ಪಶ್ಚಿಮ ಘಟ್ಟದ ನದಿಗಳ ನೀರು ಬಳಕೆಯಾಗಲಿ: ಕಿಚಿಡಿ ಕೊಟ್ರೇಶ್

0
102

ಕೊಟ್ಟೂರು:ಮೇ:25:-ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಯಾವುದೇ ನೀರಾವರಿಗೆ ಪ್ರಯೋಜನವಾಗದೆ ಸಮುದ್ರ ಸೇರುವ ಮೂರು ನದಿಗಳ ನೀರನ್ನು ಬಳಸಿಕೊಂಡು ವಿಜಯನಗರ ಜಿಲ್ಲೆಗೆ ಸಮಗ್ರ ನೀರಾವರಿ ರೂಪಿಸಲು ಸಾದ್ಯವೆಂದು ವಿಜಯನಗರ ಜಿಲ್ಲೆ ಸಮಗ್ರ ನೀರಾವರಿ ಸಮಿತಿ ಸಂಚಾಲಕ ಕಿಚಿಡಿ ಕೊಟ್ರೇಶ ಹೇಳಿದರು.

ಹರಪನಹಳ್ಳಿಯಲ್ಲಿ ಮೇ 21ರಂದು ಪಾದಯಾತ್ರೆ ಆರಂಭಿಸಿದ ಇವರು 85 ಕಿ.ಮೀ ಪಾದಯಾತ್ರೆ ಪೂರ್ಣಗೊಳಿಸಿ ಮಂಗಳವಾರ ಕೊಟ್ಟೂರಿಗೆ ಆಗಮಿಸಿ ಇಲ್ಲಿನ ಬಸವೇಶ್ವರ ದೇವಾಲಯದ ಮುಂಭಾಗ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಈ ಯೋಜಿತ ಸಮಗ್ರ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಮೇ 28ರಂದು ನಮ್ಮ ಪಾದಯಾತ್ರೆ ಮುಕ್ತಾಯಗೊಳಿಸಿ ನಂತರ ವಿಧಾನಸೌಧಕ್ಕೆ ತೆರಳಿ ಹೋರಾಟ ಮಾಡುವುದಾಗಿ ಹೇಳಿದರು.

ಈ ನನ್ನ ಹೋರಾಟಕ್ಕೆ ಮಠಾಧೀಶ್ವರರ ಪರಿಷತ್ ಸದಾ ನನ್ನೊಂದಿಗಿದ್ದು ಹೋರಾಟಕ್ಕೆ ಬೆಂಬಲಿಸುತ್ತಿರುವುದು ನನಗೆ ಸ್ಪೂರ್ತಿ ನೀಡಿದೆ ಎಂದರು.

ನಂದಿಪುರದ ಮಹೇಶ್ವರ ಸ್ವಾಮೀಜಿ. ತುಂಗಭದ್ರ ನದಿಯಿಂದ ಬೇರೆಕಡೆ ನೀರನ್ನು ಹೋಯ್ಯತ್ತಿದ್ದು. ಇದರಿಂದ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ ಮತ್ತು ತುಂಗಭದ್ರ ಡ್ಯಾಂನಲ್ಲಿ ಶೇ.40ರಷ್ಟು ಹೂಳು ತುಂಬಿದೆ. ಸರ್ಕಾರ ತ್ವರಿತವಾಗಿ ಇದನ್ನು ತೆಗಿಸಬೇಕೆಂದು ಒತ್ತಾಯಿಸಿದರು.

ಬೆಣ್ಣಿಹಳ್ಳಿ ಪಂಚಾಕ್ಷರಿ ಸ್ವಾಮೀಜಿ. ಗದ್ದಕೆರಿ ಚರಂತೇಶ್ವರ ಸ್ವಾಮೀಜಿ. ಉತ್ತಂಗಿ ಸೋಮಶಂಕರ ಸ್ವಾಮೀಜಿ. ಅಜಾತ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಇಲ್ಲಿನ ಪಪಂ ಅದ್ಯಕ್ಷೆ ಭಾರತಿ ಸುಧಾಕರ ಪಾಟೀಲ್ ಇದ್ದರು.. ಸ್ತಳೀಯ ರೈತ ಸಂಘದ ಭರಮಪ್ಪ. ಬಂದಾತರ ಸುರೇಶ. ಸೂರಿ ಬಂಗಾರಿ, ಕಾಳಿದಾಸ, ಸಂದೀಪ, ಚಪ್ಪರದಹಳ್ಳಿ ಕೊಟ್ರೇಶಪ್ಪ, ನಾಗಪ್ಪ, ಶಿವಕುಮಾರ್ ಗೌಡ್ರು, ಮುಂತಾದವರಿದ್ದರು.

ವರದಿ : ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here