ಸಂಕಲ್ಪ ಸಮುದಾಯ ನಿರ್ವಹಿತ ಸಂಪನ್ಮೂಲ ಕೇಂದ್ರದಿಂದ ವಿಶ್ವ ಪರಿಸರ ದಿನ.

0
450

ಸಂಡೂರು:ಜೂ:17: ಪರಿಸರ ದಿನಾಚರಣೆ ಅಂಗವಾಗಿ ಸಂಕಲ್ಪ ಸಮುದಾಯ ನಿರ್ವಹಿತ ಸಂಪನ್ಮೂಲ ಕೇಂದ್ರದ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ತೋರಣಗಲ್ಲು ಗ್ರಾಮದಲ್ಲಿ ಮೈರಾಡ ಸಹಕಾರದೊಂದಿಗೆ “ಸಂಕಲ್ಪ ಸಮುದಾಯ ನಿರ್ವಹಿತ ಸಂಪನ್ಮೂಲ ಕೇಂದ್ರದ” ವತಿಯಿಂದ “ವಿಶ್ವ ಪರಿಸರ ದಿನ” ಆಚರಿಸಲಾಯಿತು, ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು, ಜಾಥವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಇರುವುದೊಂದೆ ಭೂಮಿ,ಭೂಮಿಯೊಂದಿಗೆ ಸುಸ್ಥಿರವಾಗಿ ಬದುಕೋಣ, ಭೂಮಿಯ ಪರಿಸರ ರಕ್ಷಿಸಿ, ಪೃಥ್ವಿ ಉಳಿಸಿ, ಗಿಡ ನೆಡಿ,ಮನೆಗೊಂದು ಗಿಡ, ಊರಿಗೊಂದು ವನ, ನಮ್ಮ ಅರೋಗ್ಯಕ್ಕಾಗಿ ಪರಿಸರವನ್ನು ಕಾಪಾಡಿ, ಪರಿಸರ ಸಂರಕ್ಷಿಸುವ ಸಂಘಸಂಸ್ಥೆಗಳ ಕೈ ಬಲ ಪಡಿಸೋಣ ಎಂಬ ಘೋಷಣೆಗಳನ್ನು ಕೂಗುತ್ತಾ ಜಾಗೃತಿ ಮೂಡಿಸಿದರು

ನಂತರ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಗಿಡಗಳನ್ನು ನೆಟ್ಟರು, ಹಾಗೆ ಇದೇ ಸಮಯದಲ್ಲಿ “ಸಬಲ ಮಹಿಳಾ ಅಭಿವೃದ್ಧಿ ಕಾರ್ಯಕ್ರಮ”ವನ್ನು ಆಚರಿಸಿ ಮಹಿಳೆಯರ ಸಬಲಿಕರಣಕ್ಕೆ ಕ್ರಮಗಳ ಕುರಿತು ಪ್ರಾಜೆಕ್ಟ್ ಮ್ಯಾನೇಜರ್ ಎನ್.ಪಿ ರಾಜು ಮಾತನಾಡಿದರು,

ಈ ಸಂದರ್ಭದಲ್ಲಿ ಸಂಕಲ್ಪ ಸಮುದಾಯ ನಿರ್ವಹಿತ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾದ ರಾಜೇಶ್ವರಿ, ಕಾರ್ಯದರ್ಶಿ ಶಿವರುದ್ರಮ್ಮ,ಖಜಾಂಚಿ ಅಕ್ಕನಾಗಮ್ಮ, ಸುಜಾತ,ಅನಿತಾ, ಶಂಕ್ರಮ್ಮ ಮತ್ತು ಪದಾಧಿಕಾರಿಗಳು, ಸದಸ್ಯರು, ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ಶಿವಕುಮಾರ್, ತಿಪ್ಪೇಸ್ವಾಮಿ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here