ಕ್ರೀಡೆ ಇಲ್ಲದ ಜೀವನ ಕೀಟಕ್ಕೆ ಸಮಾನ

0
517

ಕೆ.ಅಯ್ಯನಹಳ್ಳಿಯಲ್ಲಿ ನಾಗರಪಂಚಮಿ ಹಬ್ಬದ ಪ್ರಯುಕ್ತ ನಡೆದ ಷಟಲ್ ಕಾಕ್ ಟೂರ್ನ ಮೆಂಟ್ ಅಂತಿಮವಾಗಿ ಬಹಳ ಸಂಭ್ರಮ ಸಡಗರದಿಂದ ಮುಕ್ತಾಯವಾಯಿತು

ಇದಕ್ಕೆಲ್ಲಾ ಕಾರಣ ನಮ್ಮ ಮುಕ್ತ ಮನಸ್ಸಿನ ನೇರವಾದಿ ಕ್ರೀಡಾ ಅಭಿಮಾನಿ ಕ್ರೀಡಾ ಸ್ಫೂರ್ತಿ ಸುಗುಣವಂತ ಛಲ ಬಿಡದ ಹಠವಾದಿ, ಸಹಸ್ರ ಸಾವಿರ ಗೆಳೆಯರ ಸರದಾರ, ನೊಂದ ಮನಸ್ಸಿಗೆ ಧೈರ್ಯ ಹೇಳುವ ಧಣಿ, ಎಲ್ಲರ ಕಣ್ಮಣಿ, ಕಷ್ಟಗಳ ಸಹಿಸಿ ಕರ್ತವ್ಯವೇ ದೇವರು ಎಂದು ನಂಬಿ ಪಂಚಾಯತಿ ಯಲ್ಲಿ ಕರವಸೂಲಿಗಾರರು ಆಗಿರುವ ಎಂ.ಬಿ.ಪ್ರವೀಣ ಮತ್ತು ಗೆಳೆಯರ ಬಳಗಕ್ಕೆ ಧನ್ಯವಾದಗಳನ್ನು ತಿಳಿಸುತ್ತಾ

ಹಾಗೆಯೇ ಸಿಂಗಲ್ ಮತ್ತು ಡಬಲ್ ಪಂದ್ಯಗಳಲ್ಲಿ ನೂರಾರು ಯುವಕರು ಭಾಗವಹಿಸಿ ಅಂತಿಮವಾಗಿ ಮೂಗಪ್ಪ, ಪ್ರವೀಣ, ವೃಷಿ, ಅಪ್ಪು ಮತ್ತು ಗಂಗು ಜಯಶಾಲಿಗಳಾದರು
ಈ ಕ್ರೀಡೆಗೆ ಉತ್ತಮವಾಗಿ ಪ್ರೋತ್ಸಾಹ ನೀಡಿದ ಜನತೆಗೂ ಮತ್ತು ಈ ಪಂದ್ಯದ ಕೊಡುಗೆ ದಾನಿಗಳು ಮತ್ತು ಈ ಕ್ರೀಡೆಯನ್ನು ಬೆಳಸಿದ ಪ್ರವೀಣ, ಎಂ.ಜಿ ಮಂಜುನಾಥ ರವರಿಗೆ ಧನ್ಯವಾದಗಳು

ಅಯ್ಯನಹಳ್ಳಿಯಲ್ಲಿ ಈ ಕ್ರೀಡೆ ಇನ್ನು ಹೆಚ್ಚಿನ ಮಟ್ಟಕ್ಕೆ ಬೆಳೆಯಲಿ ಯುವ ಪ್ರತಿಭೆಗಳು ಸೃಷ್ಟಿಯಾಗಲಿ ಎನ್ನುವುದು ನನ್ನ ಆಶಯ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here