ಸಂವಿಧಾನದ ಕಾನೂನು ಅಡಿಯಲ್ಲಿ ನಾವು ನಡೆಯೋಣ: ಪತ್ರಕರ್ತ ಡಿ.ಎಂ ಈಶ್ವರಪ್ಪ ಅಭಿಪ್ರಾಯ

0
233

ವಿಜಯನಗರ:24:ಏ:-ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ಭಾವಚಿತ್ರವನ್ನು ವಾದ್ಯ ಮೇಳಗಳಿಂದ ವಿಜೃಂಭಣೆಯಿಂದ ಜಯಘೋಷ ಹಾಕುತ್ತಾ ಮೆರವಣಿಗೆ ಮೂಲಕ ತರಲಾಯಿತು. ನಂತರ ವೇದಿಕೆಯಲ್ಲಿ ಕಾರ್ಯಕ್ರಮವನ್ನು ಮಾಡಲಾಯಿತು ಕಾರ್ಯಕ್ರಮದ ಅಧ್ಯಕ್ಷತೆ, ದಲಿತ ಮುಖಂಡ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ತಾಲ್ಲೂಕು ಗೌರವ ಅಧ್ಯಕ್ಷರಾದ ಡಿಎಂ ಈಶ್ವರಪ್ಪ ಸಿದ್ದಾಪುರ ವಹಿಸಿಕೊಂಡಿದ್ದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಡಿ ಮಹಾಂತೇಶ್ ಶಿಕ್ಷಕರು ಮಾತನಾಡಿ ಕಾನೂನು ಸುವ್ಯವಸ್ಥೆ ಅಸ್ಪೃಶ್ಯತಾ ನಿವಾರಣೆ. ಮೂಲಭೂತ ಕರ್ತವ್ಯ, ಸಮಾನತೆ ಶಿಕ್ಷಣ ಕ್ಷೇತ್ರದಲ್ಲಿ. ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಅವರು ನೀಡಿದ ಕೊಡುಗೆಗಳ ಬಗ್ಗೆ ಸವಿಸ್ತಾರವಾಗಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡಿದರು.

ವಿಶೇಷ ಭಾಷಣಕಾರರಾಗಿ ಆಗಮಿಸಿದ ಪ್ರಾಂಶುಪಾಲರಾದ ಶ್ರೀ ನಾಗಲಿಂಗಪ್ಪ ನವರು ಅಂಬೇಡ್ಕರ್ ಅವರು ನಡೆದು ಬಂದದಾರಿ ಅವರ ಜೀವನ ಕುರಿತು. ಸಂವಿಧಾನ ರಚನೆಗಾಗಿ ಅವರು ಪಟ್ಟ ಶ್ರಮ, ಶಿಕ್ಷಣ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆ ಇನ್ನೂ ಅನೇಕ ವಿಚಾರವಾಗಿ ಸಂವಿಧಾನದ ಬಗ್ಗೆ. ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಪಕ್ಷದ ಸದಸ್ಯರಾದ ಲೋಕೇಶ್ ವಿ ನಾಯಕ ರವರು ಅಂಬೇಡ್ಕರ್ ಜಯಂತಿ ಕುರಿತು ಮಾತನಾಡಿದ ಅವರು ಮಕ್ಕಳಿಗೆ ಶಿಕ್ಷಣದಿಂದ ವಂಚಿತರಾಗಿಸಬೇಡಿ ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಶಿಕ್ಷಣವನ್ನು ನೀಡಿ. ಕೂಲಿ ಕೆಲಸಕ್ಕೆ ಕಳಿಸಬೇಡಿ ಶಿಕ್ಷಣ ದಿಂದ ವಂಚಿತರನ್ನಾಗಿ ಮಾಡಬೇಡಿ, ಪ್ರತಿಯೊಬ್ಬರೂ ಶಿಕ್ಷಣಕ್ಕೆ ಮಹತ್ವನೀಡಿ ಎಂದು ಮಾತನಾಡಿದರು.

ದುರುಗೇಶ್ ಪೂಜಾರಹಳ್ಳಿ ವಿಶೇಷ ಭಾಷಣಕಾರರು ಮಾತನಾಡಿ ಡಾ.ಬಾಬಾ ಸಾಹೇಬರು ಸಮಾನತೆಯ ಬೆಳಕು ನೀಡಿ ಸರ್ವರಿಗೂ ಬದುಕಿನ ಹಾದಿಯನ್ನು ಕಲಿಸಿದರು. ಆದರೆ ಇಂದು ರಾಜಕೀಯ ಕಲುಷಿತ ವಾತಾವರಣಗೊಂಡು ಜಾತಿ, ಧರ್ಮ ಧರ್ಮಗಳ ಮಧ್ಯ ಅಸಮಾನತೆ ತಾಂಡವವಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಡಾ.ಅಂಬೇಡ್ಕರರ ಮೂರು ನೀತಿ ನಿಯಮಗಳನ್ನು ಮೈಗೂಡಿಸಿಕೊಂಡು ಆ ನಿಟ್ಟಿನಲ್ಲಿ ಯುವ ಸಮುದಾಯ ಶಿಕ್ಷಣ, ಸಮಾನತೆ ಮತ್ತು ಹೋರಾಟ ಮಾರ್ಗಗಳನ್ನು ಅನುಸರಿಸಬೇಕಿದೆ ಎಂದರು. ನಂತರ ಮತ್ತೊಬ್ಬ ಮುಖ್ಯ ಅತಿಥಿ ಡಿ.ಒ ಮುರಾರ್ಜಿ ಕಲಾವಿದರು ಹಾಗೂ ಸಾಹಿತಿ ಕಲಾವಿದರ ಮಾಸಾಶನ ಮುಂಜುರಾತಿ ಸಮಿತಿ ಸದಸ್ಯರಾದ ಇವರು ಸಂವಿಧಾನ ಶಿಲ್ಪಿ. ಕರಡು ಸಮಿತಿ ಅಧ್ಯಕ್ಷ. ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಜೀವನಾಧಾರಿತ ಕುರಿತು ಕೆಲವು ವಿಚಾರಗಳನ್ನು ಈ ಸಂದರ್ಭದಲ್ಲಿ ಮಾತನಾಡಿದರು.

ವರದಿ:-ಮಂಜುನಾಥ್. ಹೆಚ್

LEAVE A REPLY

Please enter your comment!
Please enter your name here