ಬಕ್ರೀದ್ ಹಬ್ಬವನ್ನು ಶಾಂತಿಯಿಂದ ಅಚರಿಸಿರಿ;ಸಿಪಿಐ ಸೋಮಶೇಖರ ರೆಡ್ಡಿ

0
326

ಕೊಟ್ಟೂರು:ಜುಲೈ:06:-ಬಕ್ರೀದ್‌ ಹಬ್ಬದ ಸಮಯದಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕೊಟ್ಟೂರು ಪೊಲೀಸ್‌ ಠಾಣೆಯಲ್ಲಿ ಶಾಂತಿಸಭೆ ಬುಧವಾರದಂದು  ಏರ್ಪಡಿಸಲಾಗಿತ್ತು.

ಎಲ್ಲಾ ಸಮುದಾಯದ ಮುಖಂಡರನ್ನು ಸಭೆಗೆ ಕರೆಯಬೇಕಿತ್ತು ಇನ್ನು ಮುಂದಿನ ಸಭೆಗಳಲ್ಲಿ ಕರೆಯುವಂತೆ ಸಿಬ್ಬಂದಿ ವರ್ಗದವರಿಗೆ ತಿಳಿಸಲಾಯಿತು

ಸಿಪಿಐ ಸೋಮಶೇಖರ ರೆಡ್ಡಿ ಮಾತನಾಡಿ ಬಕ್ರಿದ ದಾನ ಧರ್ಮದ ಹಬ್ಬವಾಗಿದ್ದು, ಆ ಸಮಯದಲ್ಲಿ ಹಿಂದೂ ಮುಸ್ಲಿಂ ಸಮಾಜದವರು ಒಟ್ಟಾಗಿ ಸೇರಿ ಶಾಂತರೀತಿಯಿಂದ ಹಬ್ಬ ಆಚರಿಸಬೇಕು.

ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆ ಸದಾ ಸಿದ್ಧವಾಗಿದ್ದು, ಯಾವುದೇ ಅಹಿತಕರ ಘಟನೆ ಆಗದಂತೆ ಶಾಂತತೆಯಿಂದ ಸಹೋದರ ರಂತೆ ಹಬ್ಬವನ್ನು ಆಚರಿಸಬೇಕು 
ಅವರು ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಬಕ್ರೀದ್‌ ಹಬ್ಬದ ನಿಮಿತ್ತ ನಡೆದ ಶಾಂತಿ ಸಭೆಯಲ್ಲಿ ಸಭೆ ಉದ್ದೇಶಿಸಿ ಮಾತನಾಡಿದ, ಪಟ್ಟಣದ ಹಿಂದೂ ಮುಸ್ಲಿಂ ಬಾಂಧವರು ನಾವೆಲ್ಲರೂ ಸಹೋದರ ರಂತೆ ಒಗ್ಗಟ್ಟಾಗಿ ಶಾಂತಿಯಿಂದ ಹಬ್ಬ ಆಚರಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಪಿಎಸ್‌ಐ ವಿಜಯ ಕೃಷ್ಣ. ಎ ಎಸ್ ಐ ಹಬ್ಬಾಸ್  ಹಾಗೂ ಮುತ್ತುವಲ್ಲಿ ಸಮಿತಿ ಮುಖಂಡರು ಆಯುಬ್ ಸಾಬ್, ಭಾಷಾ, ಅಮಾನ್, ಪ.ಪಂ.ಉಪಾಧ್ಯಕ್ಷ ಶಫಿ, ಅಂಜುಮನ್‌ ಇಸ್ಲಾಂ ಸಮಿತಿ ಅಧ್ಯಕ್ಷ  ನಜೀರ್ ಸಾಬ್ ಯಾಸೀನ್, ಶಪಿ, ಸೈ ಫುಲ್ಲ, ಸದ್ದಾಂ, ಹಾಗೂ ಕೊಟ್ಟೂರು ಪೊಲೀಸ್ ಸಿಬ್ಬಂದಿಗಳು ಇತರರು ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here