ಸೇವೆಯ ಮಾಡುವ ಮನೋಭಾವ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು : ಡಾ. ರಶ್ಮಿ

0
229

ಕೊಟ್ಟೂರು:ಜುಲೈ:02:-
ಶ್ರೀ ಗುರು ವಿದ್ಯಾಭಿರುದ್ಧಿ ಸಂಘ (ರಿ ) ಗಂಗೋತ್ರಿ ಬಿ ಎಸ್ ಡಬ್ಲ್ಯೂ ಪದವಿ ಮಹಾ ವಿದ್ಯಾಲಯ ಹಾಗು ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಮತ್ತು ಗ್ರಾಮೀಣ ಸಮಾಜಕಾರ್ಯ ಶಿಬಿರದ ಮೂರನೇ ದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸಮುದಾಯ ಆರೋಗ್ಯ ಕೇಂದ್ರ ಉಜ್ಜಿನಿ. ಸುಖಾಯ ಆಸ್ಪತ್ರೆ ಮತ್ತು ಸಂಜೀವಿನಿ ಡೆಂಟಲ್ ಆಸ್ಪತ್ರೆ ಕೊಟ್ಟೂರು ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದು.

ಈ ಕಾರ್ಯಕ್ರಮವನ್ನು ಡಾಕ್ಟರ್ ಬಸವಾನಂದ ದಂತವೈದ್ಯರು ಡಾ.ರಶ್ಮಿ ಆಡಳಿತ ವೈದ್ಯಾಧಿಕಾರಿಗಳು ಆರೋಗ್ಯ ಕೇಂದ್ರ ಉಜ್ಜಿನಿ ಡಿ. ವರುಣ್ ಸುಖಾಯ ಆಸ್ಪತ್ರೆ ಯವರು ಚಾಲನೆ ನೀಡಿದರು.

ನಂತರ ಕಾರ್ಯಕ್ರಮ ಉದ್ದೇಶಿಸಿ ಡಾಕ್ಟರ್ ರಶ್ಮಿ ಅವರು ಸಮುದಾಯದ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಹಾಗೆಯೇ ಸೇವೆಯ ಮಾಡುವ ಮನೋಭಾವ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಬೆಳೆಸಿಕೊಳ್ಳಬೇಕು ಇಂದು ತಮ್ಮ ಹಿತನುಡಿಗಳನ್ನಾಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಸಿ.ಬಿ.ರಜತ್, ಕಾರ್ಯದರ್ಶಿಗಳು ಶ್ರೀ ಗುರುಬಸವೇಶ್ವರ ವಿದ್ಯಾಭಿವೃದ್ಧಿ ಸಂಘ ಶ್ರೀ ಮರುಳಾರಾಧ್ಯ ಆಪ್ತ ಸಮಾಲೋಚಕರು ಐಸಿಟಿಸಿ ಸಮುದಾಯ ಆರೋಗ್ಯ ಕೇಂದ್ರ ಉಜ್ಜಿನಿ. ಡಾಕ್ಟರ್ ವರುಣ್ ಸುಕಾಯ ಆಸ್ಪತ್ರೆ. ಡಾಕ್ಟರ್ ಬಸವಾನಂದ ವೈದ್ಯರು ಸಂಜೀವಿನಿ ಡೆಂಟಲ್ ಆಸ್ಪತ್ರೆ. ಶಿಬಿರದ ಸಂಯೋಜಕ ಶಶಿಕಿರಣ್,ಕೆ. ಸಹ ಶಿಬಿರಧಿಕಾರಿಗಳಾದ ಪೂರ್ಣಚಂದ್ರ, ಎ.ಎಂ. ಪ್ರಫುಲ್ ಚಂದ್ರ, ಎಂ. ಎಸ್. ಪ್ರಕಾಶ್ ಗೌಡ್ರು ಎಂ. ಜಿ. ವೀರಯ್ಯ ಎ. ಎಂ ಶತಾಯುಷಿಗಳು ಉಪಸ್ಥಿತಿ ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here