ಕೊಟ್ಟೂರೇಶ್ವರ ದೇವಸ್ಥಾನದ ಮೇಲೆ ಹಾರಾಡಿದ ರಾಷ್ಟ್ರಧ್ವಜ

0
237

ಕೊಟ್ಟೂರು:ಆಗಸ್ಟ್:14:-
ಪಟ್ಟಣದ ಬಹುತೇಕ ಮನೆಗಳ ಮೇಲೆ, ದೇವಸ್ಥಾನದ ಮೇಲೆ ದೇಶದ ತ್ರಿವರ್ಣ ಧ್ವಜ ಶನಿವಾರ ಬೆಳಗ್ಗಿನಿಂದಲೇ ಹಾರಾಡಿತು. ಹರ್ ಘರ್ ತಿರಂಗಾ ಅಭಿಯಾನ ಹಿನ್ನಲೆಯಲ್ಲಿ ಅನೇಕರು ಸ್ವ ಇಚ್ಛೆಯಿಂದ ಧ್ವಜ ಖರೀದಿಸಿದ್ದರು. ಬಿಜೆಪಿ, ಕಾಂಗ್ರೆಸ್ ಹಾಗೂ ಸಂಘಟನೆಯವರು ಅನೇಕ ಮನೆಗಳಿಗೆ ಉಚಿತವಾಗಿ ಧ್ವಜವನ್ನು ನೀಡಿ ಏರಿಸುವಂತೆ ಕೋರಿದ್ದರು. ಪಟ್ಟಣದ ಎಲ್ಲ ಸರಕಾರಿ ನೌಕರರು ತಮ್ಮ ಮನೆಗಳ ಮೇಲೆ ಧ್ವಜ ಹಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಂಭ್ರಮ ಹಂಚಿಕೊಂಡಿದ್ದರು.ಕಾರು, ಜೀಪ್, ಬೈಕ್‌ಗಳಲ್ಲಿ ಧ್ವಜ ಕಟ್ಟಿಕೊಂಡು ರಾಷ್ಟ್ರಾಭಿಮಾನ ಮೆರೆದರು. ಮನೆಗಳ ಮೇಲೆ ತ್ರಿವರ್ಣದ ರಾಷ್ಟ್ರಧ್ವಜ ಹಾರಾಡುತ್ತಿರುವುದು ನೋಡಲು ಅಂದವಾಗಿತ್ತು. ಅಲ್ಲದೇ ಎಲ್ಲ ಸರಕಾರಿ ಕಚೇರಿಗಳಲ್ಲಿ, ರೈಲ್ವೇ ನಿಲ್ದಾಣದಲ್ಲಿ, ಬ್ಯಾಂಕ್‌ಗಳಲ್ಲಿ ಸರಕಾರದ ಆದೇಶದಂತೆ ಬೆಳಗ್ಗೆ ಧ್ವಜಾರೋಹಣ ನಡೆಸ ಲಾಗಿತ್ತು. ಇಲ್ಲಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಮೇಲ್ಬಾಗದಲ್ಲಿ ಬೆಳಗ್ಗೆ ರಾಷ್ಟ್ರ ಧ್ವಜ ಏರಿಸ ಲಾಗಿತ್ತು. ಧರ್ಮಕರ್ತ ಸಿಎಚ್‌ಎಂ ಗಂಗಾಧರ ಹಾಗೂ ಅರ್ಚಕರ ಬಳಗ, ಕಚೇರಿ ಸಿಬ್ಬಂದಿ ಬೆಳಗ್ಗೆ ರಾಷ್ಟ್ರ ಧ್ವಜ ಏರಿಸಿ ನಮಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here