ಸಂಡೂರು ತಾಲೂಕಿನ ವಿವಿಧೆಡೆ ಬಸ್‌ ಸಂಚಾರದಲ್ಲಿ ವ್ಯತ್ಯಯ

0
1066

ಸಂಡೂರು:ಅ:0೨:- ದಾವಣಗೆರೆಯಲ್ಲಿ ಆ.3ರಂದು ನಡೆಯಲಿರುವ ಸಿದ್ದರಾಮೋತ್ಸವ ಖಾಸಗಿ ಕಾರ್ಯಕ್ರಮಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಂಡೂರು ವಿಭಾಗದದಿಂದ ಸುಮಾರು 74 ಬಸ್‌ಗಳನ್ನು ಕರಾರು ಒಪ್ಪಂದದ ಮೇಲೆ ಒದಗಿಸಲಾಗಿದೆ.

ಈ ಕಾರಣದಿಂದ ತಾಲೂಕಿನಲ್ಲಿ ವಿವಿಧೆಡೆ ಬಸ್‌ ಸಂಚಾರದಲ್ಲಿ ಆ.3 ಮತ್ತು 4ರಂದು ತಾಲೂಕಿನ ಹಲವು ಹಳ್ಳಿಗಳಿಗೆ ಬಸ್ ಸಂಚಾರದಲ್ಲಿ
ಸಂಡೂರು ಬಸ್ ಘಟಕದಿಂದ ವಿವಿಧ ಸ್ಥಳಗಳಿಗೆ ತೆರಳುವ ಬಸ್‌ಗಳ ದೈನಂದಿನ ಅನುಸೂಚಿಗಳ ಕಾರ್ಯಾಚರಣೆಯಲ್ಲಿ ಎರಡು ದಿನಗಳ ಮಟ್ಟಿಗೆ ವ್ಯತ್ಯಯವಾಗಲಿದೆ. ಶಾಲಾ ಮತ್ತು ಕಾಲೇಜ್ ಗೆ ಹೋಗಿಬರುವ ವಿದ್ಯಾರ್ಥಿಗಳಿಗೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ತಾಲೂಕಿನ ವಿದ್ಯಾರ್ಥಿಗಳು , ಸಾರ್ವಜನಿಕರು ,ಪ್ರಯಾಣಿಕರು ಸಹಕರಿಸಬೇಕು ಎಂದು ಸಂಡೂರು ಘಟಕ ವ್ಯವಸ್ಥಾಪಕ ವೆಂಕಟೇಶ್ ಅವರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here