ಖಾತೆದಾರರ ಜೊತೆ ಯೂನಿಯನ್ ಬ್ಯಾಂಕ್ ಫೀಲ್ಡ್ ಆಫಿಸರ್ ತಕರಾರು

0
300

ವಿಜಯನಗರ/ಕೊಟ್ಟೂರು:ಜೂನ್:21:-
ತಾಲೂಕಿನ ಸುಂಕದಕಲ್ಲು ಗ್ರಾಮದ ನಿವಾಸಿ ಮೈಲಪ್ಪ ಆದ ಗ್ರಾಹಕ ಯೂನಿಯನ್ ಬ್ಯಾಂಕ್ ಖಾತೆ ಹೊಂದಿದ್ದ ಕಾರಣ ಬ್ಯಾಂಕ್ ಗೆ ಹಣ ಬಿಡಿಸಲು ಬಂದಾಗ ಫೀಲ್ಡ್ ಆಫಿಸರ್ ಹತ್ತಿರ ಹೋಗಿ ಸ್ಲಿಪ್ ಕೇಳಲಾಯಿತು ಆಗ ಫೀಲ್ಡ್ ಆಫೀಸರ್ ನಿಮ್ಮ ಖಾತೆಯಲ್ಲಿ ಇದ್ದ ಹಣವು ಬಡ್ಡಿಗೆ ಜಮಾ ಮಾಡುತ್ತೇವೆ ಇದರಿಂದಾಗಿ ನಿಮಗೆ ಹಣ ಬರುವುದಿಲ್ಲ ಎಂದು ಹೇಳತೋಡಗಿದರು ಗ್ರಾಹಕ ನಮ್ಮ ಖಾತೆಯಲ್ಲಿ ಸಾಕಷ್ಟು ಮೊತ್ತ ಇದೆ ನಿಮಗೆ ಕೊಡುವ ಬಡ್ಡಿ ತೊರೆದು ಉಳಿದ ಹಣದಲ್ಲಿ 20ಸಾವಿರ ರೂಪಾಯಿ ಕೊಡುವಂತೆ ಕೈಮುಗಿದು ಕೇಳಿಕೊಂಡರು ಇದಕ್ಕೆ ಪ್ರತಿಕ್ರಿಯಿಸದ ಆಫೀಸರ್ ದರ್ಪ ತೋರಿ ಹೊರಗಡೆ ಹೋಗಿ ಎಂದು ಹೇಳಿದರು
ನಂತರ ಗ್ರಾಹಕ ಸಂಬಂಧಿ ಬಂದು ಸರ್ ನಮ್ಮ ಅಪ್ಪನು ಅನಾರೋಗ್ಯದಿಂದ ಬಳಲುತ್ತಿದ್ದು ತುರ್ತು ಚಿಕಿತ್ಸೆಗೆ ದಾವಣಗೇರಿಗೆ ಹೋಗಲು ಡಾಕ್ಟರ ಸಲಹೆ ನೀಡಿದ್ದಾರೆ ಇದರ ವಿಚಾರವಾಗಿ ನಮಗೆ ಹಣದ ಅವಶ್ಯಕತೆ ತುಂಬಾ ಇದೆ ದಯಮಾಡಿ ಹಣ ನೀಡಿ ಎಂದು ಭಾವುಕರಾಗಿ ಕೇಳಿಕೊಂಡರು ಸಹ ಯಾವುದೇ ರೀತಿಯಲ್ಲಿ ಸ್ಪಂದಿಸದೆ ದುರ್ವರ್ತನೆ ತೋರಿದರು ಎಂದು ಉದಯಕಾಲ ಹಾಗೂ ಹಾಯ್ ಸಂಡೂರ್ ಪತ್ರಿಕೆಗೆ ತಮ್ಮ ಅಳಲನ್ನು ತೋಡಿಕೊಂಡರು

