ಕರ್ನಾಟಕ ವಿ.ವಿ.ಯಲ್ಲಿ ಮಹಿಳಾ ಸಂಗೋಷ್ಟಿ

0
134

ಧಾರವಾಡ: ಇತ್ತೀಚಿಗೆ ರಾಷ್ಟ್ರ ಸೇವಿಕಾ ಸಮಿತಿಯು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಮತ್ತು ಸಂಸ್ಕೃತಿ ಟ್ರಸ್ಟ್ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಭಾರತೀಯ ಚಿಂತನೆಯಲ್ಲಿ ಮಹಿಳೆ ಎಂಬ ವಿಷಯ ಕುರಿತು ರಾಜ್ಯ ಮಟ್ಟದ ಮಹಿಳಾ ಸಂಗೋಷ್ಟಿಯನ್ನು ಕರ್ನಾಟಕ ವಿ.ವಿ.ಯಲ್ಲಿ ಏರ್ಪಡಿಸಿತ್ತು.

ಈ ಕಾರ್ಯಕ್ರಮವನ್ನು ವಿಜಯನಗರ ಉತ್ತರ ಪ್ರಾಂತದ ಪ್ರಾಂತ ಕಾರ್ಯವಾಹಿಕಾ ಆದ ವೇದ ಕುಲಕರ್ಣಿಯವರು ಉದ್ಘಾಟಿಸಿ ಮಾತನಾಡಿ, ರಾಷ್ಟ್ರ ಸೇವಿಕಾ ಸಮಿತಿಯು ಲಕ್ಷ್ಮಿಬಾಯಿ ಕೇಳ್ಕರ್ ಅವರಿಂದ ೧೯೩೬ ರ ಅಕ್ಟೋಬರ್ ೨೫ ರಂದು ವಿಜಯದಶಮಿ ಹಬ್ಬದ ಶುಭ ಸಂದರ್ಭದಲ್ಲಿ ಮಹಾರಾಷ್ಟ್ರದ ನಾಗಪುರದ ವಾರ್ದಾ ಎಂಬ ಊರಿನಲ್ಲಿ ಸ್ಥಾಪನೆಯಾಯಿತು.
ಇದು ಅಂತರಾಷ್ಟ್ರೀಯ ಮಟ್ಟದ ರಾಷ್ಟ್ರಭಕ್ತಿ ಉದ್ದೇಶಿತ ಏಕೈಕ ಮಹಿಳಾ ಸಂಘಟನೆಯಾಗಿದ್ದು, ೮೬ ವರ್ಷದಿಂದ ದೇಶದ ಎಲ್ಲಾ ಭಾಗಗಳಲ್ಲೂ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿದೆ ಎಂಬುದಾಗಿ ವಿವರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿ.ವಿ.ಯ ಕುಲಪತಿಗಳಾದ ಪ್ರೊ. ಕೆ. ಬಿ.ಗುಡಸಿ ಹಾಗೂ ವಿಜಯಪುರ ಜಿಲ್ಲೆಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿ.ವಿ.ಯ ಕುಲಪತಿಗಳಾದ ಬಿ.ಕೆ.ತುಳಸೀಮಾಲಾ ಅವರು ಭಾಗವಹಿಸಿದ್ದರು. ಅಖಿಲ ಭಾರತೀಯ ಸಹಕಾರ್ಯವಾಹಿಕಾ ಆದ ಅಲಕಾ ಇನಾಂದಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರತೀ ಜಿಲ್ಲೆಯಿಂದ ನಾಲ್ಕು ಜನ ಮಹಿಳೆಯರಿಗೆ ವಿಚಾರ ಮಂಡಿಸಲು ಅವಕಾಶವಿದ್ದು, ಈ ಸಂಗೋಷ್ಟಿ ಕಾರ್ಯಕ್ರಮವನ್ನು ಮೂರು ತಂಡಗಳನ್ನಾಗಿ ಮಾಡಿ ಪ್ರತ್ಯೇಕವಾಗಿ ವಿಷಯ ಮಂಡಿಸುವ ಅವಕಾಶ ನೀಡಲಾಗಿತ್ತು.

ಬಳ್ಳಾರಿ ನಗರದ ಸಹಕಾರ್ಯವಾಹಕರಾದ ಪಂಕಜ ಅವರ ಸಂಘಟನೆಯಲ್ಲಿ, ಬಳ್ಳಾರಿ ಜಿಲ್ಲೆಯಿಂದ
ವಿನೋದ ಕರಣಂ ಅವರು ಮಹಿಳೆ ಮತ್ತು ಶಿಕ್ಷಣ, ಸಾಕ್ಷರತೆ ಸಂಸ್ಕಾರ ಸನ್ಮಾನ ಎಂಬ ವಿಷಯ ಕುರಿತು, ಡಾ.ಸುಮಾ ಅವರು ಆತ್ಮ ನಿರ್ಭರ ಎಂಬ ವಿಷಯ ಕುರಿತು, ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಡಾ. ಎಲ್. ಜ್ಯೋತಿ ಹಾಗೂ ಮಂಗಳಗೌರಿ ಅವರು ಮಹಿಳೆಯ ಆರೋಗ್ಯ- ಕುಟುಂಬದ ಆರೋಗ್ಯದ ಮೇಲೆ ಪರಿಣಾಮ ಎಂಬ ವಿಷಯ ಕುರಿತು ಮಾತನಾಡಿದ್ದು ಅರ್ಥಪೂರ್ಣವಾಗಿತ್ತು.
ರಾಜ್ಯದ ಅನೇಕ ಜಿಲ್ಲೆಯ ನೂರಾರು ಮಹಿಳೆಯರು ಪಾಲ್ಗೊಂಡಿದ್ದ ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಸಂಸ್ಕ್ರತಿ ಟ್ರಸ್ಟ್ ನ ಶಾಂತಲಾ ಅವರು ವಹಿಸಿದ್ದರು.

ವಿನೋದ ಕರಣಂ ಬರಹಗಾರರು, ಬಳ್ಳಾರಿ

LEAVE A REPLY

Please enter your comment!
Please enter your name here