ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅತ್ಯಂತ ಪ್ರಮುಖ: ಸಿಧ್ಧರಾಮ ಕಲ್ಮಠ!

0
126

ಕೊಟ್ಟೂರು:ಜೂನ್:04:- ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅತ್ಯಂತ ಪ್ರಮುಖವಾದದ್ದು ಎಂದು ಆಡಳಿತ ಮಂಡಳಿ ಅಧ್ಯಕ್ಷ ಸಿಧ್ಧರಾಮ ಕಲ್ಮಠ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಡಾ.ಎಚ್.ಜಿ. ರಾಜ್ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ರ‍್ಯಾಂಕ್ ವಿಜೇತರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ವಿದ್ಯೆಯಾರು ಕದಿಯಲಾರದ ಆಸ್ತಿ, ವಿದ್ಯೆಗಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ ಹಾಗಾಗಿ ವಿದ್ಯಾರ್ಥಿಗಳು ಶ್ರದ್ದೆಯಿಂದ ಅಬ್ಯಾಸಮಾಡಿ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಹೊಂದಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಉಜ್ವಲ ಭವಿಷ್ಯ ಕಂಡುಕೊಳ್ಳಿರಿ ಎಂದರು.

ಆಡಳಿತ ಮಂಡಳಿ ಸದಸ್ಯ ಎಸ್,ಎಂ, ಗುರುಪ್ರಸಾದ್ ಮಾತನಾಡಿ ಧನಕನಕಗಳನ್ನು ಗಳಿಸಿದರೆ ನಾವು ಅದನ್ನು ರಕ್ಷಿಸಬೇಕಾಗುತ್ತದೆ ಆದರೆ ವಿದ್ಯೆ ಎಂಬ ಸಂಪತ್ತನ್ನು ಗಳಿಸಿದರೆ ಅದು ನಮ್ಮನ್ನೇ ಕಾಪಾಡುತ್ತದೆ ಹಾಗಾಗಿ ವಿದ್ಯಾರ್ಥಿಗಳು ಪರಿಶ್ರಮದಿಂದ ಅಭ್ಯಾಸ ಮಾಡಿ ಉತ್ತಮ ಬದುಕನ್ನು ಕಟ್ಟಿಕೊಳ್ಳಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಶಾಂತಮೂರ್ತಿ ಬಿ.ಕುಲಕರ್ಣಿ ಮಾತನಾಡಿ ರ‍್ಯಾಂಕ್ ಪಡೆಯಲು ಉಪನ್ಯಾಸಕರ ಶ್ರಮ ಹಾಗೂ ಆಡಳಿತ ಮಂಡಳಿ ಸಹಕಾರ ಮುಖ್ಯವಾಗಿದೆ ಎಂದು ಸ್ಮರಿಸಿದರು. ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಾದ ಜೆ.ಯು. ಅರ್ಪಿತ, ಬಿ.ಎ. ವಿನಯ್ ಕುಮಾರ್ ಬಿ.ಎಂ.ದೀಪಿಕಾ ಇವರನ್ನು ಗೌರವಿಸಿ ಅಭಿನಂದಿಸಲಾಯಿತು. ಸಹಾಯಕ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಂಜುನಾಥ ಇವರನ್ನು ಸಹ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಉತ್ತಂಗಿ ಕೊಟ್ರಗೌಡ, ಕೆ.ಬಿ. ಮಲ್ಲಿಕಾರ್ಜುನ, ಅಡಿಕೆ ಮಂಜುನಾಥ್, ಹಾಗೂ ಉಪನ್ಯಾಸಕರಾದ ರವೀಂದ್ರಗೌಡ, ಜೆ.ಎಂ. ಶಿವಪ್ರಸಾದ್, ವಾಮದೇವ್, ಜೆ.ಬಿ.ಸಿದ್ದನಗೌಡ, ಕೃಷ್ಣಪ್ಪ . ಬಸವರಾಜ್.ಸಿ ರವಿಕುಮಾರ್ ಎಂ. ಕೆ. ಉಮೇಶ್ ಶಿವಕುಮಾರ್ ಶೇಖ್ನೂರಲ್ಲಾ , ಕರಿಬಸವಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು.

ಅರವಿಂದ್ ಬಸಾಪುರ ಸ್ವಾಗತಿಸಿದರು, ಪೂರ್ಣಿಮಾ ನಿರೂಪಿಸಿದರು, ರಾಧಾಸ್ವಾಮಿ ವಂದಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here