ಈ ವಿಚಾರವಾಗಿ ಡಿಎಸ್ಎಸ್ ಜಿಲ್ಲಾ ಸಂಘಟನೆ ಅಧ್ಯಕ್ಷ ಬಿ. ಮರಿಸ್ವಾಮಿ ಸ್ಥಳಕ್ಕೆ ಆಗಮಿಸಿ ಮೇಲ್ ಅಧಿಕಾರಿಗಳಾದ ಬ್ಯಾಂಕ್ ಮ್ಯಾನೇಜರ್ ಜೊತೆ ಮಾತನಾಡಲು ಹೋದರೆ ಆ ಸಮಯದಲ್ಲಿ ಮ್ಯಾನೇಜರ್ ಬೇರೆ ಕಡೆ ಹೋಗಿದ್ದ ವಿಚಾರ ತಿಳಿದು ಮ್ಯಾನೇಜರ್ ಮೊಬೈಲ್ ನಂಬರ್ ಕೊಡಿ ಅವರ ಹತ್ತಿರ ಸಮಸ್ಯೆ ಹೇಳಿ ಬಗೆಹರಿಸಿಕೊಳ್ಳುತ್ತೇವೆ ಈ ಗ್ರಾಹಕನಿಗೆ ತುಂಬಾ ಅನಾರೋಗ್ಯದ ಸಮಸ್ಯೆ ಇದೆ ಎಂದು ಫೀಲ್ಡ್ ಆಫೀಸರ್ ಹತ್ತಿರ ನಂಬರ್ ಕೇಳಲಾಯಿತು ಆಗ ಫೀಲ್ಡ್ ಆಫಿಸರ್ ನಂಬರ್ ಕೊಡುವುದಿಲ್ಲ ಮ್ಯಾನೇಜರ್ ಎಲ್ಲಿ ಇರುತ್ತಾರೋ ಅಲ್ಲಿಗೆ ಹೋಗಿ ಮಾತನಾಡಿ ಎಂದು ಸುಮಾರು 2 ಘಂಟೆಗೂ ಕಾಲ ಸತಾಯಿಸತೊಡಗಿದರು
ನಂತರ ಅಲ್ಲಿಯೇ ಇದ್ದ ಇನ್ನೊಬ್ಬ ಬ್ಯಾಂಕ್ ಸಿಬ್ಬಂದಿ ಮ್ಯಾನೇಜರ್ ಫೋನ್ ನಂಬರ್ ನೀಡಿದರು ತದ ನಂತರ ಮ್ಯಾನೇಜರ್ ಹತ್ತಿರ ಡಿಎಸ್ಎಸ್ ಮುಖಂಡ ಬಿ.ಮರಿಸ್ವಾಮಿ ಸಂಭಾಷಣೆ ಮೂಲಕ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿದರು

ನನಗೆ ತುಂಬಾ ಅನಾರೋಗ್ಯ ಸಮಸ್ಯೆ ಇರುವ ಕಾರಣ ಬ್ಯಾಂಕ್ ನ ಖಾತೆಯಲ್ಲಿ ಹಣ ಬಿಡಿಸಲು ಬಂದರೆ ಬ್ಯಾಂಕ್ ನ ಫೀಲ್ಡ್ ಆಫೀಸರ್ ಸುಮಾರು 2 ಘಂಟೆಗಳ ಕಾಲ ಯಾವುದಕ್ಕೂ ಸ್ಪಂದಿಸದೆ ಹಣ ಡ್ರಾ ಮಾಡುವ ಚಲನ್ ನೀಡದೆ ಸತಾಯಿಸತೊಡಗಿದ್ದರು
ನಾನು ಸಾವು -ನೋವಿನ ಮದ್ಯೆ ಇದ್ದ ವಿಚಾರ ತಿಳಿಸಿದರು ಕೂಡ ಬ್ಯಾಂಕ್ ಫೀಲ್ಡ್ ಆಫೀಸರ್ ಯಾವುದೇ ರೀತಿಯಲ್ಲಿ ಸ್ಪಂದಿಸಲಿಲ್ಲ ಇಂತಹ ಆಫೀಸರ್ ಗ್ರಾಹಕರಿಗೆ ಏನು ಸೇವೆ ಸಲ್ಲಿಸುತ್ತಾರೆ ಗೊತ್ತಿಲ್ಲ ಇಂತವರಿಂದ ಇಡೀ ಬ್ಯಾಂಕ್ ಗೆ ಕೆಟ್ಟ ಹೆಸರು.

-ಮೈಲಪ್ಪ.
ಯೂನಿಯನ್ ಬ್ಯಾಂಕ್ ಖಾತೆದಾರ

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here