ಕ್ಷೇತ್ರದ ಸಮಸ್ಯೆ ಅರಿತು,ನಿಗಿಸುವಲ್ಲಿ ಹಗರಿಬೊಮ್ಮನಹಳ್ಳಿ ಶಾಸಕ ಸಂಪೂರ್ಣ ವಿಫಲರಾಗಿದ್ದಾರೆ. ಕ್ಷೇತ್ರದಲ್ಲಿ ಅಧೋಗತಿ ತಲುಪಿದ ರಸ್ತೆಗಳು-ಡಾ.ತಿಪ್ಪೇಸ್ವಾಮಿ ವೆಂಕಟೇಶ, ಜೆಡಿಎಸ್ ನಿಯೋಜಿತ ಅಭ್ಯರ್ಥಿ

0
406

ಹಗರಿಬೊಮ್ಮನಹಳ್ಳಿ ಆ,10:-
ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾನಾಯ್ಕ್ ಉತ್ತಮ ಶಾಸಕರಲ್ಲ, ಸತತ ಎರಡು ಸಲ ಗೆದ್ದಿದ್ರು ಈ ಕ್ಷೇತ್ರದಲ್ಲಿನ ಮೂಲಭೂತ ಸಮಸ್ಯೆಗಳನ್ನು ಅರಿತುಕೊಂಡು, ಅವುಗಳಿಗೆ ಸೂಕ್ತ ಪರಿಹಾರೋಪಗಳನ್ನು ಕಂಡುಕೊಳ್ಳುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆಂದು
ಈ ಕ್ಷೇತ್ರದ ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಡಾ.ತಿಪ್ಪೇಸ್ವಾಮಿ ವೆಂಕಟೇಶ ದೂರಿದ್ದಾರೆ.

ಬುಧವಾರ ಹಳೇ ಹಗರಿಬೊಮ್ಮನಹಳ್ಳಿ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಪಕ್ಷ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅವರು ಅಧಿಕಾರಕ್ಕೆ ಬಂದು ಹತ್ತು ವರ್ಷ ಪೂರ್ಣಗೊಳ್ಳುತ್ತಾ ಬಂತು ಆದರೇ ಈ ಕ್ಷೇತ್ರದಲ್ಲಿನ ರಸ್ತೆಗಳ ಸ್ಥಿತಿ ಅತ್ಯಂತ ತಲುಪಿದೆ. ಸ್ವಲ್ಪ ಯಾಮಾರಿದ್ರೂ ಜನ ಪರಲೋಕಕ್ಕೆ ಹೋಗುವಂತಿವೆ. ಹಗರಿಬೊಮ್ಮನಹಳ್ಳಿ, ಕೊಟ್ಟೂರು ಮತ್ರು ಮರಿಯಮ್ಮನಹಳ್ಳಿ ಪಟ್ಟಣಗಳ ಪ್ರಮುಖ ರಸ್ತೆಗಳು ಅದ್ವಾನಗೊಂಡಿವೆ ಎಂದು ಕ್ಷೇತ್ರದಲ್ಲಿನ ರಸ್ತೆಗಳ ದುಸ್ಥಿತಿಗಳ ಬಗ್ಗೆ ಗೋಷ್ಠಿಯಲ್ಲಿ ವಿವರಿಸಿದರು.

ಇನ್ನೂ ಇಡೀ ಕ್ಷೇತ್ರದ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಸುರಕ್ಷಿತವಾದ ಶೌಚಾಲಯದ ಸೌಲಭ್ಯ ಕಲ್ಪಿಸುವಲ್ಲಿ ಅವರು ವಿಫಲರಾಗಿದ್ದಾರೆ. ಶುದ್ದ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುವ ಸಂಖ್ಯೆಗಿಂತಲೂ ಅನಾರೋಗ್ಯ ದಿಂದ ಮಲಗಿಕೊಂಡಿರುವಂತಹವೇ ಹೆಚ್ಚಿವೆ.
ಪಾರ್ಕ ವ್ಯವಸ್ಥೆ, ಬೀದಿ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಸೂಕ್ತವಾಗಿ ನಿರ್ವಹಿಸುವಲ್ಲಿ ಕ್ಷೇತ್ರದ ಶಾಸಕರು ವಿಫಲರಾಗಿದ್ದಾರೆಂದು ಡಾ.ತಿಪ್ಪೇಸ್ವಾಮಿ ಶಾಸಕರ ವಿರುದ್ಧವಾಗಿ ಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಶಾಸಕರ ಹತ್ತು ವರ್ಷಗಳ ಆಡಳಿತದ ವೈಫಲ್ಯಗಳ ವಿವರಗಳನ್ನು ಶೀಘ್ರದಲ್ಲಿಯೇ ಕ್ಷೇತ್ರದ ಜನರ ಮುಂದಿಡುವ ಕೆಲಸಮಾಡುತ್ತೇನೆಂದು ಅವರು ತಿಳಿಸಿದರು.

ಪಕ್ಷದ ಹಿರಿಯ ನಾಯಕರಾದ ಪಾಂಡುರಂಗನಾಯ್ಕ್, ವಿವಿಧ ಘಟಕಗಳ ಪ್ರಮುಖರಾದ ಸೋಮಶೇಖರ, ಪರಮೇಶ, ದಾದಪೀರ್ ,ಶಿವಕುಮಾರ, ರವಿ ಸೇರಿದಂತೆ ಹಲವರು ಗೋಷ್ಠಿಯಲ್ಲಿದ್ದರು.

  • ಹುಳ್ಳಿಪ್ರಕಾಶ, ಹಿರಿಯಪತ್ರಕರ್ತರು

LEAVE A REPLY

Please enter your comment!
Please enter your name here