ಇಂಡಿಯಾ ಸ್ಕಿಲ್ ಕಾಂಪಿಟೀಷನ್ ಕರ್ನಾಟಕ 2023 ರಲ್ಲಿ ಭಾಗವಹಿಸಲು ನೊಂದಣಿಗೆ ಆಹ್ವಾನ

0
136

ಬಳ್ಳಾರಿ,ಅ.6: ಫ್ರಾನ್ಸ್‍ನ ಲಿಯಾನ್‍ನಲ್ಲಿ “ವಲ್ರ್ಡ್ ಸ್ಕಿಲ್ ಕಾಂಪಿಟೀಷನ್ 2024” ಸೆಪ್ಟಂಬರ್ 2024ರಲ್ಲಿ ನಡೆಯಲಿದ್ದು, ಕರ್ನಾಟಕ ಕೌಶಲ್ಯಭಿವೃದ್ಧಿ ನಿಗಮ ವತಿಯಿಂದ “ಇಂಡಿಯಾ ಸ್ಕಿಲ್ ಕಾಂಪಿಟೀಷನ್ 2023” ಏರ್ಪಡಿಸಿದ್ದು, ವಲ್ರ್ಡ್ ಸ್ಕಿಲ್ ಕಾಂಪಿಟೀಷನ್ 2024/ಇಂಡಿಯಾ ಸ್ಕಿಲ್ ಕಾಂಪಿಟೀಷನ್ 2023 ನಲ್ಲಿ ಭಾಗವಹಿಸಲು ಅರ್ಹರಿಂದ ನೊಂದಣಿಗೆ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.

ಅರ್ಹತೆಗಳು: ಅಭ್ಯರ್ಥಿ/ವಿದ್ಯಾರ್ಥಿಗಳು 55 ಕೌಶಲ್ಯಗಳಲ್ಲಿಯೂ ಭಾಗವಹಿಸಬಹುದಾಗಿದೆ.
45 ಕೌಶಲ್ಯಗಳಲ್ಲಿ ಭಾಗವಹಿಸುವ ಅಭ್ಯರ್ಥಿ/ವಿದ್ಯಾರ್ಥಿಗಳು 01.01.2002ರಂದು ಅಥವಾ ನಂತರದಲ್ಲಿ ಜನಿಸಿದವರಾಗಿರಬೇಕು. 10 ಕೌಶಲ್ಯಗಳಲ್ಲಿ ಭಾಗವಹಿಸುವ ಅಭ್ಯರ್ಥಿ/ವಿದ್ಯಾರ್ಥಿಗಳು 01.01.1999ರಂದು ಅಥವಾ ನಂತರದಲ್ಲಿ ಜನಿಸಿದವರಾಗಿರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿ/ವಿದ್ಯಾರ್ಥಿಗಳು hಣಣಠಿs://https://www.kaushalkar.com/app/world-skill-registrationನಲ್ಲಿ ನೊಂದಣಿ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಅಥವಾ ಮೊ.8217607423, 9113505020ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here