ಡಿಜಿಟಲ್ ಲೈಬ್ರರಿ ಸೇವೆಯಲ್ಲಿ ರಾಜ್ಯದ್ದು ವಿಶ್ವದಾಖಲೆ: ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ.

0
143

ವಿಜಯನಗರ:30:-ಕೊಟ್ಟೂರು ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ಕಳೆದ ವರ್ಷದಿಂದ ಸೇವೆ ಆರಂಭಿಸಿರುವ ಡಿಜಿಟಲ್ ಲೈಬ್ರರಿಯ ಸೇವೆ ವಿಶ್ವದಲ್ಲಿ ದಾಖಲೆ ಸ್ಥಾಪಿಸುವತ್ತಾ ಮುಂದಾಗಿದೆ. ಡಿಜಿಟಲ್ ಲೈಬ್ರರಿಗೆ 2 ಕೋಟಿ 36 ಲಕ್ಷಕ್ಕೂ ಹೆಚ್ಚು ಸದಸ್ಯರು ನೊಂದಾಯಿತರಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಇದೊಂದು ವಿಶ್ವದಾಖಲೆ ಸ್ಥಾಪಿಸಿದ್ದು ಒಂದು ವರ್ಲ್ಡ್ ಬುಕ್ ಆಫ್ ರೆಕಾಡ್ಸ್ ಮತ್ತು ದೆಹಲಿಯ ಓದುಗರ ಸಂಸ್ಥೆಯ ಪ್ರಶಸ್ತಿ ಸಹ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ದೊರಕಿದೆ ಎಂದು ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್‌ಕುಮಾರ ಹೊಸಮನಿ ಹೇಳಿದರು.
ಗುರುವಾರ ರಾತ್ರಿ ಇಲ್ಲಿನ ಸಾರ್ವಜನಿಕ ಗ್ರಂಥಾಲಯ ಶಾಖೆಗೆ ಭೇಟಿ ನೀಡಿ ಗ್ರಂಥಾಲಯವನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಡಿಜಿಟಲ್ ಲೈಬ್ರರಿ ಆರಂಭಿಸುವ ಹಿನ್ನಲೆಯಲ್ಲಿ 60 ಲಕ್ಷಕ್ಕೂ ಹೆಚ್ಚು ವಿವಿಧ ಪುಸ್ತಕಗಳನ್ನು ಮತ್ತು ಪತ್ರಿಕೆಗಳನ್ನು ಓದುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಓದುವ ಮೂಲಕ ಸದುಪಯೋಗಪಡಿಸಿಕೊಂಡು 10 ಕ್ಕೂ ಹೆಚ್ಚು ಕೆ.ಎ.ಎಸ್.ಅಧಿಕಾರಿಗಳು, 176 ಇತರ ಹುದ್ದೆಗಳ ಅಕಾರಿಗಳಾಗಿ ನೇಮಕಗೊಂಡಿದ್ದಾರೆ. ಡಿಜಿಟಲ್ ಲೈಬ್ರರಿ ಕೊರೋನಾ ಕಾರಣಕ್ಕಾಗಿ ಪ್ರಾರಂಭಗೊಳ್ಳುವುದಂತಾಗಿತ್ತುಇದಕ್ಕೆ ಸಾರ್ವಜನಿಕರ ಸ್ಪಂದನೆ ಉತ್ತಮ ರೀತಿಯಲ್ಲಿ ವ್ಯಕ್ತವಾಗುತ್ತಿದೆ. ಇಡೀ ವಿಶ್ವದಲ್ಲೇ ಡಿಜಿಟಲ್ ಲೈಬ್ರರಿ ಓದುಗರ ಸಂಖ್ಯೆ ನಮ್ಮದು ಮೊದಲನೇದಾಗಿದೆ. ನಂತರ ಸ್ಥಾನ ಅಮೇರಿಕದ್ದಾಗಿದೆ ಎಂದು ಅವರು ಹೇಳಿದರು.
