ನರೇಗಾ ಕೆಲಸದ ಸಮಯ ಬದಲಾವಣೆ ಮಾಡಲು ಡಿವೈಎಫ್ಐ ಪ್ರತಿಭಟನೆ, ಮನವಿ

0
222

ಸಂಡೂರು:ಮಾ:14:-ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವೈಜ್ಞಾನಿಕ ನೀತಿಯಾದ ಸಮಯ ಬದಲಾವಣೆ ಮಾಡಿದ ಪರಿಣಾಮ ಹೆಚ್ಚುತ್ತಿರುವ ಬಿಸಿಲು ದಗೆಯಲ್ಲಿ ಕೆಲಸದ ಸಮಯ ಬದಲಾಯಿಸಲು ಒತ್ತಾಯಿಸಿ ಡಿವೈಎಫ್ಐ ನೇತೃತ್ವದಲ್ಲಿ ಸಂಡೂರು ತಾಲೂಕು ತಾಳೂರು ಗ್ರಾಮದ ಕಾಮಗಾರಿ ನಡೆಯುವ ಸ್ಥಳದಲ್ಲಿ ಪ್ರತಿಭಟನೆ ಮತ್ತು ತೋರಣಗಲ್ಲು ಗ್ರಾಮ ಪಂಚಾಯಿತಿ ಮಾನ್ಯ ಪಿಡಿಓ ಅಧಿಕಾರಿಗಳ ಮೂಲಕ ಮನವಿ ಪತ್ರ ಕಳುಹಿಸಲಾಯಿತು.

ಬೇಡಿಕೆಗಳು ಈ ಕೆಳಗಿನಂತಿವೆ:
◆ಬೇಸಿಗೆ ಕಾಲದಲ್ಲಿ 9.00 ಗಂಟೆಯಿಂದ 1.30 ರವರೆಗೆ ನಿಗದಿಗೊಳಿಸಿರುವುದನ್ನು ಕೈಬಿಡಬೇಕು ಹಾಗು ಅಳತೆ ಪ್ರಕಾರ ಕೆಲಸ ಮಾಡಿಸಿ ಹಾಜರಿ ನೀಡಬೇಕು.
◆ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನೀಡಬೇಕು. ◆250 ದಿನಗಳ ಕಾಲ ಕೆಲಸ ನೀಡಬೇಕು,
◆ನಿರಂತರವಾಗಿ ಕೆಲಸ ನೀಡಬೇಕು ◆ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ನೀಡದಿದ್ದಲ್ಲಿ ಅರ್ಧ ಕೂಲಿ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಬಳ್ಳಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಾಳೂರು ಮತ್ತು ತೋರಣಗಲ್ಲು ಗ್ರಾಮ ಪಂಚಾಯಿತಿ ಪಿಡಿಓ ಜಿಲಾನ್ ರವರ ಮೂಲಕ ಮನವಿ ಪತ್ರ ಕಳುಹಿಸಲಾಯಿತು….

ಈ ಸಂದರ್ಭದಲ್ಲಿ ಡಿವೈಎಫ್ಐ ಬಳ್ಳಾರಿ ಜಿಲ್ಲಾ ಮುಖಂಡ ಎಸ್.ಕಾಲೂಬ, ಉಪಾಧ್ಯಕ್ಷರಾದ ಸ್ವಾಮಿ, ಮುಖಂಡರುಗಳಾದ ವೆಬಾಕುಮಾರಿ, ಸಭಿಯಾಬಾನು,ಮಾಬುನ್ನಿ,ಬಸಪ್ಪ, ಇತರರು ಭಾಗವಹಿಸಿದ್ದರು..

LEAVE A REPLY

Please enter your comment!
Please enter your name here