ಜಿಲ್ಲಾ ಪಂಚಾಯತ ವೈಯಕ್ತಿಕ ಗೃಹ ಶೌಚಾಲಯಕ್ಕೆ ಫಲಾನುಭವಿಗಳೇ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶ

0
58

ಧಾರವಾಡ: ಆ.04: ಸ್ವಚ್ಚ ಭಾರತ್ ಮಿಷನ್(ಗ್ರಾ) ಯೋಜನೆಯ 2 ನೇ ಹಂತದಡಿಯಲ್ಲಿ ಕೌಟುಂಬಿಕ ಶೌಚಾಲಯ ಹೊಂದದೇ ಇರುವ ಅರ್ಹ ಫಲಾನುಭವಿಗಳು ವೈಯಕ್ತಿಕ ಗೃಹ ಶೌಚಾಲಯದ ನಿರ್ಮಾಣಕ್ಕಾಗಿ ಪ್ರೋತ್ಸಾಹ ಧನ ಪಡೆದುಕೊಳ್ಳಲು ಫಲಾನುಭವಿಗಳೇ ನೇರವಾಗಿ ಅರ್ಜಿಯನ್ನು ಸಲ್ಲಿಸಲು SBM-G ಪೋರ್ಟಲ್ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಅರ್ಹ ಫಲಾನುಭವಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು https://swachhbharatmission.gov.in/sbmcms/index.htm ಜಾಲತಾಣಕ್ಕೆ ಭೇಟಿ ನೀಡಿ Citizen Corner ಮೇಲೆ ಕ್ಲಿಕ್ ಮಾಡಿ Application form for IHHL ಮೆನ್ಯೂನಲ್ಲಿ Citizen Registration ಆಯ್ಕೆ ಮಾಡಿ ಫಲಾನುಭವಿಗಳು ತಮ್ಮ ಮೊಬೈಲ್ ಸಂಖ್ಯೆ, ಹೆಸರು, ವಿಳಾಸವನ್ನು ಭರ್ತಿ ಮಾಡಿ, ಸಲ್ಲಿಸಿ ನೊಂದಾಯಿಸಿಕೊಳ್ಳಬೇಕು.

ನಂತರ ಸೈನ್‍ಇನ್ ಪೇಜ್‍ನಲ್ಲಿ ಮೊಬೈಲ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯ ಕೊನೆಯ ನಾಲ್ಕು ಸಂಖ್ಯೆಗಳನ್ನು ಉಪಯೋಗಿಸಿ ಲಾಗಿನ್ ಆಗಿ ಪಾಸವರ್ಡ ಬದಲಾಯಿಸಿಕೊಂಡ ನಂತರ New Application ಮೇಲೆ ಕ್ಲಿಕ್ ಮಾಡಿ ಫಲಾನುಭವಿಗಳು ತಮ್ಮ ಆಧಾರ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಬ್ಯಾಂಕ್ ಪಾಸಬುಕ್‍ನ ಒಂದನೇ ಪುಟವನ್ನು ಅಪ್‍ಲೋಡ್ (ಆರೋಹಿಸಿ) ಮಾಡಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ಒಂದು Unique Reference ಸಂಖ್ಯೆಯು ದೊರೆಯುತ್ತದೆ ಮತ್ತು ಸಲ್ಲಿಸಿದ ಅರ್ಜಿಯ ಮುಂದಿನ ಹಂತಗಳನ್ನು ಟ್ರ್ಯಾಕ್ ಮಾಡಲು ಈ ಸಂಖ್ಯೆಯನ್ನು ಬಳಸಬಹುದು. ಸಲ್ಲಿಸಿದ ಅರ್ಜಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಪರೀಶೀಲಿಸಿ ಸರ್ಕಾರದ ನಿಯಮಾನುಸಾರದಂತೆ ಇದ್ದಲ್ಲಿ ಅರ್ಜಿಯನ್ನು ಅನುಮೋದಿಸುತ್ತಾರೆ. ಇಲ್ಲದಿದದ್ದಲ್ಲಿ ತಿರಸ್ಕರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಗ್ರಾಮ ಪಂಚಾಯತಿಗೆ ಸಂಪರ್ಕಿಸಲು ಮತ್ತು ಪರೀಶಿಲನೆಗೆ ಅಗತ್ಯ ದಾಖಲೆಗಳನ್ನು ನೀಡಬೇಕೇಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here