ಗ್ರಂಥಾಲಯಗಳು ಮತ್ತು ಅದರಲ್ಲೂ ಡಿಜಿಟಲ್ ಲೈಬ್ರರಿಗಳನ್ನು ಮತ್ತಷ್ಟು ಪ್ರಮಾಣದಲ್ಲಿ ತೆರೆಯಲು ಈಗಾಗಲೇ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಿದ್ದತೆ ಕೈಗೊಂಡಿದ್ದು ಈ ಹಿನ್ನಲೆಯಲ್ಲಿ ಜಗಳೂರು ತಾಲೂಕು ಸೊಕ್ಕೆಯಲ್ಲಿ ಡಿಜಿಟಲ್ ಲೈಬ್ರರಿ ಸೇವೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶುಕ್ರವಾರ ಉದ್ಘಾಟಿಸಿದರು ಎಂದು ಅವರು ಹೇಳಿದರು.
ರಾಜ್ಯದ ಪ್ರತಿ ಗ್ರಾಮಗಳಿಗೂ ಇದರ ಸೇವೆಯನ್ನು ವಿಸ್ತರಿಸಲು ಕ್ರಮ ಕೈಗೊಂಡಿದ್ದೇವೆ ಎಂದ ಅವರು ಕೊಟ್ಟೂರು ಸಾರ್ವಜನಿಕ ಗ್ರಂಥಾಲಯ ಇಲಾಖೆ ಅಕಾರಿ ಮಲ್ಲಪ್ಪ ಗೂಡ್ಲಾನೂರು ಉತ್ತಮ ಸೇವೆ ಸಲ್ಲಿಸುತ್ತಿದ್ದು ಇವರು ಡಿಜಿಟಲ್ ಲೈಬ್ರರಿಯನ್ನು ಕೊಟ್ಟೂರಿನಲ್ಲಿ ಆರಂಭಿಸುವ ಮೂಲಕ ಓದುಗರಿಗೆ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕಾಗಿ ಮಲ್ಲಪ್ಪನವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.
ಕೊಟ್ಟೂರು ಸಾರ್ವಜನಿಕ ಗ್ರಂಥಾಲಯಕ್ಕೆ ಮತ್ತಷ್ಟು ಬಗೆಯ ಕಟ್ಟಡಗಳನ್ನು ನಿರ್ಮಿಸುವ ಸಂಬಂಧ ಸ್ಥಳೀಯ ಶಾಸಕ ಎಸ್.ಭೀಮಾನಾಯ್ಕರೊಂದಿಗೆ ಸಮಾಲೋಚಿಸಿ ಅವರ ಅನುದಾನ ಪಡೆಯಲು ಮುಂದಾಗುವೆ ಎಂದ ಅವರು ಕಲ್ಯಾಣ ಕರ್ನಾಟಕ ಅಭಿವೃದ್ದಿ ಯೋಜನೆಯಡಿ ಅನುದಾನ ಪಡೆದು ಹೊಸ ಕಟ್ಟಡ ನಿರ್ಮಿಸುವ ಯೋಜನೆ ಕೈಗೊಳ್ಳುವೆ ಎಂದು ಅವರು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳಿಗೆ ನೆರವಾಗಲು ಡಿಜಿಟಲ್ ಮತ್ತು ಇತರ ಲೈಬ್ರರಿಗೆ ಮತ್ತಷ್ಟು ಬಗೆಯ ಪುಸ್ತಕಗಳನ್ನು ತರಿಸಿಕೊಳ್ಳಲು ಅನುಕೂಲ ಮಾಡಿಕೊಡುವೆ ಎಂದು ಅವರು ಭರವಸೆ ವ್ಯಕ್ತಪಡಿಸಿ ಕೊಟ್ಟೂರು ಗ್ರಂಥಾಲಯವನ್ನು ಮಾದರಿಯನ್ನಾಗಿ ನಿರ್ಮಿಸಲು ಎಲ್ಲಾ ಬಗೆಯ ನೆರವನ್ನು ನೀಡುವುದಾಗಿ ಅವರು ಹೇಳಿದರು.
ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಗ್ರಂಥಾಲಯ ಉಪನಿರ್ದೇಶಕ ತಿಪ್ಪೇಸ್ವಾಮಿ, ನಿವೃತ್ತ ಸರ್ಕಾರಿ ಅಕಾರಿ ಸೊಕ್ಕೆ ತಿಪ್ಪೇಸ್ವಾಮಿ, ಕೊಟ್ಟೂರು ಶಾಖಾ ಗ್ರಂಥಾಲಯಾಕಾರಿ ಮಲ್ಲಪ್ಪ ಗೂಡ್ಲಾನೂರು ಇದ್ದರು.

ವರದಿ: ಶಿವರಾಜ್ ಗಡ್ಡಿ

LEAVE A REPLY

Please enter your comment!
Please enter your name here