ಮೋಹನ್ ಕುಮಾರ್ ದಾನಪ್ಪರ ಜಾಗೃತಿ ಓಟದ ಪೋಸ್ಟರ್ ರಾಜ್ಯಪಾಲ ಟಿ ಸಿ ಗೆಹಲೋಟ್ ರಿಂದ ಬಿಡುಗಡೆ

0
346

ಬೆಂಗಳೂರು: ಆಗಸ್ಟ್ 29 ರಂದು ರಾಜ ಭವನದಲ್ಲಿ ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ “ಮತದಾನ ನಮ್ಮ ಹಕ್ಕು, ಮತದಾನ ನಮ್ಮ ಕರ್ತವ್ಯ” ಕುರಿತು ಕರ್ನಾಟಕ ಹೈ ಕೋರ್ಟ್ ನ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ಹಮ್ಮಿಕೊಂಡಿರುವ ಜಾಗೃತಿ ಮ್ಯಾರಥಾನ್ ಓಟದ ಭಿತ್ತಿಪತ್ರವನ್ನ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ರವರು ಬಿಡುಗಡೆಗೊಳಿಸಿದರು!

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 72 ನೇ ಜನ್ಮ ದಿನದ ಅಂಗವಾಗಿ ನವದೆಹಲಿಯಲ್ಲಿ “ಮತದಾನ ನಮ್ಮ ಹಕ್ಕು, ಮತದಾನ ನಮ್ಮ ಕರ್ತವ್ಯ” ದ ಕುರಿತು ರಾಷ್ಟ್ರ ಮಟ್ಟದಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಭವನದಿಂದ ಕೆಂಪು ಕೋಟೆವರೆಗೂ ತಡೆರಹಿತವಾಗಿ 3 ಗಂಟೆಗಳ ಕಾಲ ಮ್ಯಾರಥಾನ್ ಓಟದ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದರ ಭಿತ್ತಿ ಪತ್ರವನ್ನ ಬಿಡುಗಡೆಗೊಳಿಸಿ ಕರ್ನಾಟಕದ ವ್ಯಕ್ತಿಯೊಬ್ಬ ರಾಷ್ಟ್ರಮಟ್ಟದಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಈ ಪ್ರಯತ್ನ ಪ್ರಶಂಶನೀಯವೆಂದರು,

ಇದೆ ಸಂಧರ್ಭದಲ್ಲಿ ಮಾತನಾಡಿದ ಜಾಗೃತಿ ಓಟಗಾರ, ಹಾಗೂ ಹೈ ಕೋರ್ಟ್ ನ ಸಿಜಿಸಿ ಮೋಹನ್ ಕುಮಾರ್ ದಾನಪ್ಪನವರು ” ಯುವ ಸಮೂಹ ಸಾಮಾಜಿಕ ಜಾಲ ತಾಣದಲ್ಲಿ ಹೆಚ್ಚಿನ ಸಮಯ ಕಳೆಯುವುದರಿಂದ ಮತ್ತು ನಿರ್ಲಕ್ಷ್ಯ ಮನೋಭಾವನೆಯಿಂದ ನಾವು ಮಾಡಬೇಕಾದ ಕರ್ತವ್ಯಗಳ ಮರೆತಿದ್ದು ಆ ಕುರಿತು ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ” ಎಂದರು!

LEAVE A REPLY

Please enter your comment!
Please enter your name here