ತೋರಣಗಲ್ಲು ಗ್ರಾಮದ ಒ.ಪಿ ಜಿಂದಾಲ್ ನರ್ಸಿಂಗ್ ವಿದ್ಯಾರ್ಥಿಗಳಿಂದ “ವಿಶ್ವ ಕ್ಯಾನ್ಸರ್ ದಿನಾಚರಣೆ” ಜಾಗೃತಿ ಕಾರ್ಯಕ್ರಮ,

0
450

ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಶ್ರೀ ಈಶ್ವರ ದೇವಸ್ಥಾನದ ಆವರಣದಲ್ಲಿ ಒ.ಪಿ ಜಿಂದಾಲ್ ನರ್ಸಿಂಗ್ ಕಾಲೇಜು ಮತ್ತು ಕೆ.ಎಚ್.ಪಿ.ಟಿ ಸಂಸ್ಥೆ, ಬೆಂಗಳೂರು, ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಜಾಗೃತಿ ಕಾರ್ಯಕ್ರಮ ನಡೆಯಿತು,

ಕಾರ್ಯಕ್ರಮ ಉದ್ದೇಶಿಸಿ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್ ಮಾತನಾಡಿ ಕ್ಯಾನ್ಸರ್ ಗುಣಪಡಿಸಬಹುದಾದ ಕಾಯಿಲೆ, ಪತ್ತೆ ಹಚ್ಚುವ ಕಾರ್ಯ ಬೇಗ ಆಗಬೇಕು, ಮೊದಲ ಹಂತದಲ್ಲೆ ಪತ್ತೆಯಾದಲ್ಲಿ ರೆಡಿಯೋ ಥೆರಪಿ,ಕಿಮೋಥೆರಪಿ ಮತ್ತು ಸೂಕ್ತ ಔಷಧಗಳು ಹಾಗೂ ಶಸ್ತ್ರ ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದರು,

ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಆಶಾ.ಜಿ.ಎಸ್, ಸುಮನಾ, ಮೇಘನಾ, ಚೈತ್ರ, ಕಲೇಶ್ವರಿ ಅವರ ತಂಡಗಳು ಸ್ವಯಂ ತಯಾರಿಸಿದ ಚಾರ್ಟಗಳ ಮೂಲಕ ಕ್ಯಾನ್ಸರ್ ವಿಧಗಳು, ಕ್ಯಾನ್ಸರ್ ಕಾರಕ ಅಪಾಯಕಾರಿ ವಾತಾವರಣ, ತಂಬಾಕು ಸೇವನೆಯಿಂದ ಉಂಟಾಗುವ, ಹಾಲ್ಕೊಹಾಲ್ ದುಶ್ಚಟಗಳಿಂದ ಉಂಟಾಗುವ ವಿವಿಧ ಕ್ಯಾನ್ಸರ್ ಗಳು ಹಾಗೂ ಕ್ಯಾನ್ಸರ್ ತಡೆಯುವ ಆರೋಗ್ಯಕರ ಜೀವನ ಶೈಲಿಗಳ ಬಗ್ಗೆ ಜಾಗೃತಿ ಮೂಡಿಸಿದರು,

ಕುಮಾರಿ ಮಧುಶ್ರೀ, ತೇಜಸ್ವಿನಿ, ನಾಗವೇಣಿ, ಪಲ್ಲವಿ,ನೇತ್ರಾ,ಮೇಘನಾ,ಸಿಂಧು,ಗೌಶಿಯಾ,ಕವಿತಾ,ಪವಿತ್ರ,ಪ್ರೀತಿ,ನಿಸರ್ಗ,ಅನುಶಾ ಅವರ ಮತ್ತೊಂದು ತಂಡ ಕುಡಿತ ಮತ್ತು ತಂಬಾಕು ಸೇವಿಸುವ ಕುಟುಂಬದಲ್ಲಿ ಮಗ ಸಹಜವಾಗಿ ಕ್ಯಾನ್ಸರ್‌ಗೆ ತುತ್ತಾಗುವ‌ ಬೀದಿ ನಾಟಕವನ್ನು ಉತ್ತಮವಾಗಿ ಅಭಿನಯಿಸಿ ತೋರಿಸಿದರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರ ಪ್ರಶಂಸೆಗೆ ಪಾತ್ರರಾದರು,
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಮಾತನಾಡಿ, ಪ್ರತಿಜ್ಞೆ ಬೋಧಿಸಿದರು,

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಕಾರ್ಯಕ್ರಮ ಆಯೋಗ ವಿದ್ಯಾರ್ಥಿಗಳಿಗೆ, ಮತ್ತು ನರ್ಸಿಂಗ್ ಕಾಲೇಜಿನ ಉಪ ಪ್ರಾಚಾರ್ಯರಾದ ವಿಜಯಲಕ್ಷ್ಮಿ, ವಿಂಧ್ಯಾ, ಮತ್ತು ಕೆ.ಹೆಚ್.ಪಿ.ಟಿ ಸಂಯೋಜಕಿ ಆಶಾ, ಮಂಗಳಗೌರಿ,ವೇದಾಕುಮಾರಿ, ಕಾರ್ಯಕ್ರಮ ಮಾಡಲು ಅವಕಾಶ ಮಾಡಿ ಕೊಟ್ಟ ಆಶಾ ಕಾರ್ಯಕರ್ತೆ ಎರ್ರಮ್ಮ,ನೀಲಮ್ಮ, ರಾಜೇಶ್ವರಿ,ವಿಜಯ ಲಕ್ಷ್ಮಿ, ಶಿವಲಿಂಗಮ್ಮ, ಅಂಗನವಾಡಿ ಕಾರ್ಯಕರ್ತೆ ಶಂಕ್ರಮ್ಮ ಅವರಿಗೆ ವಂದನೆಗಳನ್ನು ಅರ್ಪಿಸಿದರು,

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಚೆನ್ನಮ್ಮ, ಹಿರಿಯ ಮಹಿಳಾ ನಾಗರೀಕರಾದ ಪಾರ್ವತಮ್ಮ, ಷಣ್ಮುಖಪ್ಪ, ಸ್ವಾಮಿ, ತಿಮ್ಮಪ್ಪ,ರುದ್ರಪ್ಪ,ಸಿದ್ದಪ್ಪ, ಫಾತಿಮಾ, ಶ್ವೇತಾ, ಜ್ಯೋತಿ, ಶಿಲ್ಪಾ,ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ಅಹಮದ್, ಯಂಕಪ್ಪ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here