಾಸಿಯಾಗುವ ಕಾಯಿಲೆ, ಇದಕ್ಕೆ ಕಳಂಕಿತರಂತೆ ಕಾಣುವುದು ಸರಿಯಲ್ಲ ಎಂದು,

ಈ ಸಂದರ್ಭದಲ್ಲಿ ಡಾ.ಗೋಪಾಲ್ ರಾವ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಫಾರ್ಮಸಿ ಅಧಿಕಾರಿ ಮಂಜುನಾಥ್, ಶಕೀಲ್ ಅಹಮದ್, ಹರ್ಷ, ಆಶಾ ಕಾರ್ಯಕರ್ತೆಯರು ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here