ರಾಗಿ ಉಂಡವ ನಿರೋಗಿ,ರಾಗಿ ಮಹತ್ವ ಅರಿಯಿರಿ; ಕ್ಷೇತ್ರ ಆರೋ‌ಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
342

ಸಂಡೂರು: ಸೆ: 12: ತಾಲೂಕಿನ ಹಳೆ ಮಾದಾಪುರ ಗ್ರಾಮದ ಎರಡನೇ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಹಕಾರದಲ್ಲಿ “ರಾಗಿ ಮಹತ್ವ ತಿಳಿಸುವ” ಕುರಿತು ಪೌಷ್ಟಿಕ ಆಹಾರ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,

ಕಾರ್ಯಕ್ರಮ ಕುರಿತು ಕ್ಷೇತ್ರ ಆರೋ‌ಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ರಾಗಿ ಊಟ ಮಾಡಿದವನಿಗೆ ರೋಗಬಾರದು, ರಾಗಿಯಲ್ಲಿ ಪ್ರೋಟೀನ್, ಕೊಬ್ಬಿನಾಂಶ, ಪಿಷ್ಟ, ಖನಿಜಾಂಶಗಳು, ಕ್ಯಾಲ್ಸಿಯಂ, ನಾರಿನಾಂಶ,ಕಾರ್ಬೋಹೈಡ್ರೇಟ್ ಗಳು ಹೊಂದಿದ್ದು, ಜೀರ್ಣ ಕ್ರಿಯೆಗೆ ಸಹಕಾರಿಯಾಗಿದ್ದು,ಮಧುಮೇಹ ರೋಗಿಗಳಿಗೆ ಉತ್ತಮ ಆಹಾರವಾಗಿದ್ದು, ಅಮಿನೋ ಆಮ್ಲ ಇದ್ದು,ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ,ಲಿವರ್ ನ ಆರೋಗ್ಯಕ್ಕೂ ಅನುಕೂಲ,ರಾಗಿಯಲ್ಲಿ ಐರನ್ ಅಂಶ ಅಧಿಕವಾಗಿದ್ದು ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚುಮಾಡಲಿದ್ದು,ಖಿನ್ನತೆ ನಿವಾರಣೆಗೆ ಸಹಕಾರಿಯಾಗಿದೆ,

500 ವರ್ಷಗಳ ಹಿಂದೆ ಶ್ರೀ ಪುರಂದರದಾಸರು ಆಗಿನ ಕಾಲದಲ್ಲಿ ರಾಗಿ ಮಹತ್ವ ಸಾರಿದ್ದು, ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ, ರಾಗಿ ತಿಂದು ಯೋಗ್ಯರಾಗಿ,ಭೋಗ್ಯರಾಗಿ,ಭಾಗ್ಯವಂತರಾಗಿ ಎಂದು ಹಾಡಿದ್ದಾರೆ, ರಾಗಿಯಿಂದ ಗಂಜಿ,ಮುದ್ದೆ,ರೊಟ್ಟಿ,ದೋಸೆ,ಬೆಸನ್ ಉಂಡಿ,ವಾಡಪ್ಪಿ ಇತರೆ ನಾನಾ ತರದಲ್ಲಿ ಅಡುಗೆ ತಯಾರಿಸಿ ಊಟ ಮಾಡಬಹುದು, ರಾಗಿಯಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಇದ್ದು, ಹೊಟ್ಟೆ ತುಂಬಿದ ಹಾಗೆ ಭಾಸವಾಗಿ ಬೊಜ್ಜು ನಿವಾರಿಸಲು ಸಹಕಾರಿಯಾಗಿದೆ, ದೇಹಕ್ಕೆ ತಂಪು,ಸದೃಡತೆ,ನೆನಪಿನ ಶಕ್ತಿ ಹೆಚ್ಚಿಸಲು,ನರಪ್ರೇಕ್ಷಕ ಸಮತೋಲನಕ್ಕೆ, ಥೈರಾಡ್ ನಿಯಂತ್ರಣಕ್ಕೆ ಸಹಕಾರಿಯಾಗಿದ್ದು, ಮಕ್ಕಳಿಗೆ,ಕಿಶೋರ ವಯಸ್ಸಿಗೆ,ಯುವ ವಯಸ್ಸಿನವರಿಗೆ,ಮದ್ಯ ವಯಸ್ಸಿನವರಿಗೆ, ಹಿರಿಯರಿಗೆ ಹೀಗೆ ಎಲ್ಲರಿಗೂ ರಾಗಿ ಉತ್ತಮ ಆಹಾರವಾಗಿದ್ದು,ರಾಗಿ ಮುದ್ದೆ ಸೊಪ್ಪು ಸಾರು, ಭಾನುವಾರದ ಬಾಡುಟಕ್ಕೆ “ರಾಗಿ ಮುದ್ದೆ ನಾಟಿ ಕೋಳಿ ಸಾರು” ಇದ್ದಕ್ಕೆ ಸಾಟಿ ಉಂಟೆ ಎನ್ನವಂತೆ ರಾಗಿ ಮಹತ್ವ ಜನಪ್ರಿಯವಾಗಿದೆ ಎಂದು ತಿಳಿಸಿದರು,

ಕಾರ್ಯಕ್ರಮವನ್ನು ಆಶಾ ಕಾರ್ಯಕರ್ತೆ ಸರಸ್ವತಿ ನಡೆಸಿ ಕೊಟ್ಟರು,
ಈ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಸುಮಂಗಳಮ್ಮ,ಬಾನುಭೀ, ಹೆಚ್.ಐ.ಒ ಮರಿಬಸಮ್ಮ,ಸಿ.ಹೆಚ್.ಒ ಎರ್ರಿಸ್ವಾಮಿ, ಅಂಗನವಾಡಿ ಕಾರ್ಯಕರ್ತೆ ಕೋಮಲ, ರೇಷ್ಮಾ, ಆಶಾ ಕಾರ್ಯಕರ್ತೆ ಅಂಜಿನಮ್ಮ, ಗಾಯತ್ರಿ, ಗರ್ಭಿಣಿಯರಾದ ಸಾನಿಯಾ, ಸುಶೀಲಾ, ಸೈದಾಭೀ,ರಜಿಯಾ ಬೇಗಂ, ಹಸೀನಾ,ಶಾಹಿನಾ,ಖಾಜಬುನ್ನಿ,ಲಾಲ್ನ್ ಭೀ,ಮಹಂಕಾಳಿ,ಚಾಂದ್‌ಭೀ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here