ಹೈ ಕೋರ್ಟ್ ಎಎಸ್ಜಿಗಳಿಂದ “ಆಂಬುಲೆನ್ಸ್ ಗೆ ದಾರಿ ಬಿಡಿ, ಗಾಯಾಳುವಿಗೆ ಆಸ್ಪತ್ರೆಗೆ ಸೇರಿಸಿ” ಜಾಗೃತಿ ಓಟದ ಪೋಸ್ಟರ್ ಬಿಡುಗಡೆ

0
1462

ಬೆಂಗಳೂರು ದಿ: ಆಗಸ್ಟ್ 11 ರಂದು ಹೈ ಕೋರ್ಟ್ ನಲ್ಲಿ “ ಆಂಬುಲೆನ್ಸ್‌ಗೆ ದಾರಿ ಬಿಡಿ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ” ಜಾಗೃತಿ ಮ್ಯಾರಥಾನ್ ಓಟದ ಭಿತ್ತಿಪತ್ರವನ್ನ ( ಪೋಸ್ಟರ್ ) ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾರವರಾದ ಎಂ. ಬಿ. ನರಗುಂದ್, ಸಹಾಯಕ ಸಾಲಿಸಿಟರ್ ಜನರಲ್ ಆಫ್ ಇಂಡಿಯಾರವರಾದ ಹೆಚ್. ಶಾಂತಿ ಭೂಷಣ್, ಮಾಜಿ ಸಹಾಯಕ ಸಾಲಿಸಿಟರ್ ಜನರಲ್ ಆಫ್ ಇಂಡಿಯಾರವರಾದ ಶಶಿಕಾಂತ್ ರವರು ಬಿಡುಗಡೆಗೊಳಿಸಿದರು, 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ್ ಮಹೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪರವರು ಇದೇ ತಿಂಗಳು 15 ರಂದು ಸ್ವಾತಂತ್ರ್ಯ ದಿನದಂದು ಬೆಂಗಳೂರು ಮಹಾನಗರದಲ್ಲಿ “ಆಂಬುಲೆನ್ಸ್‌ಗೆ ದಾರಿ ಬಿಡಿ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ” ಕುರಿತು ಜಾಗೃತಿಗಾಗಿ ರಾಷ್ಟ್ರಧ್ವಜ ಹಿಡಿದು 21 ಕಿಲೋ ಮೀಟರ್ ಓಟವನ್ನು ಹಮ್ಮಿಕೊಂಡಿದ್ದರ ಜಾಗೃತಿ ಓಟದ ಭಿತ್ತಿಪತ್ರ ಮತ್ತು ಚಿನ್ನೆಯನ್ನು ಬಿಡುಗಡೆಗೊಳಿಸಿದರು

LEAVE A REPLY

Please enter your comment!
Please enter your name here