ಬಾಲಕಿಯರು ಬೆಳಗಿನ ಪೌಷ್ಟಿಕಾಂಶಯುಕ್ತ ಉಪಹಾರ ತಪ್ಪದೇ ಸೇವಿಸಲು ಸಲಹೆ ; ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
33

ಸಂಡೂರು: ಫೆ: 5:ತಾಲೂಕಿನ ವಡ್ಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆ.ಹೆಚ್.ಪಿ.ಟಿ ಮತ್ತು ರೀಡ್ಸ್ ಸಂಸ್ಥೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಹೆಚ್.ಬಿ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು, ಶಿಬಿರ ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮಾತನಾಡಿ ವಿದ್ಯಾರ್ಥಿಗಳು ಶಾಲೆಗೆ ಬರುವ ಅವಸರದಲ್ಲಿ ಬೆಳಗಿನ ಉಪಹಾರ ತಪ್ಪಿಸುವುದು ಮಾಡಬಾರದು, ಬಿಸಿ ಊಟದಲ್ಲಿದ್ದ ತರಕಾರಿ ತೆಗೆದಿಟ್ಟು ಸಾರು ಅನ್ನ ಊಟ ಮಾಡುವ ಮಕ್ಕಳು ಸಹಾ ಇದ್ದಾರೆ, ಈ ರೀತಿ ಸರಿಯಾದ ಊಟ ಸೇವಿಸದಿದ್ದರೆ ರಕ್ತಹೀನತೆ ಉಂಟಾಗುತ್ತದೆ, ತಪಾಸಣೆಯಲ್ಲಿ ರಕ್ತಹೀನತೆ ಕಂಡು ಬಂದರೆ ವರ್ಗಿಕರಣದ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುವುದು, ಗಂಭೀರ ಸ್ವರೂಪದ ಚಿಕಿತ್ಸೆಗೆ ಮೇಲ್ದರ್ಜೆಯ ಆಸ್ಪತ್ರೆಗೆ ಸೂಚಿಸಲಾಗುತ್ತದೆ, ಅಲ್ಲಿ ಐರನ್ ಸುಕ್ರೋಸ್ ಮೂಲಕ ಚಿಕಿತ್ಸೆ ನೀಡಿ ರಕ್ತ ಹೀನತೆಯನ್ನು ಹೋಗಲಾಗಿಸುವುದು ನಮ್ಮ ಧ್ಯೇಯವಾಗಿದೆ, ಪ್ರತಿಯೊಬ್ಬರಿಗೂ ವೈಯಕ್ತಿಕ ಸ್ವಚ್ಚತೆ ಕಡೆ ಗಮನವಿರಬೇಕು,ಹಸಿರು ಸೊಪ್ಪು,ತರಕಾರಿ, ಕಾಳುಗಳನ್ನು ಹೇರಳವಾಗಿ ಸೇವಿಸಿ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಶಿಕ್ಷಕ ಪಂಚಾಕ್ಷರಯ್ಯ, ಆರ್.ಕೆ.ಎಸ್.ಕೆ ಸಮಾಲೋಚಕ ಪ್ರಶಾಂತ್ ಕುಮಾರ್ ಮತ್ತು ಸಿ.ಹೆಚ್.ಓ ವಿಜಯಲಕ್ಷ್ಮಿ ಮಕ್ಕಳಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು,ಕೆ.ಹೆಚ್.ಪಿ.ಟಿ ಸಂಯೋಜಕಿ ಗೀತಾ ಕಾರ್ಯಕ್ರಮ ನಡೆಸಿಕೊಟ್ಟರು,

ಈ ಸಂದರ್ಭದಲ್ಲಿ ರೀಡ್ಸ್‌ನ ತಿಪ್ಪೇಸ್ವಾಮಿ, ಶಾಲೆಯ ಸಹ ಶಿಕ್ಷಕರಾದ ನಾಗರತ್ನ,ಗಿರಿಜಾ, ಮಧುಮತಿ, ಸಿದ್ದಮ್ಮ, ಆಶಾ ಕಾರ್ಯಕರ್ತೆಯರಾದ ಶಿವಲೀಲಾ, ಮಂಜುಳಾ, ಸಾವಿತ್ರಿ,ಭಾರತಿ,ಪಾರ್ವತಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು

LEAVE A REPLY

Please enter your comment!
Please enter your name here